ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್ ಎನ್ನದ ಶಿಕ್ಷಣ ಇಲಾಖೆ..!
ಜೂ.15ರಂದು ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ| ಕಡ್ಡಾಯವಾಗಿ 10 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದ ಸರ್ಕಾರ| ಇನ್ನೂ ಯಾವುದೇ ತರಹದ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡದ ಶಿಕ್ಷಣ ಇಲಾಖೆ|
ಬೆಂಗಳೂರು(ಜೂ.26): ಮಾಹಾಮಾರಿ ಕೊರೋನಾ ವೈರಸ್ ಹಾವಳಿಯಿಂದ ಪ್ರಸಕ್ತ ವರ್ಷದಲ್ಲಿ ಇನ್ನೂ ಶಾಲಾ, ಕಾಲೇಜುಗಳು ಆರಂಭವಾಗಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 6 ನೇ 10ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಿತಿಯೊಂದನ್ನ ರಚನೆ ಮಾಡಿ ಸೂಕ್ತ ಮಾರ್ಗಸೂಚಿಗಳನ್ನ ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿತ್ತು.
ಜೂ.15ರಂದು ಸಮಿತಿ ರಚನೆ ಮಾಡಿ, ಕಡ್ಡಾಯವಾಗಿ 10 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಆದರೆ, ಸಮಿತಿ ರಚನೆಯಾಗಿ ನಿನ್ನೆ(ಗುರುವಾರ)ಗೆ 10 ದಿನಗಳಾಗಿವೆ. ಸರ್ಕಾರ ನೀಡಿದ್ದ ಗಡುವು ಕೂಡ ನಿನ್ನೆಗೆ ಮುಗಿದಿದೆ. ಆದರೂ ಕೂಡ ಶಿಕ್ಷಣ ಇಲಾಖೆ ಇನ್ನೂ ಯಾವುದೇ ತರಹದ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿಲ್ಲ. ಈ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೆ ಶಿಕ್ಷಣ ಇಲಾಖೆ ಡೋಂಟ್ ಕೇರ್ ಎಂದಿದೆ. ಈಗಾಗಲೇ LKGಯಿಂದ 5ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್‌ಗಳನ್ನ ರದ್ದು ಮಾಡಲಾಗಿದೆ. ಈ ಸಂಬಂಧ ಸಮಿತಿ ಇನ್ನೂ ಒಂದು ಬಾರಿಯೂ ಸಭೆ ನಡೆಸಿಲ್ಲ ಎಂದು ಹೇಳಲಾಗಿದೆ.
ಕಾಲ ಬೆರಳಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಭೇಷ್ ಎಂದ ಸಚಿವ ಸುರೇಶ್ ಕುಮಾರ್
ಒಟ್ಟು 11 ಜನ ಸದಸ್ಯರಿರುವ ಸಮಿತಿ
1.ಡಾ.ಎಂ.ಕೆ ಶ್ರೀಧರ್, ಸಮಿತಿ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ
2. ಡಾ.ಗುರುರಾಜ್ ಜರ್ಜಗಿ, ಶಿಕ್ಷಣ ತಜ್ಞ
3. ವಿ.ಪಿ ನಿರಂಜನಾರಾಧ್ಯ, ಶಿಕ್ಷಣ ತಜ್ಞ
4. ಹೃಷಿಕೇಶ್, ಸಮಿತಿ ಸದಸ್ಯ
5. ನಿಮಾನ್ಸ್ ಆಸ್ಪತ್ರೆ ಮುಖ್ಯಸ್ಥರು ಹಾಗೂ ಆ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು
6. ಅರ್ಲಿ ಚೈಲ್ಸ್ ಹುಡ್ ಸಂಘಟನೆಯ ಪ್ರತಿನಿಧಿಗಳು
7. ಖಾಸಗಿ ಶಾಲೆಗಳ ಒಕ್ಕೂಟದ ಸಂಘಟನೆಗಳ ಪ್ರತಿನಿಧಿಗಳು
8. ಡಾ.ಕೆ.ಜಗದೀಶ್, ಆಯುಕ್ತ, ಶಿಕ್ಷಣ ಇಲಾಖೆ
9. ಎಂ.ಆರ್. ಮಾರುತಿ, ನಿರ್ದೇಶಕ, ಡಿ.ಎಸ್.ಇ.ಆರ್.ಟಿ
10. ಗೋಪಾಲಕೃಷ್ಣ, ನಿರ್ದೇಶಕ, ಸಮಗ್ರ ಶಿಕ್ಷಣ ಕರ್ನಾಟಕ
11. ಡಾ. ರೇಜು, ರಾಜ್ಯ ಯೋಜನಾ ನಿರ್ದೇಶಕ, ಸಆಗ್ರ ಶಿಕ್ಷಣ ಕರ್ನಾಟಕ