ಮಂಗಳೂರು: ಟಿಪ್ಪು ಸುಲ್ತಾನ್ ಬ್ಯಾನರ್ ತೆರವಿಗೆ ಪೊಲೀಸ್ ನೋಟಿಸ್‌, ಡಿವೈಎಫ್‌ಐ ವಿರೋಧ!

ಇಲ್ಲಿನ ತೊಕ್ಕೊಟ್ಟಿನಲ್ಲಿ ಫೆ.25ರಿಂದ ನಡೆಯಲಿರುವ ಕರ್ನಾಟಕ ರಾಜ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಕಚೇರಿಯಲ್ಲಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಬ್ಯಾನರ್ ತೆರವಿಗೆ ಡಿವೈಎಫ್‌ಐ ನಿರಾಕರಿಸಿದೆ.

DYFI opposed police notice for removal of Tipu Sultan banner at mangaluru rav

ಮಂಗಳೂರು (ಫೆ.20) ಇಲ್ಲಿನ ತೊಕ್ಕೊಟ್ಟಿನಲ್ಲಿ ಫೆ.25ರಿಂದ ನಡೆಯಲಿರುವ ಕರ್ನಾಟಕ ರಾಜ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಕಚೇರಿಯಲ್ಲಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಬ್ಯಾನರ್ ತೆರವಿಗೆ ಡಿವೈಎಫ್‌ಐ ನಿರಾಕರಿಸಿದೆ.

ಸಾರ್ವನಿಕ ಸ್ಥಳದಲ್ಲಿ ಬ್ಯಾನರ್ ಹಾಕಲು ಸಂಘಟನೆಯು ಪೂರ್ವಾನುಮತಿ ಪಡೆದಿಲ್ಲದ ಕಾರಣ ಕಚೇರಿ ಬಳಿ ಹಾಕಿರುವ ಟಿಪ್ಪು ಸುಲ್ತಾನ್ ಕಟೌಟ್ ತೆರವು ಮಾಡುವಂತೆ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕರು ಭಾರತ ಪ್ರಜಾಸತ್ತಾತ್ಮಕ ಯುವ ಒಕ್ಕೂಟದ (ಡಿವೈಎಫ್‌ಐ) ಹರೇಕಳ ಘಟಕದ ಅಧ್ಯಕ್ಷರಿಗೆ ಭಾನುವಾರ ನೋಟಿಸ್ ನೀಡಿದ್ದು, ಸಮಸ್ಯೆ ತಪ್ಪಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಬ್ಯಾನರ್ ತೆರವಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಶ್ರೀರಾಮನ ನಿಂದನೆ ವಿರುದ್ಧ ದ್ವನಿಯೆತ್ತಿದ್ದೇ ತಪ್ಪಾಯ್ತಾ? ದುಬೈ, ಕತಾರ್, ಸೌದಿಯಿಂದ ಪೋಷಕಿಗೆ ನಿರಂತರ ಬೆದರಿಕೆ ಕರೆ!

ಆದರೆ ರಾಜ್ಯ ಸಮ್ಮೇಳನದ ಅಂಗವಾಗಿ ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಇತರರ ಕಟೌಟ್, ಫ್ಲೆಕ್ಸ್ ಬ್ಯಾನರ್ ಹಾಕುತ್ತಿದ್ದು, ಬ್ಯಾನರ್ ಹಾಕುವ ಹಕ್ಕು ಸರ್ಕಾರಕ್ಕೆ ಇಲ್ಲ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಹೇಳಿದ್ದಾರೆ. ರಾಜ್ಯದಲ್ಲಿ ಸರಕಾರ ಬದಲಾದರೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಸಂಘ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸಮ್ಮೇಳನದ ಅಂಗವಾಗಿ ವಿವಿಧ ಸ್ಥಳಗಳಲ್ಲಿ ಹಾಕಲಾಗಿರುವ ಟಿಪ್ಪು, ರಾಣಿ ಅಬ್ಬಕ್ಕ, ಕೋಟಿ-ಚೆನಯ್ಯ ಮತ್ತು ಇತರರ ಕಟೌಟ್‌ಗಳನ್ನು ಡಿವೈಎಫ್‌ಐ ಕಾರ್ಯಕರ್ತರು ರಕ್ಷಿಸಲಿದ್ದಾರೆ ಎಂದು ಇಮ್ತಿಯಾಜ್ ಹೇಳಿದ್ದಾರೆ.

ವಿಶೇಷ ವಿಮಾನದಲ್ಲಿ ಡಿಕೆಶಿ, ಬಿಜೆಪಿ ಶಾಸಕ ಜಂಟಿ ಪ್ರಯಾಣ; ಕುತೂಹಲ ಕೆರಳಿಸಿದ ಸೋಮಶೇಖರ್ ನಡೆ!

Latest Videos
Follow Us:
Download App:
  • android
  • ios