Asianet Suvarna News Asianet Suvarna News

ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಪ್ರಾಥಮಿಕ ಡೇರಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಕರ್ನಾಟಕದ ನಂದಿನಿ, ಗುಜರಾತ್‌ನ ಅಮುಲ್‌ ಸಂಸ್ಥೆ ಜತೆಗೂಡಿದರೆ ಮುಂದಿನ 3 ವರ್ಷದಲ್ಲಿ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಪ್ರಾಥಮಿಕ ಡೇರಿ ಸ್ಥಾಪಿಸಲು ಆದ್ಯತೆ ನೀಡಲಾಗುವುದು. ಎನ್‌ಡಿಡಿ ಮೂಲಕ ಪ್ರತಿ ಪಂಚಾಯ್ತಿಯಲ್ಲಿ ಪ್ರಾಥಮಿಕ ಡೇರಿ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್‌ ಶಾ ಹೇಳಿದರು.
 

every panchayat will have one primary dairy within 3 years says union minister amit shah gvd
Author
First Published Dec 31, 2022, 2:00 AM IST

ಮದ್ದೂರು (ಡಿ.31): ಕರ್ನಾಟಕದ ನಂದಿನಿ, ಗುಜರಾತ್‌ನ ಅಮುಲ್‌ ಸಂಸ್ಥೆ ಜತೆಗೂಡಿದರೆ ಮುಂದಿನ 3 ವರ್ಷದಲ್ಲಿ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಪ್ರಾಥಮಿಕ ಡೇರಿ ಸ್ಥಾಪಿಸಲು ಆದ್ಯತೆ ನೀಡಲಾಗುವುದು. ಎನ್‌ಡಿಡಿ ಮೂಲಕ ಪ್ರತಿ ಪಂಚಾಯ್ತಿಯಲ್ಲಿ ಪ್ರಾಥಮಿಕ ಡೇರಿ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್‌ ಶಾ ಹೇಳಿದರು.

ತಾಲೂಕಿನ ಗೆಜ್ಜಲಗೆರೆಯಲ್ಲಿ ಶುಕ್ರವಾರ .260 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೆಗಾ ಡೇರಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಹೈನೋದ್ಯಮದಲ್ಲಿ ಕರ್ನಾಟಕದ ನಂದಿನಿ ಹಾಗೂ ಗುಜರಾತ್‌ನ ಅಮುಲ್‌ ಸಂಸ್ಥೆಗಳು ಒಗ್ಗೂಡಿದರೆ ದೇಶದಲ್ಲಿ ಕ್ಷೀರ ಕ್ರಾಂತಿಯೊಂದಿಗೆ ವಿದೇಶಕ್ಕೆ ರಫ್ತು ಮಾಡಲು ಸಹಕಾರಿಯಾಗುತ್ತದೆ. ಕರ್ನಾಟಕದಲ್ಲಿ 2 ಲಕ್ಷ ನಂದಿನಿ ಮತ್ತು ಅಮುಲ್‌ ಡೇರಿಗಳನ್ನು ಸ್ಥಾಪಿಸಲಾಗುವುದು. ಇದರಿಂದ ಡೇರಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಹೈನುಗಾರರ ಆದಾಯ ಹೆಚ್ಚಿಸಬಹುದು ಎಂದರು.

ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಬರಮಾಡಿಕೊಂಡ ಸಿಎಂ ಬೊಮ್ಮಾಯಿ

ಕರ್ನಾಟಕದ ನಂದಿನಿಯಷ್ಟೇ ಗುಜರಾತ್‌ನ ಅಮುಲ್‌ ಸಹ ಹೈನೋದ್ಯಮದ ಪ್ರಗತಿಗೆ ಕೊಡುಗೆ ನೀಡಿದೆ. 1975ರಲ್ಲಿ ಕೇವಲ 66 ಲೀಟರ್‌ ಹಾಲು ಸಂಸ್ಕರಣೆ ಮಾಡುತ್ತಿದ್ದ ನಂದಿನಿ, ಇಂದು 82 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮಾಡುತ್ತಿದೆ. ಗುಜರಾತ್‌ನ ಅಮುಲ್‌, ಕ್ಷೀರ ಕ್ರಾಂತಿಯೊಂದಿಗೆ ಇಂದು 36 ಲಕ್ಷ ಮಹಿಳೆಯರ ಖಾತೆಗೆ ನೇರವಾಗಿ .66 ಕೋಟಿ ಜಮೆ ಮಾಡುತ್ತಿದೆ. .260 ಕೋಟಿ ವೆಚ್ಚದ ಈ ಮೇಗಾ ಡೇರಿಯಲ್ಲಿ ನಿತ್ಯ 10 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮಾಡುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಇದನ್ನು 14 ಲಕ್ಷ ಲೀಟರ್‌ಗೆ ಹೆಚ್ಚಿಸುವ ಚಿಂತನೆಯಿದೆ ಎಂದರು.

ರಾಜ್ಯದ 15,210 ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 22 ಲಕ್ಷ ರೈತರು 26 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ನೆರವಿಗೆ ನಿಂತಿದ್ದು, 26 ಲಕ್ಷ ರೈತರಿಗೆ ತಿಂಗಳಿಗೆ .28 ಕೋಟಿ ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ಇದರಿಂದ ಕೇವಲ 4 ಕೋಟಿ ಇದ್ದ ರಾಜ್ಯದ ಹಾಲು ಒಕ್ಕೂಟಗಳ ವಾರ್ಷಿಕ ವಹಿವಾಟು ಇಂದು 25 ಸಾವಿರ ಕೋಟಿ ರು.ಗೆ ದಾಟಿದೆ. ಈ ವಹಿವಾಟಿನ ಶೇಕಡಾ 80 ರಷ್ಟುಹಣ ರೈತರ ಕೈ ಸೇರುತ್ತಿರುವುದು ಶ್ಲಾಘನೀಯ ಎಂದರು. ಪ್ರಧಾನಿ ಮೋದಿಯವರು ಸಹಕಾರ ಇಲಾಖೆಯನ್ನು ಕೃಷಿ ಇಲಾಖೆಯಿಂದ ಪ್ರತ್ಯೇಕ ಮಾಡುವ ಮೂಲಕ ರೈತರನ್ನು ಆರ್ಥಿಕವಾಗಿ ಸಧೃಡಗೊಳಿಸಿದ್ದಾರೆ. ಕರ್ನಾಟಕದಲ್ಲಿ ಹೈನುಗಾರಿಕೆ ಮೂಲಕ ಈ ಭಾಗದ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಪಂಚರತ್ನ ಯಾತ್ರೆ ಸುನಾಮಿ ತಡೆಯಲು ಅಮಿತ್‌ ಶಾ ಕರೆಸ್ತಿದ್ದಾರೆ: ಎಚ್‌.ಡಿ.ಕುಮಾರಸ್ವಾಮಿ

ಏನಿದು ಪ್ರಾಥಮಿಕ ಡೇರಿ?: ಹಳ್ಳಿಗಳಲ್ಲಿ ಚಿಕ್ಕ, ಚಿಕ್ಕ ಸಹಕಾರ ಸಂಘಗಳಿದ್ದು, ಅವುಗಳ ಮೂಲಕ ಹಾಲನ್ನು ಸಂಗ್ರಹಿಸಲಾಗುತ್ತದೆ. ಆದರೆ, ಎಷ್ಟೋ ಹಳ್ಳಿಗಳಲ್ಲಿ ತಕ್ಷಣವೇ ಈ ಹಾಲನ್ನು ನಂದಿನಿ, ಮತ್ತಿತರ ಮೆಗಾ ಡೇರಿಗಳಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹಾಲು ಬೇಗನೆ ಹಾಳಾಗುತ್ತದೆ. ಈ ಪ್ರಾಥಮಿಕ ಡೇರಿ ಮೂಲಕ ಹಳ್ಳಿಗಳಲ್ಲಿ ಚಿಕ್ಕ, ಚಿಕ್ಕ ಚಿಲ್ಲಿಂಗ್‌ ಸಂಸ್ಕರಣಾ ಘಟಕ (ಸಣ್ಣ ಪ್ರಮಾಣದ ಫ್ರಿಜ್‌) ಸ್ಥಾಪಿಸಿ, ಅಲ್ಲಿ ಹಾಲನ್ನು ತಕ್ಷಣಕ್ಕೆ ಕೆಡದಂತೆ ಸಂಸ್ಕರಿಸಲಾಗುವುದು. ಬಳಿಕ, ಆ ಹಾಲನ್ನು ಮೆಗಾ ಡೇರಿಗಳಿಗೆ ತಲುಪಿಸಲಾಗುವುದು.

Follow Us:
Download App:
  • android
  • ios