ಬೆಂಗಳೂರು (ಮಾ. 24): 6 ಜನ ಶಾಸಕರು ಕೋರ್ಟ್‌ಗೆ ಹೋಗಿ ಸ್ಟೇ ತಂದ ವಿಚಾರಕ್ಕೆ ಕಾಂಗ್ರೆಸ್ ಅವರ ರಾಜಿನಾಮೆಗೆ ಒತ್ತಾಯಿಸಿದೆ. ಸೀಡಿ ಕೇಸ್ ಸಿಜೆ ತನಿಖೆ ಮಾಡಲಿ ಎಂದು ಬಿಗಿ ಪಟ್ಟು ಹಿಡಿದಿದೆ. ಸದನದಲ್ಲಿ ಸೀಡಿ ವಿಚಾರ ಬಹಳ ಸದ್ದು ಮಾಡಿದೆ. ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಹೋಗಿ, ಸುಧಾಕರ್ ಹಾಕಿದ ಸಿಂಗಲ್ ವೈಫ್ ಚಾಲೆಂಜ್ ಹಾಕಿದ್ದಾರೆ. ಇದಕ್ಕೆ ಒಬ್ಬೊಬ್ಬರೇ ಪ್ರತಿಕ್ರಿಯಿಸುತ್ತಿದ್ದಾರೆ. 

ರಾಜ್ಯದಲ್ಲಿ- ಕೇಂದ್ರದಲ್ಲಿ ಅವರದ್ಧೇ ಸರ್ಕಾರವಿದೆ. ತನಿಖೆ ಮಾಡಿಸಲಿ ಎಂದು ರೇವಣ್ಣ ಹೇಳಿದ್ದಾರೆ. 

ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ಕೊಡಬಾರದು. ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಶಾಸಕ ರಾಜುಗೌಡ ಹೇಳಿದ್ದಾರೆ. 

ಸುಧಾಕರ್ ಈ ರೀತಿ ಹೇಳುವುದು ಸರಿಯಲ್ಲ, ಎಲ್ಲರ ಬಗ್ಗೆ ಹೀಗೆ ಹೇಳಬಾರದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 

ಸುಧಾಕರ್ ತಮ್ಮನ್ನೇ ತೇಜೋವಧೆ ಮಾಡ್ಕೋತಿದಾರೆ ಎಂದು ಶಾಸಕಿ ರೂಪಾ ಶಶಿಧರ್ ಟಾಂಗ್ ನೀಡಿದ್ದಾರೆ.