ವಿದ್ಯಾರ್ಥಿಗಳಿಗೆ ಪರೀಕ್ಷೆ ‌ನಡೆಸುವ ಮುನ್ನ ವ್ಯಾಕ್ಸಿನ್ ಹಾಕಿಸಿ  ಸರ್ಕಾರಕ್ಕೆ ಸಾಂಕ್ರಾಮಿಕ ರೋಗ ಸೋಂಕು ಶಾಸ್ತ್ರಜ್ಞ ಈಗಾಗಲೇ ಫೈಜರ್‌ ಹಾಗೂ ಮಾಡರ್ನಾ ಲಸಿಕೆಗಳು ತುರ್ತು ಬಳಕೆಗೆ ಅನುಮತಿ 

ಬೆಂಗಳೂರು (ಮೇ.31): ವಿದ್ಯಾರ್ಥಿಗಳಿಗೆ ಪರೀಕ್ಷೆ ‌ನಡೆಸುವ ಮುನ್ನ ವ್ಯಾಕ್ಸಿನ್ ಹಾಕಿಸಿ ಎಂದು ಸರ್ಕಾರಕ್ಕೆ ಸಾಂಕ್ರಾಮಿಕ ರೋಗ ಸೋಂಕು ಶಾಸ್ತ್ರಜ್ಞ ಡಾ.‌ಗಿರಿಧರ್‌ಬಾಬು ಸಲಹೆ ನೀಡಿದ್ದಾರೆ. 

 ಈಗಾಗಲೇ ಫೈಜರ್‌ ಹಾಗೂ ಮಾಡರ್ನಾ ಲಸಿಕೆಗಳು ತುರ್ತು ಬಳಕೆಗೆ ಅನುಮತಿ ಪಡೆದಿದೆ. ಅಗತ್ಯ ಇರುವಷ್ಟು ‌ಲಸಿಕೆಗಳನ್ನ ತರಿಸಿಕೊಂಡು ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದು ಉತ್ತಮ ಎಂದು ಅವರು ಹೇಳಿದ್ದಾರೆ. 

Scroll to load tweet…

12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸಿ ಬಳಿಕ 10 ಹಾಗೂ 12 ನೇ ತರಗತಿ ಪರೀಕ್ಷೆಗಳನ್ನ ನಡೆಸಿ ಎಂದು ಸರ್ಕಾರಕ್ಕೆ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ. 

ಸದ್ಯ ರಾಜ್ಯದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona