ಸಿಎಂಗೆ ದೊಡ್ಡ ಆಘಾತ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಸಿಎಂಗೆ ಇದು ದೊಡ್ಡ ಆಘಾತೆ. ಇ.ಡಿ. ನೋಟಿಸ್‌ ರಾಜಕೀಯಪ್ರೇರಿತ ಎಂದು ಡಿಕೆಶಿ ಹೇಳುವಾಗ ಅವರ ಮುಖದಲ್ಲಿ ಮಂದಹಾಸ ಕಾಣುತ್ತಿತ್ತು ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು(ಜ.28): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದ್ದು, ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಹಾಜರಾಗುವಂತೆ ಇದೇ ಮೊದಲ ಬಾರಿಗೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ಹೈ

ಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಈ ತಕರಾರು ಅರ್ಜಿ ವಿಚಾ ರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗ ಪ್ರಸನ್ನ ಅವರ ಧಾರವಾಡ ಹೈಕೋರ್ಟ್ ಪೀಠ ಫೆ.10 ರವರೆಗೆ ವಿಚಾರಣೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ. 
ನ್ಯಾಯಾಲಯದ ಈ ಆದೇಶದಿಂದಾಗಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮುಖ್ಯಮಂತ್ರಿ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್ ದೊರಕಿದೆ. ಅರ್ಜಿಗಳ ಮುಂದಿನ ವಿಚಾರಣೆವರೆಗೆ ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗುವುದು ತಪ್ಪಿದೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕೋಟ್ಯಂತರ ರು. ಅಕ್ರಮ ಹಣ ವರ್ಗಾ ವಣೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿಗೆ ದೂರು ಸಲ್ಲಿಸಿದರು.
ಈ ದೂರಿನ ಮೇರೆಗೆ ತನಿಖೆ ಕೈಗೊಂಡಿರುವ ಇ.ಡಿ ಅಧಿ ಕಾರಿಗಳು ಸಿಎಂ ಪತ್ರಿ ಪಾರ್ವತಿ ಅವರಿಗೆ ನೊಟೀಸ್ ಜಾರಿಗೊ ಳಿಸಿ ಮಂಗಳವಾರ ಬೆಳಗ್ಗೆ 11ಕ್ಕೆ ಪ್ರಕರಣ ಸಂಬಂಧದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು. 

ಅಂತಿಮ ಆದೇಶ ಬರುವವರೆಗೂ ಲೋಕಾ ವರದಿ ಸಲ್ಲಿಸುವಂತಿಲ್ಲ | Siddaramaiah In Muda Case | Suvarna News

ವಿನಾಯಿತಿ ಕೇಳಿದ್ದ ಬೈರತಿ: 

ಸಚಿವ ಬೈರತಿ ಸುರೇಶ್‌ ಗೆ ನೋಟಿ ಸ್ ಜಾರಿಗೊಳಿಸಿ ಸೋಮವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಅವರು ಮಗನ ಮದುವೆ ಕಾರಣದಿಂದ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೋರಿದ್ದರು. ಆದರೂ ಅಧಿಕಾರಿಗಳು 2ನೇನೋಟಿಸ್ ನೀಡಲು ಸಿದ್ಧತೆ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಇ.ಡಿ ನೋಟಿಸ್‌ಗೆ ತಕಾರರು ಕೋರಿ ಪಾರ್ವತಿ ಮತ್ತು ಸುರೇಶ್ ಪ್ರತ್ಯೇಕ ಅರ್ಜಿ ಸಲ್ಲಿಸಿ ಮಧ್ಯಂತರ ತಡೆಯಾಜ್ಞೆ ತರುವಲ್ಲಿ ಸಫಲವಾಗಿದ್ದಾರೆ. 
ವಿಚಾರಣೆ ವೇಳೆ ಸುರೇಶ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದಿಸಿ, ಪ್ರಕರಣದಲ್ಲಿ ಅರ್ಜಿದಾರರನ್ನು ಆರೋಪಿ ಯಾಗಿ ಹೆಸರಿಸಿಲ್ಲ. ಆರೋಪಿಯಲ್ಲದಿದ್ದರೂ, ಅರ್ಜಿ ದಾರರ ಪುತ್ರನ ಮದುವೆ ಕಾರ್ಯಕ್ರಮ ಇದ್ದರೂ ವಿಚಾರಣೆಗೆ ಹಾಜ ರಾಗಲು ಸೂಚಿಸಿದೆ. ಇದೇ ಪ್ರಕರಣ ಸಂಬಂಧ ಮುಡಾಮಾಜಿ ಆಯುಕ್ತ ಡಾ.ನಟೇಶ್‌ಗೆ ಇ.ಡಿ ನೀಡಿದ್ದ ಸಮನ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗಾಗಿ, ಅರ್ಜಿದಾರರ ವಿರು ದ್ಧದ ನೋಟಿಸ್‌ಗೆ ತಡೆಯಾಜ್ಞೆ ನೀಡಬೇಕು. ಮುಂದಿನ ವಿಚಾರ ಣೆವರೆಗೂ ರಕ್ಷಣೆ ಒದಗಿಸಬೇಕೆಂದು ಕೋರಿದರು. 

ಸಿಎಂ ಪತ್ನಿ ಪರ ಹಿರಿಯ ವಕೀಲ ಸಂದೇಶ್ ಚೌಟ ಹಾಗೂ ವಿಕ್ರಂ ಹುಯಿಲಗೋಳ ಹಾಜರಾಗಿ, ಮುಡಾದ 14 ಸೈಟ್ ಅಕ್ರಮವಾಗಿ ಹಂಚಿ ಕೆಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹಾಗಾಗಿ, ತನಿಖೆಗೆ ತಡೆ ನೀಡಬೇಕು ಎಂದರು. ಯಾವುದೇ ಅಡ್ಡಪರಿಣಾಮ ಬೀರಲ್ಲ: ಇ.ಡಿ. ಪರ ವಾದಿಸಿದ ಎಎಸ್‌ಜಿ ಅರವಿಂದ್ ಕಾಮತ್, ಡಾ.ನಟೇಶ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿರಲಿಲ್ಲ. ಇಂದು ಡಾ.ನಟೇಶ್ ಪರ ಆದೇಶ ಬಂದಿದೆ. ಆದರೆ, ಆದೇಶದಪೂರ್ಣ ಪ್ರತಿ ಲಭ್ಯವಾಗಿಲ್ಲ. ಸಮನ್ಸ್ ಜಾರಿಯಾಗಿರುವುದರಿಂದ ಮುಡಾ ಪ್ರಕರಣವನ್ನು ಸಿಬಿಐಗೊಪ್ಪಿಸಲು ಕೋರಿದ ಅರ್ಜಿ ಕುರಿತ ಹೈಕೋರ್ಟ್ ವಿಚಾರಣಾ ಪ್ರಕ್ರಿಯೆ ಮೇಲೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. 

ಪ್ರಕರಣದ ಆರೋಪಿ ಸೇರಿ ಯಾವುದೇ ವ್ಯಕ್ತಿಯ ಸಾಕ್ಷ್ಯ ಅಥವಾ ಹೇಳಿಕೆ ದಾಖಲಿಸಿಕೊಳ್ಳಲು ನೋಟಿಸ್‌ ನೀಡುವ ಅಧಿಕಾರ ಇ.ಡಿಗಿದೆ. ಅರ್ಜಿದಾರರ ವಿರುದ್ದದ ನೋಟಿಸ್‌ಗೆ ತಡೆ ನೀಡಬಾರದು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿದ ಅರ್ಜಿ ಕುರಿತ ತೀರ್ಪ ನ್ನು ಹೈಕೋರ್ಟ್ ಸೋಮವಾರ ಕಾಯ್ದಿರಿಸಿದೆ. 

ಇ.ಡಿ ನೋಟಿ ಸ್ ನೀಡಿರುವುದರಿಂದ ಹೈಕೋರ್ಟ್ ಪ್ರಕ್ರಿಯೆ ಮೇಲೆ ಅಡ್ಡಿ ಉಂಟಾಗುವುದರಲ್ಲಿ ಸಂದೇಹವಿಲ್ಲ, ಪ್ರಕರ ಣದಲ್ಲಿ ಇ.ಡಿ ಏಕೆ ಅಷ್ಟೊಂದುತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ?ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ ಎಂದರು. ಅರವಿಂದ್ ಕಾಮತ್, ಮುಡಾ ಪ್ರಕರಣದಲ್ಲಿ ಪಾರ್ವತಿ 2ನೇ ಆರೋಪಿ, ಅವರ ಮೇಲೆ ಆಕ್ರಮವಾಗಿ ಸೈಟ್ಸ್ ಪಡೆದ ಆರೋಪವಿದೆ ಎಂದರು. 

ಆ ವಾದ ಒಪ್ಪದ, ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ.ಇ.ಡಿತನಿಖೆಯಿಂದಹೈಕೋರ್ಟ್‌ ಕಾಯ್ದಿರಿಸಿರುವ ಕೇಸ್‌ಗೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲವೆಂದು ನಾನೇ ಆದೇಶ ನೀಡಿದ್ದೇನೆ. ಈಗ ಇ.ಡಿ ತನಿಖೆಗೆ ಅವಕಾಶ ನೀಡುವುದು ಹೇಗೆ ಎಂದು ಪ್ರಶ್ನಿಸಿದರು. 

ಅರವಿಂದ ಕಾಮತ್ ಉತ್ತರಿಸಿ, ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದ ರಿಂದಹೈಕೋರ್ಟ್ ಮುಂದಿರುವ ಕೇಸ್‌ ಗೆ ಅಡ್ಡಿಯಾಗುವುದಿಲ್ಲ ಎಂದು ಸಮುಜಾಯಿಷಿ ನೀಡಿದರು. ಆಗ ನ್ಯಾಯಮೂರ್ತಿಗಳು, ಹಾಜರಾಗದಿದ್ದರೆ ಅವರನ್ನು ಬಂಧಿಸಬಹುದು ಎಂದು ಮಧ್ಯಂತರ ಆದೇಶ ನೀಡಿದರು.

ಸಿದ್ದು ಕುಟುಂಬದ ವಿರುದ್ಧ ಸಿಬಿಐ ತನಿಖೆ: ತೀರ್ಪು ಬಾಕಿ 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದದ ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿತು.

ಹೈಕೋರ್ಟ್‌ಗೆ ಲೋಕಾ ಮುಡಾ ವರದಿ ಸಲ್ಲಿಕೆ

ಧಾರವಾಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇ ಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸೋಮವಾರ ತನಿಖಾ ಪ್ರಗತಿ ವರದಿಯನ್ನು ಹೈಕೋರ್ಟ್‌ನ ಧಾರವಾಡ ಪೀಠದ ಮುಂದೆ ಸಲ್ಲಿಸಿತು. ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಹಗರಣದ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಸಲ್ಲಿಸಿದರು. ಅದನ್ನು ಹೈಕೋರ್ಟ್ ದಾಖಲು ಮಾಡಿಕೊಂಡಿತು. ಬಳಿಕ, ಪ್ರಕರಣದ ವಿಚಾರಣೆ ಆರಂಭಿಸಿದ ನ್ಯಾಯಪೀಠ, ಎರಡೂ ಕಡೆಯ ವಾದವನ್ನು ಆಲಿಸಿತು. ಬಳಿಕ, ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿತು.

ರಾಜಕೀಯ ಪಿತೂರಿ, ದುರುದ್ದೇಶ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜಕೀಯ ಪಿತೂರಿಯಿಂದ ನೋಟಿಸ್ ನೀಡಲಾಗಿದೆ. ನನ್ನ ವಿರುದ್ಧದ ಪ್ರಕರಣ ದಲ್ಲೂ ಹೀಗೆಯೇ ಮಾಡಲಾಗಿತ್ತು. ಒಂದು ಪ್ರಕರಣವನ್ನು ಒಂದೇ ಸಮಯ ದಲ್ಲಿ 2 ಸಂಸ್ಥೆ ತನಿಖೆ ನಡೆಸಲು ಸಾಧ್ಯವಿ ಲ್ಲ. ಮುಡಾ ಪ್ರಕರಣದ ಬಗ್ಗೆ ಲೋಕಾ ಯುಕ್ತ ತನಿಖೆ ನಡೆಸುತ್ತಿರುವಾಗಲೇ ಇ.ಡಿ ತನಿಖೆ ನಡೆಸಲಾಗದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಾದ ಪ್ರತಿವಾದ ಆಲಿಸಿದ ಆದೇಶ ಕಾಯ್ದಿರಿಸಿದ ಕೋರ್ಟ್ | Siddaramaiah In Muda Case | Suvarna News

ಸಿದ್ದು ಮುಂದುವರಿಕೆ ಅನೈತಿಕ ಏನಾದರು ಮಾಡಿ ಮುಡಾ ಹಗರಣದ ತನಿಖೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ನಿಯಮಗಳನ್ನು ಸಿಎಂ ಉಲ್ಲಂಘಿಸಿದ್ದಾರೆ ಎಂದು ಹೈಕೋರ್ಟ್ ಪೀಠ ಹೇಳಿದ ಮೇಲೂ ಅಧಿಕಾರದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿದಿರುವುದೇ ಅನೈತಿಕ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಸಿಎಂಗೆ ದೊಡ್ಡ ಆಘಾತ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಸಿಎಂಗೆ ಇದು ದೊಡ್ಡ ಆಘಾತೆ. ಇ.ಡಿ. ನೋಟಿಸ್‌ ರಾಜಕೀಯಪ್ರೇರಿತ ಎಂದು ಡಿಕೆಶಿ ಹೇಳುವಾಗ ಅವರ ಮುಖದಲ್ಲಿ ಮಂದಹಾಸ ಕಾಣುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.