Bengaluru: ಐದ್ ದಿನ ದುಡಿ, ವೀಕೆಂಡ್‌ನಲ್ಲಿ ಪಲ್ಟಿ ಹೊಡಿ, ಬಾರ್‌ನಲ್ಲೇ ಆಮ್ಲೆಟ್ ಹಾಕಿದ ಟೆಕ್ಕಿ ಬಗ್ಗೆ ಕಿಡಿ!
ಬೆಂಗಳೂರಿನಲ್ಲಿ ಹೆಚ್ಚಿನ ಜನರು ವಾರದಲ್ಲಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು ಮತ್ತು ಶುಕ್ರವಾರದಂದು ಭರ್ಜರಿ ಪಾರ್ಟಿ ಮಾಡುವುದು ಸಾಮಾನ್ಯವಾಗಿದೆ. ಹೀಗೆ ಪಾರ್ಟಿ ಮಾಡಿ ವಾಂತಿ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಫೋಟೋ ವೈರಲ್ ಆಗಿದೆ.
ಬೆಂಗಳೂರು (ಮಾ.20): ಬೆಂಗಳೂರಿನಲ್ಲಿ ಹೆಚ್ಚಿನ ಜನರು ವಾರದಲ್ಲಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು ಮತ್ತು ಶುಕ್ರವಾರದಂದು ಭರ್ಜರಿ ಪಾರ್ಟಿ ಮಾಡುವುದು ಸಾಮಾನ್ಯವಾಗಿದೆ, ಇದು ಅವರ ವಿಶ್ರಾಂತಿ ದಿನಗಳ ಪ್ರಾರಂಭವನ್ನು ಸೂಚಿಸುತ್ತದೆ. ಯೂಟ್ಯೂಬರ್ ಕ್ಯಾಲೆಬ್ ಫ್ರೈಸೆನ್ ಅವರು ಟ್ವಿಟರ್‌ನಲ್ಲಿ ಭೀಕರವಾದ ಮತ್ತು ಅಪಾಯಕಾರಿ ಪರಿಸ್ಥಿತಿಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಕುಡಿದು ಬಿದ್ದಿರುವ ಬೆಂಗಳೂರಿನ ಸ್ಟಾರ್ಟ್‌ಅಪ್ ಕೆಲಸಗಾರನ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಕ್ಯಾಲೆಬ್ ಅವರು ಬಾರ್‌ನಲ್ಲಿ ಈ ದೃಶ್ಯವನ್ನು ಕಂಡಿದ್ದು, ವ್ಯಕ್ತಿ ತಾನು ವಾಂತಿ ಮಾಡುತ್ತಾ ಉಸಿರುಗಟ್ಟಿಸುವಂತಹ ಪರಿಸ್ಥಿತಿಯಲ್ಲಿ ಇದ್ದುದನ್ನು ಕಂಡುಕೊಂಡರು, ಆತನ ತಂಡದ ಸದಸ್ಯರು ಕಷ್ಟಪಟ್ಟು ಪಾರ್ಟಿ ಮಾಡುವಾಗ ವ್ಯಕ್ತಿ ಅಲ್ಲಿ ಸ್ವತಃ ಮಲಗಿದ್ದನು. ಅವನು ಕುಡಿದು ಮಂಕಾಗಿದ್ದಾನೆ ಮತ್ತು ಆಲ್ಕೋಹಾಲ್ ಹೆಚ್ಚಾದರೆ ವಿಷ ಎಂಬುದನ್ನು ಅರಿತುಕೊಳ್ಳುವಷ್ಟು ಕೂಡ ಸಮಚಿತ್ತ ಅವನಿಗಿಲ್ಲ. ಗೆಳೆಯರ ಜೊತೆ ಕುಡಿದು ಅವರೆಲ್ಲ ಡಾನ್ಸ್ ಮಾಡುತ್ತಿದ್ದರೆ. ಈತ ಮಾತ್ರ ಕಂಠಪೂರ್ತಿ ಕುಡಿದು ಸೋಫಾದಲ್ಲಿ ಉರುಳಾಡುತ್ತಾ ಉಸಿರುಗಟ್ಟುವ ವಾತಾವರಣದಲ್ಲಿದ್ದ.
ನಾನು ನನ್ನ ಹೆಂಡತಿಯೊಂದಿಗೆ ಮೇಲಿನ ಮಹಡಿಯಲ್ಲಿ ಕುಳಿತಿದ್ದಾಗ ವ್ಯಕ್ತಿಯ ನರಳಾಟವನ್ನು ಗಮನಿಸಿದೆ. ಕೂಡಲೇ ಡಾನ್ಸ್ ಮಾಡುತ್ತಿದ್ದ ಮಹಡಿಗೆ ಧಾವಿಸಿದೆ. ಅದೃಷ್ಟವಶಾತ್ ಆಗಲೇ ಮಂಚದಿಂದ ಬಿದ್ದು ಮತ್ತೆ ಉಸಿರಾಡುತ್ತಿದ್ದ. ಆತನನ್ನು ನೋಡಿಕೊಳ್ಳಲು ಅವನ ತಂಡದ ಕೆಲವರನ್ನು ಕರೆದು, "ಯಾರಾದರೂ ಯಾವಾಗಲೂ ಅವನ ಮೇಲೆ ಕಣ್ಣಿಡಬೇಕು" ಎಂದು ಹೇಳಿದೆ.
ಸಂಸ್ಥಾಪಕರಿಗೆ ನೀತಿ ಪಾಠವೇನೆಂದರೆ ಇಂತಹ ಗುಂಪಿನ ಮೇಲೆ ಕಣ್ಣಿಡಲು ಮತ್ತು ಎಲ್ಲರೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ಮದ್ಯಪಾನ ಮಾಡದ ಮೇಲ್ವಿಚಾರಕರನ್ನು ನೇಮಿಸಿ ಎಂದು ಬರೆದುಕೊಂಡಿದ್ದಾರೆ.
ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ: ಕಾಮದಾಸೆ
ಇದೇ ವೇಳೆ ಓರ್ವ ವ್ಯಕ್ತಿ ದರ್ಪದಿಂದ " ಬ್ರೋ, ಇವನೆಂತ ಪಾರ್ಟಿ ಪ್ರಿಯ, ಇವನು ವೇಸ್ಟ್ ಎಂದು ನಾನು ಮೆಟ್ಟಿಲುಗಳ ಮೂಲಕ ನನ್ನ ಟೇಬಲ್‌ಗೆ ಹಿಂತಿರುಗುವ ಹೊತ್ತಿಗೆ, ಅವರು ಅವನನ್ನು ಡ್ಯಾನ್ಸ್ ಫ್ಲೋರ್‌ನಿಂದ ಬೇರೆ ಕಡೆಗೆ ಸ್ಥಳಕ್ಕೆ ಸ್ಥಳಾಂತರಿಸಿದರು.
ನೈಟ್ ಶಿಫ್ಟ್ ಮಾಡುತ್ತಿದ್ದ ಪೊಲೀಸ್‌ಗೆ ಗುದ್ದಿದ ಅಪರಿಚಿತ ವಾಹನ: ಸ್ಥಳದಲ್ಲಿಯೇ ಪೇದೆ ಸಾವು
ಕ್ಯಾಲೆಬ್ ಫ್ರೈಸೆನ್ ಎಂಬ ಟ್ವಿಟ್ಟರ್ ಹೆಸರಿನನಲ್ಲಿ ಕೆಲಸಗಾರ ಮತ್ತು ಕಂಪೆನಿಯ ಓನರ್ ಬಗ್ಗೆ ಅಥವಾ ಇಂತಹ ಸಂದರ್ಭದಲ್ಲಿ ಬಾರ್ ನಡೆಸುವವರು ಎಷ್ಟು ಜವಾಬ್ದಾರಿ ಹೊಂದಿರಬೇಕೆಂದು ಒತ್ತಿ ಹೇಳಿದ್ದಾರೆ. ಸದ್ಯ ಕ್ಯಾಲೆಬ್ ಸರಣಿ ಟ್ವೀಟ್ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ಈ ಮನುಷ್ಯನ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಕೆಲವರು ಇದಕ್ಕಾಗಿ ಸಂಸ್ಥಾಪಕರನ್ನು ದೂಷಿಸುವುದು ಅನಗತ್ಯ ಎಂದಿದ್ದಾರೆ.