ದುಬಾರಿ ಚಿಕಿತ್ಸೆ ಉಚಿತ ಸಿಗಲಿ, ಸುಧಾಕರ್‌ ಹೀಗಾದಾಗ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಬಹುದು  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿಗೆ ಚಾಲನೆ

ಬೆಂಗಳೂರು(ಏ.26): ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ದುಬಾರಿ ಆರೋಗ್ಯ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಕ್ಕಾಗ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿ ಯೂನಿಟ್‌ ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವರು, ಇಂತಹ ಆರೋಗ್ಯ ಸೌಲಭ್ಯಗಳು ಕರ್ನಾಟಕದ ಆರೋಗ್ಯ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ. ದುಬಾರಿ ಚಿಕಿತ್ಸೆಗಳು ಸರ್ಕಾರಿ ಆರೋಗ್ಯ ಸೇವೆಗಳ ಮೂಲಕ ಬಡವರಿಗೂ ಸಿಗುವಂತಾಗಬೇಕು. ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. ಕೊರೋನಾ ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ಆಗುತ್ತಿವೆ. ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮತ್ತು ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.

ಕೆ.ಸಿ.ಜನರಲ್‌ನಲ್ಲೂ ತಾಯಿ-ಶಿಶು ಆಸ್ಪತ್ರೆ: ಸಚಿವ ಸುಧಾಕರ್‌

ಅಮೆರಿಕದಿಂದ ಆಮದು:
ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿ ಅಥವಾ ಎಚ್‌ಬಿಒ2 ದುಬಾರಿ ಚಿಕಿತ್ಸೆಯಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಸೇವೆ ಲಭ್ಯವಾಗುತ್ತಿರುವುದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟನೆಯಾಗಿರುವ ಸುಮಾರು 3.5 ಕೋಟಿ ರುಪಾಯಿ ವೆಚ್ಚದ ಈ ಎಚ್‌ಬಿಒ2 ಯೂನಿಟ್‌ ಅನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಹೈಪರ್‌ ಬ್ಯಾರಿಕ್‌ ಆಕ್ಸಿಜನ್‌ ಥೆರಪಿಯಲ್ಲಿ 100 ಪ್ರತಿಶತ ಆಕ್ಸಿಜನ್‌ ಮಾತ್ರ ಇರುತ್ತದೆ. ಎಚ್‌ಬಿಒ2 ಸುಟ್ಟಗಾಯಕ್ಕೆ ತುತ್ತಾದವರಿಗೆ, ಡಯಾಬಿಟಿಕ್‌ ಪೇಷೆಂಟ್‌ಗಳಿಗೆ ವಾಸ್ಕು್ಯಲರ್‌ ಸಮಸ್ಯೆ ಹೊಂದಿರುವವರಿಗೆ, ಕ್ರೀಡಾಪಟುಗಳ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳ ಚಿಕಿತ್ಸಾ ವೇಳೆಯಲ್ಲಿ ನೆರವಾಗುತ್ತದೆ. ಎಚ್‌ಬಿಒ2 ಚಿಕಿತ್ಸೆಯ ಅವಧಿ ಸಾಮಾನ್ಯವಾಗಿ ಒಂದೂವರೆ ಗಂಟೆಯಿಂದ 2 ಗಂಟೆಗಳ ಅವಧಿಯದ್ದಾಗಿರುತ್ತದೆ ಎಂದರು.

ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆದಂತೆ. ಹೀಗಾಗಿ ಸಾಕಷ್ಟುಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟುಬದಲಾವಣೆ ತರುವ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.

ಕರ್ನಾಟಕದ ದಂತ ಶಿಕ್ಷಣಕ್ಕೆ ಡಾ ರಾಮಚಂದ್ರ ಪಿತಾಮಹ
ವೈದ್ಯಕೀಯ ಚಿಕಿತ್ಸೆಯಲ್ಲಿ ತಂತ್ರಜ್ಞಾನದ ಬಳಕೆ ಚಿಕಿತ್ಸಾ ವಿಧಾನ ಮತ್ತು ರೋಗಿಗಳಿಗೆ ಸಹಾಯ ನೀಡಿದೆ. ಆದರೆ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿಗೆ ಡಾ. ಎಸ್‌. ರಾಮಚಂದ್ರ ಅವರ ಕೊಡುಗೆ ಅಮೂಲ್ಯವಾದದ್ದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ಹಾವೇರಿ ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಕ್ಲೋಸ್: ಗರ್ಭಿಣಿಯರ ಕಷ್ಟ ಕೇಳೋರಿಲ್ಲ..!

ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಆವರಣದಲ್ಲಿ ಡಾ. ಎಸ್‌. ರಾಮಚಂದ್ರ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಸಚಿವರು, 1958ರಲ್ಲಿ ಅರಂಭವಾದ ಈ ಸಂಸ್ಥೆ 6 ದಶಕಗಳಲ್ಲಿ ಇಷ್ಟುಎತ್ತರಕ್ಕೆ ಬೆಳೆಯಲು ಡಾ. ಎಸ್‌. ರಾಮಚಂದ್ರ ಅವರ ಕೊಡುಗೆ ಅತ್ಯಮೂಲ್ಯ. ಅವರ ಬದ್ಧತೆ, ದೂರದೃಷ್ಟಿ, ನಿಸ್ವಾರ್ಥ ಸೇವೆ ದಂತ ವೈದ್ಯಕೀಯ ಚಿಕಿತ್ಸೆಯ ಅಭಿವೃದ್ಧಿಗೆ ಕಾರಣ. ಕರ್ನಾಟಕದ ದಂತ ವೈದ್ಯಕೀಯ ಶಿಕ್ಷಣಕ್ಕೆ ಡಾ. ರಾಮಚಂದ್ರ ಅವರು ಪಿತಾಮಹ ಎಂದು ಹೇಳಿದರು.

ಸರ್ಕಾರಿ ದಂತ ವೈದ್ಯಕೀಯ ಚಿಕಿತ್ಸೆಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಲೇಸರ್‌ ರಿಸಚ್‌ರ್‍ ಸೆಂಟರ್‌ ಆರಂಭಿಸಲಾಗಿದೆ. ರಾಜೀವ್‌ ಗಾಂಧಿ ಯೂನಿವರ್ಸಿಟಿ ಆಫ್‌ ಹೆಲ್ತ್‌ ಸೈನ್ಸ್‌ ಮೂಲಕ ಆರಂಭವಾಗಿರುವ ಈ ಚಿಕಿತ್ಸೆಯನ್ನು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ನೀಡಲಾಗುತ್ತಿದೆ. ಇದರ ಜೊತೆಗೆ ಮಲ್ಟಿಪ್ಲೆಕ್ಸ್‌ ಪಿಸಿಆರ್‌ ಸೇರಿದಂತೆ ಹಲವು ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆಗಳು ಓರಲ… ಪ್ಯಾಥೋಲಜಿ ವಿಭಾಗದಲ್ಲಿ ಲಭ್ಯವಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆ, ನ್ಯಾಷನಲ… ಓರಲ… ಹೆಲ್ತ… ಕಾರ್ಯಕ್ರಮದಡಿ ಹಲವು ಚಿಕಿತ್ಸೆಗಳನ್ನು ನೀಡುತ್ತಿದೆ. ಇದಕ್ಕಾಗಿ ಮೊಬೈಲ… ಡೆಂಟಲ… ಕೇರ್‌ ಯೂನಿಟ್‌ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಹಲವು ಕಡೆಗಳಲ್ಲಿ ಕ್ಯಾಂಪ್‌ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಬಡ ವ್ಯಕ್ತಿಗೂ ದುಬಾರಿ ಆಗಿರುವ ಚಿಕಿತ್ಸೆ ಸಿಗಬೇಕು ಅನ್ನುವುದು ಸರ್ಕಾರದ ಉದ್ದೇಶ ಎಂದು ಹೇಳಿದರು.