ಕೋಲಾರ ವಿಸ್ಟ್ರಾನ್ ಕಂಪನಿ ಧ್ವಂಸ ಪ್ರಕರಣ; ಬಂಧಿತ SFI ಅಧ್ಯಕ್ಷನ ಬಿಡುಗಡೆಗೆ DYF ಆಗ್ರಹ!

iPhone ಮೊಬೈಲ್ ಪೂರೈಕೆ ಮಾಡುತ್ತಿದ್ದ ವಿಸ್ಟ್ರಾನ್ ಫ್ಯಾಕ್ಟರಿ ಧ್ವಂಸ ಪ್ರಕರಣ ಸಂಬಂಧಿಸಿ ಪೊಲೀಸರು SFI ಸಂಘಟನೆಯ ಕೋಲಾರ ತಾಲೂಕ ಅಧ್ಯಕ್ಷನ ಬಂಧಿಸಿದ್ದಾರೆ. ಇದೀಗ ವಿದ್ಯಾರ್ಥಿ ಸಂಘಟನೆಗೂ, ಧ್ವಂಸ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಎಂದು DYFI ಸಂಘಟನೆ, SFI ಅಧ್ಯಕ್ಷನ ಬಿಡುಗಡೆಗಾಗಿ ಅಭಿಯಾನ ಆರಂಭಿಸಿದೆ. 

DYFI urge to release SYFI student union president srikant who arrested in wistron case kolar ckm

ಕೋಲಾರ(ಡಿ.17):  ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ, ಆ್ಯಪಲ್ ಕಂಪನಿಗ ಐಫೋನ್ ಪೂರೈಕೆ ಮಾಡುವ ಜವಾಬ್ದಾರಿ ಹೊತ್ತಿದೆ. ಕೋಲಾರದಲ್ಲಿರುವ ಈ ವಿಸ್ಟ್ರಾನ್ ಕಂಪನಿ ನೌಕರರಿಗೆ ವೇತನ ನೀಡುತ್ತಿಲ್ಲ, ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ನೌಕರರು ವಿಸ್ಟ್ರಾನ್ ಫ್ಯಾಕ್ಟರಿಯನ್ನು ಧ್ವಂಸಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಕೋಲಾರ ತಾಲೂಕ SFI ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಶ್ರೀಕಾಂತ್‌ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಶ್ರೀಕಾಂತ್ ಬಿಡಗಡೆಗೆ ಅಭಿಯಾನ ಆರಂಭಗೊಂಡಿದೆ.

ನೌಕರರಿಂದಲೇ ಕೋಲಾರದ iPhone ಕಚೇರಿ ಪುಡಿ ಪುಡಿ!..

ಕೋಲಾರ ಸಂಸದ ಮುನಿಸ್ವಾಮಿ ಆರೋಪದ ಆಧಾರದಲ್ಲಿ ಪೊಲೀಸರು ಶ್ರೀಕಾಂತ್‌ನನ್ನು ಬಂಧಿಸಿದ್ದಾರೆ. ಇದು ಸರಿಯಲ್ಲ, ತಕ್ಷಣವೇ ಶ್ರೀಕಾಂತ್ ಬಿಡುಗಡೆ ಮಾಡಬೇಕು ಎಂದು DYFI ಸಂಘಟನೆ ರಾಜ್ಯ ಅಧ್ಯಕ್ಷ ಮನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕೋಲಾರದ ವಿಸ್ಟ್ರಾನ್ ಕಂಪನಿ ಘಟನೆಗೆ ಸಂಬಂಧಿಸಿದಂತೆ  ಎಸ್ಎಫ್ಐ ಕೋಲಾರ ತಾಲ್ಲೂಕು ಅಧ್ಯಕ್ಷ ಸಂಗಾತಿ ಶ್ರೀಕಾಂತ್ ನನ್ನು ಕೋಲಾರದ ಪೋಲೀಸರು  ಬಂಧಿಸಿದ್ದಾರೆ.   ವಿಸ್ಟ್ರಾನ್ ಘಟನೆಗೂ ವಿದ್ಯಾರ್ಥಿ ಸಂಘಟನೆಗೂ ಯಾವುದೇ ಸಂಬಂಧವಿಲ್ಲದಿದ್ದರು  ಸಹ ಬಂಡವಾಳದಾರರ ಹಿತ ಕಾಪಾಡುತ್ತಿರುವ ಕೋಲಾರದ ಸಂಸದ ಮುನಿಸ್ವಾಮಿ ರವರು ಮಾಡಿರುವ ರಾಜಕೀಯ ಪ್ರೇರಿತ ಆರೋಪದಡಿ ವಿದ್ಯಾರ್ಥಿ ಮುಖಂಡ ಶ್ರೀಕಾಂತ್ ರವರನ್ನು ಬಂಧಿಸಿರುವುದು ಖಂಡನೀಯ.
ಈ ಮೂಲಕ ವಿಸ್ಟ್ರಾನ್ ಕಂಪನಿಯಲ್ಲಿ ಆಗಿರುವ ಕಾರ್ಮಿಕರ ಕಾನೂನುಗಳ ಘೋರ ಉಲ್ಲಂಘನೆಯನ್ನು ಮರೆಮಾಚುವ ಹುನ್ನಾರ ನಡೆದಿದೆ. 
ಈ ಕೂಡಲೇ ವಿದ್ಯಾರ್ಥಿ ಮುಖಂಡ ಶ್ರೀಕಾಂತ್ ನನ್ನು ಬಿಡುಗಡೆಗೊಳಿಸಲು ಧ್ವನಿ ಎತ್ತಬೇಕಾಗಿದೆ ಎಂದು ಮುನೀರ್ ಕಾಟಿಪಳ್ಳ ಫೇಸ್‌ಬುಕ್ ಮೂಲಕ ಅಭಿಯಾನ ಆರಂಭಿಸಿದ್ದಾರೆ.

Latest Videos
Follow Us:
Download App:
  • android
  • ios