ಪ್ರಸ್ತುತ ರಾಜ್ಯದಲ್ಲಿ 12,614 ಸನ್ನದುಗಳಿವೆ. ಈ ಪೈಕಿ 3635 ಬಾರ್ ಅಂಡ್ ರೆಸ್ಟೋರೆಂಟ್, 3988-ಸಿಎಲ್-2 ಸನ್ನದು, 1040 ಸಿಎಲ್11ಸಿ ಮದ್ಯದಂಗಡಿಗಳಿರುತ್ತವೆ ಎಂದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ
ವಿಧಾನ ಪರಿಷತ್(ಜು.14): ಗ್ರಾಮೀಣ ಪ್ರದೇಶದಲ್ಲಿನ ಬಾರ್ ಹಾಗೂ ವೈನ್ ಶಾಪ್‌ಗಳನ್ನು ನಗರ ಪ್ರದೇಶಗಳಿಗೆ ಸ್ಥಳಾಂತರಿಸಲು ಅವಕಾಶ ಇರುವುದಿಲ್ಲ, ಆದರೆ ನಗರ ಪ್ರದೇಶದಲ್ಲಿ ಬಾರ್‌ಗಳನ್ನು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ಸಿನ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಬಾರ್ ಹಾಗೂ ವೈನ್ ಶಾಪ್ ಆರಂಭಿಸುವ ಲೈಸೆನ್ಸ್ ಪಡೆದು ನಂತರ ಅಲ್ಲಿ ಹೆಚ್ಚು ಲಾಭ ಆಗುವುದಿಲ್ಲ ಎಂದು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡುವಂತೆ ಕೋರುವವರ ಸಂಖ್ಯೆ ಹೆಚ್ಚಾಗುತ್ತದೆ, ಹಾಗಾಗಿ ಅದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಸ್ಥಳಾಂತರ ಮಾಡಲು ಅವಕಾಶವಿದೆ ಎಂದರು.
ಜುಲೈ 20ರಿಂದ ಮದ್ಯದ ದರ ದುಬಾರಿ: ಬ್ರ್ಯಾಂಡ್‌ವಾರು ಬೆಲೆ ಏರಿಕೆ ವಿವರ ಇಲ್ಲಿದೆ...
ಪ್ರಸ್ತುತ ರಾಜ್ಯದಲ್ಲಿ 12,614 ಸನ್ನದುಗಳಿವೆ. ಈ ಪೈಕಿ 3635 ಬಾರ್ ಅಂಡ್ ರೆಸ್ಟೋರೆಂಟ್, 3988-ಸಿಎಲ್-2 ಸನ್ನದು, 1040 ಸಿಎಲ್11ಸಿ ಮದ್ಯದಂಗಡಿಗಳಿರುತ್ತವೆ ಎಂದರು.
2022-23ನೇ ಸಾಲಿನಲ್ಲಿ ಸನ್ನದು ಶುಲ್ಕ, ಹೆಚ್ಚುವರಿ ಶುಲ್ಕ, ದಂಡ ಮತ್ತು ಮುಟ್ಟುಗೋಲು ರೂಪದಲ್ಲಿ 679.38 ಕೋಟಿ ರು. ಅಬಕಾರಿ ರಾಜಸ್ವ ಸಂಗ್ರಹವಾಗಿರುತ್ತದೆ ಎಂದು ಅವರು ಉತ್ತರಿಸಿದರು.
ಸರ್ಕಾರದ ಮಾರ್ಗಸೂಚಿಯ ಪ್ರಕಾರ ಎಂಎಸ್‌ಐಎಲ್ ಮಳಿಗೆಗೆ ಸನ್ನದು ಮಂಜೂರು ಮಾಡಲಾಗುವುದು. 2009ರಲ್ಲಿ 463ಸನ್ನದು ಹಂಚಿಕೆ ಮಾಡಲಾಗಿದೆ. 2016ರಲ್ಲಿ ಹೆಚ್ಚುವರಿಯಾಗಿ 900 ಸನ್ನದುಗಳನ್ನು ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಬಾಕಿ ಉಳಿದಿರುವ 441 ಸನ್ನದುಗಳನ್ನು ವಿವಿಧ ಷರತ್ತಿನ ಮೇಲೆ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.
