ಶಿವಮೂರ್ತಿ ಮುರುಘಾ ಶರಣರ ಜನ್ಮದಿನ ಸಮಾನತಾ ದಿನವಾಗಿ ಆಚರಣೆ: ಬೊಮ್ಮಾಯಿ ಘೋಷಣೆ
ಏಪ್ರಿಲ್ 11 ಅನ್ನು 'ಸಮಾನತೆ ದಿನ'ವಾಗಿ ಆಚರಣೆ
ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಬರುವ ವರ್ಷದಿಂದ ಸರ್ಕಾರದಿಂದ ಶರಣರ ಜನ್ಮದಿನಾಚರಣೆಯನ್ನು ‘ಸಮಾನತೆ ದಿನ’ವನ್ನಾಗಿ ಆಚರಣೆ
ಬೆಂಗಳೂರು, (ಏ.11): ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಜನ್ಮ ದಿನವಾದ (Dr shivamurthy Murugha Sharanaru Birthday) ಏ.11 ರಂದು ರಾಜ್ಯ ಸಮಾನತಾ ದಿನಾಚರಣೆಎಂದು ಆಚರಣೆ ಮಾಡಲಾಗುವುದು ಎಂದು ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಬರುವ ವರ್ಷದಿಂದ ಸರ್ಕಾರದಿಂದ ಶರಣರ ಜನ್ಮದಿನಾಚರಣೆಯನ್ನು ‘ಸಮಾನತೆ ದಿನ’ವನ್ನಾಗಿ (Equality Day ) ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು(ಸೋಮವಾರ) ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾನತೆ ದಿನದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ನಾಡಿನಲ್ಲಿ 12ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆ ಕ್ರಾಂತಿ ಮಾಡಿದ್ದಾರೆ. ಅದೇ ರೀತಿ 21ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಯನ್ನು ಮಾಡುತ್ತಿರುವ ಮುರುಘಾ ಮಠದ ಶರಣರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕೇಸರಿ, ಖಾವಿ ಧರಿಸಿ ಕೋಳಿ ಕೊಯ್ಯಬೇಡಿ: ಸ್ವಾಮೀಜಿಗಳಿಗೆ ಕಾಂಗ್ರೆಸ್ ನಾಯಕನ ಮನವಿ
ಒಂದು ಕಾಲದಲ್ಲಿ ಮೈಸೂರು ಅರಸರಿಗೆ ನೆರವು ನೀಡಿದ್ದ ಮುರುಘಾ ಮಠದ ಭೌತಿಕ ಆಸ್ತಿಯ ಜತೆಗೆ ಸಮಾನತೆಯ ಕ್ರಾಂತಿ ಸಾರುವ ಮೂಲಕ ಆಧ್ಯಾತ್ಮಿಕ ಆಸ್ತಿ ಹೆಚ್ಚಳ ಮಾಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ. 2019ರಲ್ಲಿ ಆಯೋಜಿಸಿದ್ದ ಅಸಂಖ್ಯ ಗಣಮೇಳ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅವರ ಜನ್ಮ ದಿನವನ್ನು ಸರ್ಕಾರದಿಂದ ಇನ್ನುಮುಂದೆ ಸಮಾನತಾ ದಿನವೆಂದು ಆಚರಣೆ ಮಾಡಲಾಗುವುದು ಎಂದು ಘೋಷಿಸಿದರು.
ಜನವರಿ 21ನ್ನು 'ದಾಸೋಹ' ದಿನ
ತ್ರಿವಿಧ ದಾಸೋಹಿ ಸಿದ್ಧಗಂಗಾ ಶಿವಕುಮಾರ್ ಸ್ವಾಮೀಜಿಯವರು ಲಿಂಗೈಕ್ಯರಾಗಿರುವ ಜನವರಿ 21ನ್ನು 'ದಾಸೋಹ' ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸುತ್ತೋಲೆ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಂ. ರಾಜು ಇಂದು (ಸೆ.03) ಸುತ್ತೋಲೆ ಹೊರಡಿಸಿದ್ದು, ದಾಸೋಹ ದಿನದ ರೂಪುರೇಷೆಗಳನ್ನು ತಯಾರಿಸಿ ಕಾರ್ಯಕ್ರಮ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಸಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳು ತಮ್ಮನ್ನು ತಾವು ತೊಡಗಿಸಿಕೊಂಡು ಲಿಂಗೈಕ್ಯರಾಗಿದ್ದರು.ಈ ಅಭೂತಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ , ಶ್ರೀಗಳು ಲಿಂಗೈಕ್ಯರಾಗಿದ ದಿನವನ್ನು ಅಂದರೆ ಜನವರಿ 21ರಂದು ಸರ್ಕಾರದ ವತಿಯಿಂದ 'ದಾಸೋಹ ದಿನ'ವೆಂದು ಆಚರಿಸುವಂತೆ ಈ ಮೂಲಕ ತಿಳಿಸಲಾಗಿದೆ ಎಂದು ಸತ್ತೋಲೆಯಲ್ಲಿ ತಿಳಿಸಿದ್ದಾರೆ.