* 3000 ಸ್ವಾಮೀಜಿಗಳಿದ್ದಾರೆ, ಯಾರೂ ಮಾತನಾಡುತ್ತಿಲ್ಲ* ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ನಾಡು-ನುಡಿಗೆ ಧಕ್ಕೆ ಆಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ* ದೇಶದ ಸಮಗ್ರತೆ, ಐಕ್ಯತೆ, ಧರ್ಮ ಹಾಗೂ ಸಂಸ್ಕೃತಿ ಉಳಿಸಲು ಧ್ವನಿ ಎತ್ತಬೇಕು
ಬೆಂಗಳೂರು(ಜೂ.19): ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಸ್ವಾಮೀಜಿಗಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ನಾಡು-ನುಡಿಗೆ ಧಕ್ಕೆ ಆಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಮೈಗೆ ಎಣ್ಣೆ ಹಚ್ಚಿಕೊಂಡು ಕುಳಿತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ಸಮುದಾಯಗಳ 3 ಸಾವಿರಕ್ಕೂ ಅಧಿಕ ಸ್ವಾಮೀಜಿಗಳಿದ್ದಾರೆ. ಎಲ್ಲ ಧರ್ಮ ಪೀಠಗಳಿಗೂ ಅಪಮಾನವಾಗಿದ್ದು, ಅವರಾರಯರೂ ಸುಮ್ಮನೆ ಕೂರಬಾರದು. ರಾಜಕಾರಣಕ್ಕೆ ಬೆಂಬಲ ನೀಡದಿದ್ದರೂ ಈ ದೇಶದ ಸಮಗ್ರತೆ, ಐಕ್ಯತೆ, ಧರ್ಮ ಹಾಗೂ ಸಂಸ್ಕೃತಿ ಉಳಿಸಲು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
Chargesheet Against DK Shivakumar: ಮೋದಿ ವಿರೋಧಿಸಿದ್ರೆ ತುಳೀತಾರೆ, ನಾನು ಬಗ್ಗಲ್ಲ; ಡಿಕೆಶಿ
ನಮ್ಮ ಪಾಲಿಗೆ ಸಂವಿಧಾನವೇ ಭಗವದ್ಗೀತೆ, ರಾಮಾಯಣ, ಬೈಬಲ್, ಕುರಾನ್ ಆಗಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಟ ಮಾಡುವ ಕಾಲ ಬಂದಿದೆ. ಎಲ್ಲರೂ ಎದ್ದೇಳಿ, ಹಳ್ಳಿ ಹಳ್ಳಿಗಳ ಕಡೆ ಹೆಜ್ಜೆ ಹಾಕಿ ಹೋರಾಟ ನಡೆಸಿ. ಇಂತಹ ಕೆಟ್ಟ ಸಂಪ್ರದಾಯವನ್ನು ಕಿತ್ತೊಗೆಯೋಣ. ನಾನು ಸದಾ ನಿಮ್ಮ ಜತೆ ಇರುತ್ತೇನೆ. ಶುಭ ಘಳಿಗೆಯಲ್ಲಿ ಹೋರಾಟ ಪ್ರಾರಂಭಿಸಿದ್ದು ಒಳ್ಳೆಯದಾಗಲಿದೆ. ಮುಂದಿನ 12 ತಿಂಗಳಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬಂದು ಈ ಪಠ್ಯ ರದ್ದಾಗುತ್ತವೆ ಎಂದು ಭರವಸೆ ನೀಡಿದರು.
