Asianet Suvarna News Asianet Suvarna News

ಪರೀಕ್ಷೆಗೂ ಬಂತು ಫೇಸ್‌ ರೆಕಗ್ನಿಶನ್‌!

ಮುಖಚರ್ಯೆ ಪತ್ತೆಹಚ್ಚುವ (ಫೇಶಿಯಲ್‌ ರೆಕಗ್ನಿಷನ್‌) ತಂತ್ರಜ್ಞಾನವನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌)ವೂ ಅಳವಡಿಸಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. 

Face recognition For Exam in Rajiv Gandhi University
Author
Bengaluru, First Published Mar 2, 2020, 7:20 AM IST

ಬೆಂಗಳೂರು [ಮಾ.02]:  ವಿಮಾನ ನಿಲ್ದಾಣ, ಮಾಲ್‌ ಮುಂತಾದವುಗಳಲ್ಲಿ ಬಳಸುತ್ತಿದ್ದ ಮುಖಚರ್ಯೆ ಪತ್ತೆಹಚ್ಚುವ (ಫೇಶಿಯಲ್‌ ರೆಕಗ್ನಿಷನ್‌) ತಂತ್ರಜ್ಞಾನವನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌)ವೂ ಅಳವಡಿಸಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ. ಇಲ್ಲಿಯವರೆಗೆ ಕೇವಲ ಭದ್ರತಾ ವಲಯಗಳಿಗೆ ಸೀಮಿತವಾಗಿದ್ದ ಈ ತಂತ್ರಜ್ಞಾನ ಇದೀಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಂತಾಗಿದೆ.

ಮುಂದಿನ ಶೈಕ್ಷಣಿಕ ವರ್ಷಾರಂಭದಿಂದ ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮುಖಚರ್ಯೆ ಪತ್ತೆಹಚ್ಚುವ (ಫೇಶಿಯಲ್‌ ರೆಕಗ್ನಿಷನ್‌) ತಂತ್ರಾಂಶವನ್ನು ರಾಜೀವ್‌ ಗಾಂಧಿ ಆರೋಗ್ಯ ವಿವಿ ಅಳವಡಿಸಿಕೊಳ್ಳುತ್ತಿದ್ದು, ಇಂತಹ ತಂತ್ರಾಂಶ ಅಳವಡಿಸಿಕೊಳ್ಳುತ್ತಿರುವ ಮೊದಲ ವಿಶ್ವವಿದ್ಯಾಲಯವಾಗಿದೆ. ಇದರಿಂದ ನಕಲಿ ವಿದ್ಯಾರ್ಥಿಗಳನ್ನು ತಡೆಗಟ್ಟುವುದು, ಪರೀಕ್ಷೆಗಳಲ್ಲಿ ಬೇರೊಬ್ಬ ವ್ಯಕ್ತಿ ಹಾಜರಾಗುವುದನ್ನು ತಡೆಗಟ್ಟುವುದೂ ಸೇರಿದಂತೆ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳು ಅನುಸರಿಸುವ ಅಡ್ಡದಾರಿಗಳಿಗೆ ಕಡಿವಾಣ ಬೀಳಲಿದೆ.

1279 ದ್ವಿತೀಯ ದರ್ಜೆ ಹುದ್ದೆ ಭರ್ತಿಗೆ KPSC ಅಧಿಸೂಚನೆ ಪ್ರಕಟ...

ಈ ತಂತ್ರಜ್ಞಾನದಿಂದಾಗಿ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಗೆ ಕಾಲಿಡುತ್ತಿದ್ದಂತೆ ನಕಲಿ ವಿದ್ಯಾರ್ಥಿಯಾಗಿದ್ದರೆ ಗುರುತು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಯೊಬ್ಬನ ಹೆಸರು ಹೇಳಿಕೊಂಡು ಇತರೆ ಯಾವುದೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಕಲಿ ವಿದ್ಯಾರ್ಥಿ ಪಾಲ್ಗೊಂಡಿದ್ದರೆ ಅದಕ್ಕೆ ಕಡಿವಾಣ ಹಾಕಲು ಈ ತಂತ್ರಜ್ಞಾನ ನೆರವಿಗೆ ಬರಲಿದೆ.

ಈ ಸಂಬಂಧ ಮಾತನಾಡಿದ ರಾಜೀವ ಗಾಂಧಿ ವಿವಿ ಕುಲಪತಿ ಡಾ.ಎಸ್‌. ಸಚ್ಚಿದಾನಂದ, ವಿಶ್ವವಿದ್ಯಾಲಯವನ್ನು ಶೈಕ್ಷಣಿಕವಾಗಿ ಮುಂದೆ ತರಲು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಡಿಜಿಟಲ್‌ ಮೌಲ್ಯಮಾಪನ ಅಳವಡಿಸಿಕೊಳ್ಳಲಾಗಿದೆ. ಇದೀಗ ಫೇಶಿಯಲ್‌ ರೆಕಗ್ನಿಷನ್‌ ಅಳವಡಿಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios