29000 ಕೋಟಿ ರು.ನಿಂದ 32000 ಕೋಟಿ ರು.ಗೆ ಏರಿಕೆ, ಫೆಬ್ರವರಿವರೆಗೆ 27000 ಕೋಟಿ ಸಂಗ್ರಹ ಹಿನ್ನೆಲೆ ಹೆಚ್ಚಳ. 

ಬೆಂಗಳೂರು(ಮಾ.02): ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿಸಿದ್ದ ಅಬಕಾರಿ ತೆರಿಗೆ ಸಂಗ್ರಹದ ಅಂದಾಜು ಮೊತ್ತವನ್ನು, ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೊಂದು ತಿಂಗಳಷ್ಟೇ ಬಾಕಿ ಇರುವಾಗ 3 ಸಾವಿರ ಕೋಟಿ ರು.ಗಳಷ್ಟುಏರಿಕೆ ಮಾಡಲಾಗಿದೆ.

2022-23ನೇ ಸಾಲಿನಲ್ಲಿ ಸುಮಾರು 29,000 ಕೋಟಿ ರು.ಗಳಷ್ಟುಅಬಕಾರಿ ತೆರಿಗೆ ಸಂಗ್ರಹವಾಗಬಹುದೆಂದು ಸರ್ಕಾರ ಅಂದಾಜಿಸಿತ್ತು. ಫೆಬ್ರವರಿ ತಿಂಗಳ ಅಂತ್ಯದ ವರೆಗೂ ಇದೇ ನಿರೀಕ್ಷೆಯಲ್ಲೇ ಇದ್ದ ಇಲಾಖೆಯು ಈಗ ಈ ಅಂದಾಜು ನಿರೀಕ್ಷೆಯನ್ನು 32 ಸಾವಿರ ಕೋಟಿ ರು.ಗಳಿಗೆ ಪರಿಷ್ಕರಿಸಿದೆ. ಅಂದರೆ ನಿರೀಕ್ಷೆಗಿಂತ ಮೂರು ಸಾವಿರ ಕೋಟಿ ರು.ಗಳಷ್ಟುಹೆಚ್ಚು ತೆರಿಗೆಯ ಲೆಕ್ಕಾಚಾರ ಹಾಕಿದೆ. ಇದಕ್ಕೆ ಕಾರಣ ಈಗಾಗಲೇ ಫೆಬ್ರವರಿ ಅಂತ್ಯದ ವರೆಗೆ ಸಂಗ್ರಹವಾದ ತೆರಿಗೆ ಮೊತ್ತ 27 ಸಾವಿರ ಕೋಟಿ ರು. ದಾಟಿದೆ. ಮಾಚ್‌ರ್‍ ತಿಂಗಳ ಅಂತ್ಯಕ್ಕೆ ಇದು 32 ಸಾವಿರ ಕೋಟಿ ರು. ತಲುಪುವ ಅಂದಾಜು ಮಾಡಲಾಗಿದೆ. ಕಾರಣ, ಪ್ರತೀ ವರ್ಷ ಕೊನೆಯ ತಿಂಗಳು ಬಾಕಿ ತೆರಿಗೆ ವಸೂಲಿ ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಉಳಿದ ತಿಂಗಳಲ್ಲಿ ಸಂಗ್ರಹವಾದ ತೆರಿಗೆ ಮೊತ್ತಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಈ ಲೆಕ್ಕಾಚಾರದ ಮೇಲೆ ತೆರಿಗೆ ಗುರಿಯ ಮೊತ್ತದ ಪರಿಷ್ಕರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಳ್ಳಭಟ್ಟಿ ದಂಧೆಗಾಗಿ ಅಬಕಾರಿ ಅಧಿಕಾರಿ ಕೊಲೆ ಮಾಡಿದ್ದ ರಮೇಶ್ ಜಾರಕಿಹೊಳಿ: ಎಂ.ಲಕ್ಷ್ಮಣ್‌ ಆರೋಪ

ಕಳೆದ ಕೋವಿಡ್‌ ಸಾಲಿನಲ್ಲಿ ಕೂಡ ಸರ್ಕಾರ 24,580 ಕೋಟಿ ರು. ಅಬಕಾರಿ ತೆರಿಗೆ ಸಂಗ್ರಹ ನಿರೀಕ್ಷಿಸಿತ್ತಾದರೂ ಕೊನೆಯಲ್ಲಿ 26,377 ಕೋಟಿ ರು. ಸಂಗ್ರಹವಾಗಿತ್ತು. ಈ ವರ್ಷ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಕಳೆ ವರ್ಷಕ್ಕಿಂತ ಹೆಚ್ಚು 27,032 ಕೋಟಿ ರು.ತೆರಿಗೆ ಸಂಗ್ರಹವಾಗಿದೆ.