ನಗರದ ಕಾಮಾಕ್ಯ ಜಂಕ್ಷನ್‌ ಹಾಗೂ ಸಾರಕ್ಕಿ ಜಂಕ್ಷನ್‌ನ ಮೇಲ್ಸೇತುವೆಗಳ ನಿರ್ಮಾಣಕ್ಕೆ ನಿಗದಿ ಪಡಿಸಲಾದ ಅನುದಾನವನ್ನು ರಸ್ತೆ, ಚರಂಡಿ ದುರಸ್ತಿ, ಉದ್ಯಾನ, ಮೈದಾನ ಅಭಿವೃದ್ಧಿಗೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು (ಮಾ.20) : ನಗರದ ಕಾಮಾಕ್ಯ ಜಂಕ್ಷನ್‌ ಹಾಗೂ ಸಾರಕ್ಕಿ ಜಂಕ್ಷನ್‌ನ ಮೇಲ್ಸೇತುವೆಗಳ ನಿರ್ಮಾಣಕ್ಕೆ ನಿಗದಿ ಪಡಿಸಲಾದ ಅನುದಾನವನ್ನು ರಸ್ತೆ, ಚರಂಡಿ ದುರಸ್ತಿ, ಉದ್ಯಾನ, ಮೈದಾನ ಅಭಿವೃದ್ಧಿಗೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ರೇಷ್ಮೆ ಮಂಡಳಿ ಜಂಕ್ಷನ್‌(Silk Board Junction)ನಿಂದ ನಾಯಂಡಹಳ್ಳಿ(Nayandahalli)ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌(Signal free corridor) ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಅದರ ಅಂಗವಾಗಿ ಕಾಮಾಕ್ಯ ಜಂಕ್ಷನ್‌ ಹಾಗೂ ಸಾರಕ್ಕಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಈ ಮಾರ್ಗದಲ್ಲಿ ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿ ನಡೆಯಲಿದೆ. ಹೀಗಾಗಿ ಬಿಬಿಎಂಪಿಯಿಂದ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳುವುದನ್ನು ಕೈಬಿಟ್ಟಿದೆ. ಇದರ ಬದಲು ಬಿಎಂಆರ್‌ಸಿಎಲ್‌ನಿಂದಲೇ ಮೆಟ್ರೋ ಮಾರ್ಗದ ಜತೆಗೆ ವಾಹನ ಸಂಚರಿಸುವ ಮೇಲ್ಸೇತುವೆ (Double decker fly over) ನಿರ್ಮಿಸುವ ಹೊಣೆ ನೀಡಲಾಗಿದೆ.

ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ 1-2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸೌಲಭ್ಯ!

ಹೀಗಾಗಿ ಅಮೃತ ನಗರೋತ್ಥಾನ ಅನುದಾನದಲ್ಲಿ ಮೇಲ್ಸೇತುವೆಗಳ ನಿರ್ಮಾಣಕ್ಕಾಗಿ ನಿಗದಿ ಮಾಡಲಾಗಿದ್ದ .170.50 ಕೋಟಿ ಅನುದಾನದ ಪೈಕಿ .130 ಕೋಟಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಮರು ಹಂಚಿಕೆ ಮಾಡಲಾಗಿದೆ.

.130 ಕೋಟಿ ಅನುದಾನದಲ್ಲಿ ಮೈದಾನಗಳ ಅಭಿವೃದ್ಧಿ, ಉದ್ಯಾನಗಳಲ್ಲಿ ವಾಕಿಂಗ್‌ ಪಥ ನಿರ್ಮಾಣ, ಆಸನಗಳ ವ್ಯವಸ್ಥೆ ಸೇರಿ ಇನ್ನಿತರ ಕಾಮಗಾರಿ ಅನುಷ್ಠಾನ, ಚರಂಡಿ, ರಸ್ತೆಗಳ ದುರಸ್ತಿಗೆ ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಅದರ ಜತೆಗೆ ತೋಟಗಾರಿಕಾ ಇಲಾಖೆ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ವಿದ್ಯುತ್‌ ಸಂಬಂಧಿಸಿದ ಕಾಮಗಾರಿಗಳನ್ನೂ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.

Bengaluru: ಮಾ.10ರ ನಂತರ ಕೆ.ಆರ್.ಪುರ- ವೈಟ್‌ಫೀಲ್ಡ್‌ ಮೆಟ್ರೋ ಮಾರ್ಗ ಆರಂಭ: ಐಟಿ ಉದ್ಯೋಗಿಗಳಿಗೆ ಸಂತಸದ ಸುದ್ದಿ

ಪಾದಚಾರಿ ಮಾರ್ಗಕ್ಕೆ .30 ಕೋಟಿ

₹.170.50 ಕೋಟಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ನೀಡಿದ ನಂತರ ಉಳಿಯುವ ಮೊತ್ತವನ್ನು ಬನಶಂಕರಿ ಜಂಕ್ಷನ್‌ನಲ್ಲಿ ನಿರ್ಮಿಸಲಿರುವ ಪಾದಚಾರಿ ಮೇಲ್ಸೇತುವೆಗೆ ಬಳಸಿಕೊಳ್ಳಲಾಗುತ್ತಿದೆ. ಬನಶಂಕರಿ ಜಂಕ್ಷನ್‌ನಲ್ಲಿ ಬಸ್‌ ನಿಲ್ದಾಣ, ಮೆಟ್ರೋ ನಿಲ್ದಾಣ, ಬನಶಂಕರಿ ದೇವಸ್ಥಾನ ಹಾಗೂ ಇತರ 5 ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ 50ರಿಂದ 55 ಕೋಟಿ ರು. ವೆಚ್ಚವಾಗಲಿದೆ. ಈ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ಮಾಡಲಿದ್ದು, ಅದಕ್ಕೆ ಬಿಬಿಎಂಪಿಯಿಂದ 30 ಕೋಟಿ ರು. ನೀಡಬೇಕಿದೆ.