Asianet Suvarna News Asianet Suvarna News

ಸೂರ್ಯಗ್ರಹಣದ ವೇಳೆ ಆಹಾರ ಸೇವಿಸಿ ಮೌಡ್ಯಕ್ಕೆ ಸೆಡ್ಡು ಹೊಡೆದ ರಾಜ್ಯದ ಜನತೆ

ಸೂರ್ಯ ಗ್ರಹಣದ ಪ್ರಯುಕ್ತ ದೇಶಾದ್ಯಂತ ಹಲವೆಡೆ ವಿವಿಧ ರೀತಿಯ ಆಚರಣೆ, ಉಪವಾಸಗಳನ್ನು  ಜನ ಮಾಡಿ ಗ್ರಹಣವನ್ನು ಆಚರಣೆ ಮಾಡಿದ್ದಾರೆ.  ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಮೌಢ್ಯತೆಗೆ ಸೆಡ್ಡು ಹೊಡೆದು, ಗ್ರಹಣ ವೇಳೆ ಉಪಾಹಾರವನ್ನೂ  ಸೇವಿಸಿರುವ ಘಟನೆ  ನಡೆದಿದೆ.
 

During the solar eclipse karnataka many district people eat food and break the believes gow
Author
First Published Oct 25, 2022, 7:21 PM IST

ಬೆಂಗಳೂರು (ಅ.25): ದೀಪಾವಳಿ ಹಬ್ಬದ ಸಮಯದಲ್ಲಿ ಕೇತುಗ್ರಸ್ಥ ಸೂರ್ಯ ಗ್ರಹಣದ ಪ್ರಯುಕ್ತ ದೇಶಾದ್ಯಂತ ಹಲವೆಡೆ ವಿವಿಧ ರೀತಿಯ ಆಚರಣೆ, ಉಪವಾಸಗಳನ್ನು  ಜನ ಮಾಡಿ ಗ್ರಹಣವನ್ನು ಆಚರಣೆ ಮಾಡಿದ್ದಾರೆ. ಗ್ರಹಣ ಆರಂಭವಾಗಿ  ಮುಗಿಯವವರೆಗೂ ಆಹಾರ, ನೀರನ್ನು ಸೇವಿಸಬಾರದು ಎಂದು ಜನರ ನಂಬಿಕೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಮೌಢ್ಯತೆಗೆ ಸೆಡ್ಡು ಹೊಡೆದು, ಗ್ರಹಣ ವೇಳೆ ಉಪಾಹಾರವನ್ನೂ  ಸೇವಿಸಿರುವ ಘಟನ ನಡೆದಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಗತಿಪರ ಚಿಂತಕರ ಸಂಘಟನೆ ಜನರಿಗೆ ಉಪಹಾರ ವ್ಯವಸ್ಥೆ ಮಾಡಿ, ಆಹಾರ ಸವಿದಿದೆ.  ನಗರದ ಜಗತ್ ವೃತ್ತದಲ್ಲಿ ಉಪಹಾರ ಸೇವನೆ ಮಾಡಿ ಸೆಡ್ಡು ಹೊಡೆದಿದ್ದಾರೆ. ಉಪ್ಪಿಟ್ಟು, ಶಿರಾ, ಬಾಳೆಹಣ್ಣು ತಿಂದು ಗ್ರಹಣಕ್ಕೆ ಸೆಡ್ಡು ಹೊಡೆದಿದ್ದಾರೆ. ಈ ಮೂಲಕ ಸೂರ್ಯಗ್ರಹಣದ ವೇಳೆ ಉಪಹಾರ ಸೇವಿಸಿದ್ರೆ ಅಪಾಯವಿಲ್ಲ ಎಂದು ಹೇಳಿದ್ದಾರೆ. ಜನರಲ್ಲಿ ಮೌಢ್ಯತೆ ಬಿತ್ತಲು ಸೂರ್ಯಗ್ರಹಣ ವೇಳೆ ಉಪಹಾರ ಸೇವಿಸಬಾರೆಂದು ಹೇಳಲಾಗುತ್ತಿದೆ. ಇದೆಲ್ಲಾ ಸುಳ್ಳು, ಮೌಢ್ಯ, ನಾವೇ ಇದಕ್ಕೆ ಸಾಕ್ಷಿ ಎಂದು ಸಾಬೀತುಪಡಿಸಲು ಆಹಾರ ಸೇವನೆ ಮಾಡಿದ್ದಾರೆ.

ಬೆಂಗಳೂರಿನ ವಿವಿದೆಡೆ ಗ್ರಹಣಕ್ಕೆ ಸೆಡ್ಡು, ಮಾಂಸಾಹಾರ ಸೇವನೆ:
ಇಂದು ಸೂರ್ಯಗ್ರಹಣ ಹಿನ್ನೆಲೆ ಬೆಂಗಳೂರಿನ ಟೌನ್ ಬಳಿ ಮೂಡನಂಬಿಕೆ ವಿರೋಧಿ ವೇದಿಕೆಯಿಂದ ಆಹಾರ ಸೇವಿಸಿ ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಯ್ತು. ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಸೇರಿ ಹಲವರಿಂದ ಈ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.ವಿಜ್ಞಾನದೆಡೆಗೆ ನಮ್ಮ ನಡಿಗೆ ಬ್ಯಾನರ್ ಅಡಿ ಸುಮಾರು   50 ಮಂದಿ ಕಾರ್ಯಕರ್ತರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಹೊಳಿಗೆ, ಹಣ್ಣು, ಬಿಸ್ಕೇಟ್ ಸೇವಿಸಿದರು.

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ನಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮಾಂಸಹಾರ ಸೇವನೆ ಮಾಡಲಾಗಿದೆ. ವಿಜ್ಞಾನದೆಡೆಗೆ ಸಾಗೋಣ ಮೌಢ್ಯತೆಯನ್ನ ಅಳಿಸೋಣ ಎಂಬ ಕಾರ್ಯಕ್ರಮದಡಿ ಆನೇಕಲ್ ಮೌಢ್ಯ ವಿರೋಧಿ ವೇದಿಕೆಯಿಂದ ಗ್ರಹಣದ ದಿನ ಮಾಂಸಹಾರ ಸೇವನೆ ಮಾಡಲಾಯ್ತು. ಗ್ರಹಣಗಳು ಖಗೋಳದಲ್ಲಿ ನಡೆಯುವ ಪ್ರಾಕೃತಿಕ ವಿಸ್ಮಯ. ಜನರು ಗ್ರಹಣದ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ಗ್ರಹಣ, ರಾಶಿ ಎಂದು ಕೆಲವರು ಜನರ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ. ಮೌಢ್ಯವನ್ನ ಹೋಗಲಾಡಿಸಿ ವಿಜ್ಞಾನದೆಡೆಗೆ ಸಾಗಬೇಕು ಎಂದು ಜನ ಜಾಗೃತಿ ಮೂಡಿಸಿದರು.

ಗದಗದಲ್ಲಿ ಗ್ರಹಣ ಹಿಡಿದಾಗಲೇ ಉಪಾಹಾರ ಸೇವನೆ: ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ  ಗ್ರಹಣ ಸಮಯದಲ್ಲೇ ಹಿರಿಯ ಸಾಹಿತಿ ಬಸವರಾಜ್ ಸೂಳಿಬಾವಿ ನೇತೃತ್ವದದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ಉಪಾಹಾರ ಸೇವನೆ ಮಾಡಿ ಗ್ರಹಣ ಮೇಲಿರುವ ಅಪನಂಬಿಕೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದರು. ಗ್ರಹಣವೆಂಬುದು ನಿಸರ್ಗದಲ್ಲಿ ನಡೆಯುವ ಒಂದು ಕ್ರೀಯೆ  ಸದಸ್ಯರು ಸಾರಿ ಹೇಳಿದರು.  ಈ ಮೂಲಕ ಊಟ, ಉಪಾಹಾರ ಮಾಡಬಾರದೆಂಬ ಆಚರಣೆಗೆ ಸೆಡ್ಡು ಹೊಡೆದರು. ಮಿರ್ಚಿ, ಚುರುಮುರಿ, ಮೈಸೂರು ಪಾಕ್ ಹಂಚಿ ಜನ ಜಾಗೃತಿ ಮೂಡಿಸಿದರು.

ಧಾರವಾಡ ದಲ್ಲಿ ಪಲಾವ್ ಮಾಡಿ ತಿಂಗ ಜನತೆ: ಗ್ರಹಣ ಸಮಯದಲ್ಲಿ ಆಚರಿಸುವ ಮೂಢನಂಬಿಕೆಗೆ ಹೋಗಲಾಡಿಸಲು ಸಮಾನ ಮನಸ್ಕರಿಂದ ಗ್ರಹಣ ಪ್ರಸಾದ ಕಾರ್ಯಕ್ರಮ ನಡೆಸಲಾಯ್ತು. ಧಾರವಾಡದ ಕಲಾಭವನ ಆವರಣದಲ್ಲಿ ಗ್ರಹಣ ಸಮಯದಲ್ಲಿ ಫಲಾವ ಮಾಡಿ ತಿಳುವಳಿಕೆ ಕಾರ್ಯಕ್ರಮ ನಡೆಸಲಾಯ್ತು.

ಸೂರ್ಯಗ್ರಹಣದ ಬಳಿಕ ನೀವೇನು ತಿನ್ನಬಹುದು?

ರಾಯಚೂರಿನಲ್ಲಿ ಆಹಾರ ವಿತರಣೆ: ಬಿಸಿಲ ನಾಡು ರಾಯಚೂರಿನಲ್ಲಿ ಕೂಡ ಸೂರ್ಯಗ್ರಹಣ ನೋಡಲು ಜನರು ಅಂಬೇಡ್ಕರ್ ವೃತ್ತದಲ್ಲಿ ಸೇರಿದ್ದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಗ್ರಹಣ ವೀಕ್ಷಣೆ ಆಯೋಜಿಸಿತ್ತು. ಸಾರ್ವಜನಿಕರಿಗೆ ಉಚಿತವಾಗಿ ಸೋಲಾರ್ ಫಿಲ್ಟರ್ ಅನ್ನು ವಿತರಿಸಿತ್ತು. ಈ ವೇಳೆ ಗ್ರಹಣ ವೀಕ್ಷಣಾ ಸ್ಥಳದಲ್ಲಿ ಜನರಿಗೆ ಬಾಳೆಹಣ್ಣು, ಸಿಹಿ ತಿನಿಸು, ಚುರುಮುರಿಯನ್ನು ನೀಡಲಾಯ್ತು. ಗ್ರಹಣ ವೀಕ್ಷಣೆಯೊಂದಿಗೆ ಜನರು ಆಹಾರ ಸೇವಿಸಿ, ಮೌಢ್ಯತೆಗೆ ಸೆಡ್ಡು ಹೊಡೆದರು.

Solar Eclipse 2022: ಗ್ರಹಣದ ಸಮಯದಲ್ಲಿ ಕಣ್ಣುಗಳನ್ನು ರಕ್ಷಿಸಿಕೊಳ್ಳೋದು ಹೇಗೆ ?

ತುಮಕೂರಿನಲ್ಲೂ ಗ್ರಹಣ ಮೌಡ್ಯಕ್ಕೆ ಸೆಡ್ಡು: ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ಸೋಲಾರ್ ಫಿಲ್ಟರ್ ಹಿಡಿದು  ಜನರು ಗ್ರಹಣ ವೀಕ್ಷಿಸಿದರು. ಇದೇ ವೇಳೆ ಪ್ರಗತಿಪರರು ತಿಂಡಿ ತಿನ್ನುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದರು.
 

Follow Us:
Download App:
  • android
  • ios