ಡ್ರೋನ್‌ ಪ್ರತಾಪ್‌ ಅವರನ್ನು ಜನ ಇನ್ನೂ ಮರೆತಿಲ್ಲ. ಆದರೆ, ಡ್ರೋನ್‌ ಹಾರಿಸೋದನ್ನ ಪ್ರತಾಪ್‌ ಕೂಡ ಬಿಟ್ಟಿಲ್ಲ. ಡ್ರೋನಾರ್ಕ್‌ ಏರೋಸ್ಪೇಸ್‌ ಆರಂಭಿಸಿರುವ ಪ್ರತಾಪ್‌, ಇತ್ತೀಚೆಗೆ ಕೃಷಿ ಭೂಮಿಗಳಲ್ಲಿ ಡ್ರೋನ್‌ ಹಾರಿಸುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

ಬೆಂಗಳೂರು (ಜು.14): ತೀರಾ ಇತ್ತೀಚೆಗೆ ಡ್ರೋನ್‌ ಪ್ರತಾಪ್‌ ಬಗ್ಗೆ ಆಗಿದ್ದ ಸುದ್ದಿ ಏನೆಂದರೆ, ಆತ ರಾಜಕೀಯಕ್ಕೆ ಬರ್ತಾನೆ ಅನ್ನೋದು. ಆದರೆ, ಅದು ನಿಜವಾಗಲಿಲ್ಲ.ಕೊನೆಗೆ ತಾನೇ ಸಿಇಒ ಎಂದು ಹೇಳಿಕೊಂಡು ಡ್ರೋನಾರ್ಕ್‌ ಏರೋಸ್ಪೇಸ್‌ ಎನ್ನುವ ಡ್ರೋನ್‌ ಕಂಪನಿಯನ್ನು ಆರಂಭ ಮಾಡಿದ್ದಾಗಿ ಹೇಳಿದ್ದ. ಇದನ್ನು ಜನ ಮತ್ತೊಂದು ಸುಳ್ಳು ಎಂದು ಹೇಳುವಾಗಲೇ ಕಂಪನಿ ಆರಂಭ ಮಾಡಿರುವ ವಿಡಿಯೋ ಹಾಗೂ ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ನಿರಂತರವಾಗಿ ಪೋಸ್ಟ್‌ ಮಾಡಿದ್ದ. ಆದರೆ, ಜನ ಮಾತ್ರ ಯಾವುದನ್ನೂ ನಂಬ್ತಾ ಇರಲಿಲ್ಲ. ಆತನ ಪ್ರತಿ ಪೋಸ್ಟ್‌ಗೂ ಲೇವಡಿ ಮಾಡುವ ಕಾಮೆಂಟ್‌ ಹಾಕುತ್ತಿದ್ದರು. ಇಂಥದ್ದರ ನಡುವೆ ಕೃಷಿ ಭೂಮಿಗಳಲ್ಲಿ ಔಷಧಿ ಸಿಂಪಡಣೆ ಮಾಡಲು ತನ್ನ ಕಂಪನಿಯ ಡ್ರೋನ್‌ ಅನ್ನು ಖರೀದಿಸಿದ್ದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ಡ್ರೋನ್‌ ಪ್ರತಾಪ್‌ ಮತ್ತೊಂದು ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಾವು ಮಂಡ್ಯದ ಮೂರು ಶುಗರ್‌ ಫ್ಯಾಕ್ಟರಿ ಜೊತೆ ಡ್ರೋನ್‌ ಚರ್ಚೆ ಮಾಡಿಕೊಂಡಿದ್ದಾಗಿ ಬರೆದುಕೊಂಡಿದ್ದಲ್ಲದೆ, ಅದರ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇದರ ನಡುವೆ ಶುಗರ್ ಫ್ಯಾಕ್ಟರಿಯಲ್ಲಿ ಡ್ರೋನ್‌ಗೇನು ಕೆಲಸ ಅಂತಾ ಜನ ತಲೆಗೆ ಹುಳ ಬಿಟ್ಕೊಂಡಿದ್ದಾರೆ.

ಹೌದು.. ಮದ್ದೂರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್‌ ಶುಗರ್ ಫ್ಯಾಕ್ಟರಿ, ಪಾಂಡವಪುರದ ಪಿಎಸ್‌ಎಸ್‌ಕೆ ಶುಗರ್ ಫ್ಯಾಕ್ಟರಿ ಹಾಗೂ ಮದ್ದೂರಿನ ಕೆಎಂ ದೊಡ್ಡಿಯ ಚಾಮುಂಡೇಶ್ವರಿ ಶುಗರ್ಸ್ ಜೊತೆ ಡ್ರೋನ್‌ ಬಗ್ಗೆ ಚರ್ಚೆ ಮಾಡಿದ್ದಾರೆ. '50,000+ ಎಕರೆ ಪ್ರದೇಶದಲ್ಲಿ ಡ್ರೋನ್‌ಗಳನ್ನು ನಿಯೋಜಿಸಲು ಮಂಡ್ಯ ಜಿಲ್ಲೆಯ ಎಲ್ಲಾ 3 'ದೊಡ್ಡ' ಸಕ್ಕರೆ ಕಾರ್ಖಾನೆಗಳೊಂದಿಗೆ ನಾವು ಚರ್ಚೆ ನಡೆಸಿದ್ದೇವೆ' ಎಂದು ಪ್ರತಾಪ್‌ ಬರೆದುಕೊಂಡಿದ್ದಾರೆ.

ಇದರ ಬೆನ್ನಲ್ಲಿಯೇ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ಶುಗರ್‌ ಫ್ಯಾಕ್ಟರಿಯಲ್ಲಿ ಡ್ರೋನ್‌ ಏನು ಕೆಲಸ ಮಾಡುತ್ತೆ ಅನ್ನೋದು ಅರ್ಥವಾಗಲಿಲ್ಲ' ಎಂದು ವಿಜಯ್‌ ಕುಮಾರ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. ಆತ ಹೇಳಿದ್ದ 50 ಸಾವಿರ ಎಕರೆ ಹೇಗಿದೆ ಎಂದರೆ, ಈ ಹಿಂದೆ ಹೇಳಿದ್ದ 300 ಕೆಜಿ ಡ್ರೋನ್‌ ಹೊತ್ತುಕೊಂಡು ಹೋದ ಕಥೆಯ ಹಾಗೆ ಇದೆ ಎಂದು ಭುವಿ ಎನ್ನುವವರು ಪೋಸ್ಟ್‌ ಮಾಡಿದ್ದಾರೆ.

ಟೊಮ್ಯಾಟೋ ಮಾರೋ ಹುಡ್ಗಿ ಅಲ್ವಾ.. ಸ್ಕೂಲ್ ಫೋಟೋ ಹಂಚಿಕೊಂಡ ಅನುಶ್ರೀಗೆ ಕಾಮೆಂಟ್ಸ್‌ ಸುರಿಮಳೆ

'ಪ್ರತಾಪ್‌ ಅಣ್ಣ ನಮ್ಮ ಮನೆಯ ಫ್ಯಾನ್‌ ಹಾಳಾಗಿದೆ. ರಿಪೇರಿ ಮಾಡಿ, ರಿವೈಂಡಿಂಗ್‌ ಮಾಡಿ ಬೇರಿಂಗ್‌ ಚೇಂಜ್‌ ಮಾಡಿಕೊಡಿ ಪ್ಲೀಸ್‌' ಎಂದು ಪ್ರತಾಪ್‌ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ. ಚರ್ಚೆ ಎಲ್ಲರೂ ಮಾಡ್ತಾರೆ. ಹರಟೆ ಎಲ್ಲಾರೂ ಹೊಡಿತಾರೆ. ಇದರ ಫಲಿತಾಂಶ ಏನು ಅಂತಾ ಹೇಳಿ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. 'ಪ್ರತಾಪ ನೀ ಗೆ ಏನು ಟೆಕ್ನಾಲಜಿ ಗೊತ್ತಿಲ್ಲ, ಅವನ ಜೊತೆ ಸೇರಿಕೊಂಡು ಮೋಸ ಹೋಗ್ಬೇಡಿ' ಎಂದು ಕೆಲವರು ಎಚ್ಚರಿಕೆಯನ್ನೂ ನೀಡಿದ್ದಾರೆ.

ವಿಶ್ವದ ಮೆಂಟಲ್‌ ಡಿಕ್ಟೇಟರ್‌ ಕಿಮ್‌ ಜಾಂಗ್‌ ಉನ್‌ ಬಳಿ ಇರೋ ಫೋನ್‌ ಯಾವ್ದು?

ಮತ್ತೆ ಇನ್ನೂ ಕೆಲವರು ಪ್ರತಾಪ್‌ ಅವರ ಸಾಹಸಕ್ಕೆ ಭೇಷ್‌ ಎಂದಿದ್ದಾರೆ. ಅವಮಾನವಾದ ಸ್ಥಳದಲ್ಲಿಯೇ ಮರ್ಯಾದೆ ಪಡೆದುಕೊಳ್ಳುತ್ತಿರುವ ನಿಮ್ಮ ಸಾಹಸಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ. ಗುಡ್‌ ಲಕ್‌ ಇದೇ ರೀತಿ ಮುಂದುವರಿಯರಿ ಎಂದು ಬರೆದಿದ್ದರೆ, 'ಯಾರೇ ಏನೇ ಅಂದ್ರು ನಿನ್ನ ಸಾಧನೆ ಮಾಡೋದನ್ನ ನಿಲ್ಲಿಸಬೇಡ bro..' ಎಂದು ಬೆನ್ನುತಟ್ಟಿದ್ದಾರೆ. 'ನಂಬಿಯನ್ ನಾರಾಯಣ್ ಅವರ ROCKETRY Film ನೋಡಿ ಪ್ರತಾಪ್ .... ನಿಮಗೆ ಒಳ್ಳೆದಾಗಲಿ' ಎಂದು ಕಾಮೆಂಟ್‌ ಮಾಡಿದ್ದಾರೆ. 'ಹಳೆಯ ಕಹಿ ನೆನಪು ಮರೆತು ಮತ್ತೆ ಬೌನ್ಸ್ ಬ್ಯಾಕ್ ಆಗ್ತಾ ಇದ್ದೀಯ ಪ್ರತಾಪ್ ....ಜೀವನ ಏಳು ಬೀಳು ಇರುತ್ತೆ ತಲೆ ಕೆಡಿಸಕೊಳ್ಳಬೇಡಿ.... ನಿನ್ನನ್ನು ಪ್ರೀತಿಸುವ ಜನ ನಿಧಾನಕ್ಕೆ ಹೆಚ್ಚುತ್ತಾ ಇದ್ದಾರೆ...Love u ಪ್ರತಾಪ್' ಎಂದು ಬೆಂಬಲಿಸಿ ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

View post on Instagram