ಶನಿ ಮಹಾತ್ಮ ದೇವಸ್ಥಾನಕ್ಕೆ ತಂದ ಹೂವಿನ ಹಾರದ ಒಳಗೆ ಮಾಂಸ ಇಟ್ಟವರ ಬಂಧನ!

ಶನಿ ಮಹಾತ್ಮನ ದೇವಸ್ಥಾನದ ಒಳಗೆ ಮಾಂಸಾಹಾರ ತಂದಿಟ್ಟ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದೇವಸ್ಥಾನದ ಒಳಗೆ ಮಾಂಸವನ್ನು ಇಟ್ಟು ಬಂದರೆ ಮೂರು ಸಾವಿರ ನೀಡುವುದಾಗಿ ಹೇಳಿ ಇವರಿಬ್ಬರನ್ನು ಕಳಿಸಲಾಗಿತ್ತು ಎಂದು ವರದಿಯಾಗಿದೆ.
 

Doddaballapur Shani Temple Meat Inside garland Chikka Madhure san

ಬೆಂಗಳೂರು (ಮಾ.12): ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸಪ್ರಸಿದ್ಧ ಚಿಕ್ಕಮಧುರೆ ಶನಿ ಮಹಾತ್ಮನ ದೇವಸ್ಥಾನದ ಒಳಗೆ ಕಿಡಿಗೇಡಿಗಳು ಮಾಂಸಾಹಾರ ತಂದಿರುವ ಘಟನೆ ನಡೆದಿದೆ. ಈ ಹಿಂದೆಯೂ ಕೂಡ ಈ ದೇವಸ್ಥಾನದಲ್ಲಿ ಮಾಂಸಾಹಾರವನ್ನು ತಂದಿಟ್ಟು ದೇವಸ್ಥಾನನ್ನು ಅಶುದ್ದಿ ಮಾಡಲು ಪ್ರಯತ್ನಿಸಿದ್ದರು. ಶನಿ ದೇವರ ಪೂಜೆಗೆ ಮಾಂಸದ ತುಂಡುಗಳನ್ನಿಟ್ಟ ಹೂವಿನ ಹಾರವನ್ನು ಕಿಡಿಗೇಡಿಗಳು ತಂದುಕೊಟ್ಟಿದ್ದರು. ಆ ಮೂಲಕ ಮೂರ್ತಿಯನ್ನ ಬಿನ್ನ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಮಾಂಸವಿದ್ದ ಹೂವಿನ ಹಾರವನ್ನು ಇಟ್ಟು ಎಸ್ಕೇಪ್‌ ಆಗಲು ಮುಂದಾಗಿದ್ದವರನ್ನು ದೇವಾಲಯದ ಸಿಬ್ಬಂದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣದಲ್ಲಿ ಹೊಸಕೋಟೆಯ ಕಂಬಲಹಳ್ಳಿಯ ರಾಜು ಹಾಗೂ ವೈಟ್‌ಫೀಲ್ಡ್‌ ಮೂಲದ ಸೋಮಶೇಖರ್‌ ಎನ್ನುವವರನ್ನು ಬಂಧಿಸಲಾಗಿದೆ. ಸೋಮಶೇಖರ್‌ ಎನ್ನುವವನು ಆಟೋ ಚಾಲಕನಾಗಿದ್ದಾರೆ. ಇತಿಹಾಸ ಪ್ರಸಿದ್ಧ ಕನಸವಾಡಿಯ ಶನಿಮಹಾತ್ಮ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಆದರೆ, ಹೂವಿನ ಹಾರ ದೇವಸ್ಥಾನದ ಗರ್ಭಗುಡಿಗೆ ಹೋಗುವ ಮುನ್ನವೇ ನಿಜಾಂಶ ಬೆಳಕಿಗೆ ಬಂದಿತ್ತು.

ದೇವಾಲಯಕ್ಕೆ ಬಂದಿದ್ದ ರಾಜು ಹಾಗೂ ಸೋಮಶೇಖರ್‌ ದೇವರ ಪೂಜೆಗಾಗಿ ಹಾರಗಳನ್ನು ತಂದಿದ್ದೇವೆ. ಅದನ್ನು ಕವರ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು. ಆದರೆ, ಅವರು ತಂದಿದ್ದ ಗುಲಾಬಿ ಹಾರದ ಮಧ್ಯ ಬರುವ ಪಾಸ್ಟಿಕ್‌ ಪೇಪರ್‌ ಒಳಗೆ ಮಾಂಸದ ತುಂಡುಗಳನ್ನು ಇರಿಸಿದ್ದರು. ಗರ್ಭಗುಡಿಯ ಒಳಗಡೆ ಹೂವಿನ ಹಾರವನ್ನು ತೆಗೆದುಕೊಂಡು ಹೋಗುವಾಗ ಮಾಂಸದ ತುಂಡು ಕೆಳಗೆ ಬಿದ್ದಿದೆ. ತಕ್ಷಣವೇ ಅದನ್ನು ಹೊರಗೆ ಎಸೆದ ದೇವಸ್ಥಾನದ ಸಿಬ್ಬಂದಿ ಬಳಿಕ ಇಡೀ ದೇವಸ್ಥಾನವನ್ನು ಶುಚಿ ಮಾಡಿದ್ದಾರೆ.

 

ದೇವಸ್ಥಾನದ ಆವರಣದ ಒಳಗೆ ಮಟನ್‌ ಕುರ್ಮಾ ಡೆಲಿವರಿ ಮಾಡಲು ನಿರಾಕರಿಸಿದ ವ್ಯಕ್ತಿಯನ್ನು ವಜಾ ಮಾಡಿದ ಸ್ವಿಗ್ಗಿ!

ಮೂರು ಸಾವಿರ ರೂಪಾಯಿಗಾಗಿ ಕೃತ್ಯ:  ಈ ಘಟನೆಯ ಕುರಿತತೆ ರಾಜು ಹಾಗೂ ಸೋಮಶೇಖರ್‌ ವಿರುದ್ಧ ದೊಡ್ಡ ಬೆಳವಂಗಲ ಪೊಲೀಸ್‌ ಠಾಣೆಗೆ ದೂರು ದಾಖಲಿಸಲಾಗಿದೆ. ಅಲ್ಲದೆ, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಕೇವಲ ಮೂರು ಸಾವಿರ ರೂಪಾಯಿಗೆ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ದೇಗುಲದ ಒಳಗೆ ಮಾಂಸಾಹಾರ ಇಟ್ಟು ಬಂದರೆ ಮೂರು ಸಾವಿರ ರೂಪಾಯಿ ನೀಡುತ್ತೇನೆ ಎಂದು ಇವರಿಬ್ಬರಿಗೆ ಅಪರಿಚಿತ ವ್ಯಕ್ತಿ ಆಮಿಷ ಒಡ್ಡಿದ್ದ ಎಂದು ತಿಳಿದುಬಂದಿದೆ. ಆದರೆ, ಈ ವ್ಯಕ್ತಿ ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

'ಮಂಗಳವಾರ ಮಟನ್‌ ಮಾಡ್ತೀರಾ' ಅನ್ನೋ ವಿಚಾರಕ್ಕೆ ದಂಪತಿಗಳ ಗಲಾಟೆ, ತಪ್ಪಿಸಲು ಹೋದವನ ಕೊಲೆ!

ಈ ಪ್ರಕರಣದಿಂದ ಎಚ್ಚೆತ್ತಿರುವ ದೇವಸ್ಥಾನದ ಆಡಳಿತಯ ಮಂಡಳಿ ಪೇಪರ್‌ ಒಳಗೊಂಡಿರುವ ಹಾರಗಳನ್ನು ನಿಷೇಧ ಮಾಡಿದೆ.  ಶನಿ ಮಹಾತ್ಮನ ಮಹಿಮೆಯ ಕಾರಣದಿಂದಲೇ ಆಗಬೇಕಾದ ಅನಾಹುತವೊಂದು ತಪ್ಪಿಹೋಗಿದೆ. 

Latest Videos
Follow Us:
Download App:
  • android
  • ios