Asianet Suvarna News Asianet Suvarna News

ಶಕ್ತಿ ಯೋಜನೆಯಿಂದ ತುಂಬಿ ತುಳುಕುತ್ತಿರುವ ದೇವಾಲಯಗಳ ಹುಂಡಿಗಳು: ಯಾವ ದೇವಾಲಯಕ್ಕೆ ಆದಾಯವೆಷ್ಟು ನೋಡಿ..

ಕರ್ನಾಟಕ ಸರ್ಕಾರದ "ಶಕ್ತಿ ಯೋಜನೆ" ಜಾರಿಗೆ ಬಂದ ಬಳಿಕ ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ದೇವಾಲಗಳ ಹುಂಡಿಗಳು ತುಂಬಿ ತುಳುಕುತ್ತಿವೆ. ಇಲ್ಲಿದೆಪೂರ್ಣ ವಿವರ..

Due to Shakti Yojana, Karnataka Shrines temples hundi are overflowing sat
Author
First Published Jul 22, 2023, 5:56 PM IST

ಬೆಂಗಳೂರು (ಜು.22): ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮೊದಲ ಗ್ಯಾರಂಟಿ ಯೋಜನೆಯಾಗದ "ಶಕ್ತಿ ಯೋಜನೆ" (ಮಹಿಳೆಯರಿಗೆ ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ) ಜಾರಿಗೆ ಬಂದ ಬಳಿಕ ರಾಜ್ಯದ ತೀರ್ಥ ಕ್ಷೇತ್ರಗಳ ದೇವಾಲಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಇದರಿಂದಾಗಿ ದೇವಾಲಯಗಳ ಹುಂಡಿಗಳು ತುಂಬಿ ತುಳುಕುತ್ತಿದ್ದು, ಸರ್ಕಾರ ಮತ್ತು ದೇವಾಲಯಗಳಿಗೆ ಆದಾಯವೂ ಹೆಚ್ಚಾಗಿದೆ. ರಾಜ್ಯದ ಒಟ್ಟು 58 ಮುಜರಾಯಿ ಇಲಾಖೆಗಳ ದೇವಾಲಯಗಳ ಇ-ಹುಂಡಿಯಲ್ಲಿ 25 ಕೋಟಿ ರೂ. ಹಣ ಸಂಗ್ರಹವಾಗಿದೆ.

ಕರ್ನಾಟಕದ ಶಕ್ತಿಯೋಜನೆ (ಮಹಿಳೆಯರಿಗೆ ಉಚಿತ ಪ್ರಯಾಣ) ಜಾರಿಗೆ ಬಂದ ನಂತರ ಮಹಿಳೆಯರು ಪ್ರವಾಸಿ ತಾಣಗಳು, ತೀರ್ಥ ಕ್ಷೆತ್ರಗಳು ಸೇರಿದಂತೆ ದೇವಾಲಯಗಳಿಗೆ ಹೋಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು, ದೇವಾಲಯಗೂ ಸೇರಿದಂತೆ ವಿವಿಧಡೆ ಮಹಿಳೆಯರು ಕಾಣಿಸಿಕೊಳ್ಳುವ ಪ್ರಮಾಣ ಅಧಿಕವಾಗಿದೆ. ಇನ್ನು ಮುಖ್ಯವಾಗಿ ಸಂಪ್ರದಾಯ ಪಾಲನೆ ಮಾಡುವವರ ಸಂಖ್ಯೆಯೇ ಅಧಿಕವಾಗಿರುವ ನಮ್ಮ ರಾಜ್ಯದಲ್ಲಿ ಈಗ ತೀರ್ಥ ಕ್ಷೇತ್ರಗಳಿಗೆ ಹೋಗಿ ಬರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆದ್ದರಿಂದ, ದೇವಾಲಯಗಳ ಹುಂಡಿಗಳು ಕೂಡ ಭರ್ತಿಯಾಗುತ್ತಿವೆ ಎಂಬುದು ತಿಳಿದುಬಂದಿದೆ.

ಕರ್ನಾಟಕದಲ್ಲಿರುವ ನಾವೆಲ್ಲರೂ ಬಡ್ಡಿ ಮಕ್ಕಳು: ಮುಖ್ಯಮಂತ್ರಿ ಚಂದ್ರು ವ್ಯಂಗ್ಯ

ಶಕ್ತಿ ಯೋಜನೆ ಆರಂಭವಾದ ನಂತರ (ಜೂ.11ರಿಂದ ಜು.15ರವರೆಗೆ) ರಾಜ್ಯದ ದೇವಸ್ಥಾನಗಳಲ್ಲಿ ಆದಾಯ ಹೆಚ್ಚಳವಾಗಿದೆ. ಒಂದೇ ತಿಂಗಳಲ್ಲಿ 58 ದೇಗುಲಗಳ ಹುಂಡಿಯಲ್ಲಿ 25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಜೂನ್‌ ತಿಂಗಳಲ್ಲಿ ರಾಜ್ಯದ ಪ್ರಮುಖ 58 ದೇಗುಲಗಳ ಇ- ಹುಂಡಿಯಲ್ಲಿ 19 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ವರ್ಷ ಶಕ್ತಿ ಯೋಜನೆ ಜಾರಿಗೊಂದ ಜೂನ್ 11 ರಿಂದ ಜುಲೈ 15 ರವರೆಗೆ ಇ-ಹುಂಡಿಯಲ್ಲಿ ಬರೋಬ್ಬರಿ 24.47 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ 6 ಕೋಟಿ ರೂ. ಹೆಚ್ಚಳ ಕಂಡಿದೆ. ಇನ್ನು ಪ್ರಮುಖ ದೇವಾಲಯಗಳಲ್ಲಿ ಇ- ಹುಂಡಿಗಳನ್ನ ಮಾತ್ರ ತೆರೆದಿದ್ದು, ಮ್ಯಾನ್ಯುಯಲ್ ಹುಂಡಿಗಳನ್ನ ತೆರೆಯುವುದು ಬಾಕಿ ಇದೆ. ಅವುಗಳನ್ನು ತೆರೆದರೆ ರಾಜ್ಯದ ದೇವಾಲಯಗಳು ಇನ್ನಷ್ಟು ಶ್ರೀಮಂತವಾಗಲಿದೆ.

ಮುಜರಾಯಿ ಇಲಾಖೆಯ ಪ್ರಮುಖ ದೇವಾಲಯಗಳ ಆದಾಯ ವಿವರ : (ಜೂ.11-ಜು.15 ರವರೆಗೆ)

  • ಮೈಸೂರಿನ ಚಾಮುಂಡೇಶ್ವರಿ ದೇವಾಲಯ
  • ಕಳೆದ ವರ್ಷ- 48.01 ಲಕ್ಷ ರೂಪಾಯಿ
  • ಈ ವರ್ಷ- 3.63 ಕೋಟಿ ರೂಪಾಯಿ

ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಮಣ್ಯ ದೇವಾಲಯ
ಕಳೆದ ವರ್ಷ- 11.13 ಕೋಟಿ ರೂಪಾಯಿ
ಈ ವರ್ಷ- 11.16 ಕೋಟಿ ರೂಪಾಯಿ

  • ತುಮಕೂರು ಜಿಲ್ಲೆಯ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ
  • ಕಳೆದ ವರ್ಷ-1.20 ಕೋಟಿ ರೂಪಾಯಿ 
  • ಈ ವರ್ಷ-1.48 ಕೋಟಿ ರೂಪಾಯಿ

ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿ ದೇವಸ್ಥಾನ
ಕಳೆದ ವರ್ಷ- 1.02 ಕೋಟಿ ರೂಪಾಯಿ
ಈ ವರ್ಷ- 1.41 ಕೋಟಿ ರೂಪಾಯಿ

  • ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
  • ಕಳೆದ ವರ್ಷ-1.05 ಕೋಟಿ ರೂಪಾಯಿ
  • ಈ ವರ್ಷ- 1.27 ಕೋಟಿ ರೂಪಾಯಿ

ಬೆಂಗಳೂರಿನ ಬನಶಂಕರಿ ದೇವಾಲಯ
ಕಳೆದ ವರ್ಷ- 65.82 ಲಕ್ಷ ರೂಪಾಯಿ
ಈ ವರ್ಷ- 83.64 ಲಕ್ಷ ರೂಪಾಯಿ

Bengaluru: 'ಕುಂಕುಮ, ಬಿಂದಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಇತರ ಧರ್ಮಕ್ಕೂ ಇದೆ' ಸೌಮ್ಯ ರೆಡ್ಡಿ ಟ್ವೀಟ್‌

  • ದಕ್ಷಿಣ ಕನ್ನಡ ಜಿಲ್ಲೆಯ ಮಹಾಲಿಂಗೇಶ್ವರ ದೇವಾಲಯ
  • ಕಳೆದ ವರ್ಷ- 43.33 ಲಕ್ಷ ರೂಪಾಯಿ
  • ಈ ವರ್ಷ- 48.09 ಲಕ್ಷ ರೂಪಾಯಿ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಿಮಿಷಾಂಬ ದೇವಾಲಯ
ಕಳೆದ ವರ್ಷ- 20.76 ಲಕ್ಷ ರೂಪಾಯಿ
ಈ ವರ್ಷ- 27.98 ಲಕ್ಷ ರೂಪಾಯಿ

  • ರಾಮನಗರ ಜಿಲ್ಲೆಯ ಕನಕಪುರದ ಕಬ್ಬಾಳಮ್ಮ ದೇವಸ್ಥಾನ
  • ಕಳೆದ ವರ್ಷ-13.96 ಲಕ್ಷ ರೂಪಾಯಿ
  • ಈ ವರ್ಷ- 19.64 ಲಕ್ಷ ರೂಪಾಯಿ
Follow Us:
Download App:
  • android
  • ios