ಬೆಂಗಳೂರು (ಡಿ.09):  ಗೋಹತ್ಯೆ ನಿಷೇಧ ಕಾಯಿದೆ ತರಲು ಹೊರಟಿರುವ ಬಿಜೆಪಿ ಸರ್ಕಾರವು ರೈತರ ವಯಸ್ಸಾಗಿರುವ ಹಾಗೂ ನಿರುಪಯುಕ್ತ ಹಸುಗಳಿಗೆ ನಷ್ಟಪರಿಹಾರ ನೀಡುತ್ತದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ. 

ಗೋಹತ್ಯೆ ನಿಷೇಧ ಕಾಯಿದೆ ಕುರಿತು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ಕಾಯ್ದೆ ಜಾರಿಯಲ್ಲಿದ್ದು, ರಾಜಕೀಯಕ್ಕಾಗಿ ಮತ್ತೊಂದು ಕಾಯಿದೆ ಮಾಡಲು ಹೊರಟಿದೆ. 

ಬೆಳಗಾವಿ ಬೈ ಎಲೆಕ್ಷನ್: ಕೊನೆಗೂ ಪ್ರಬಲವಾಗಿ ಕೇಳಿಬಂತು ಒಬ್ಬರ ಹೆಸರು ..!

ಒಂದು ಕೋಮಿನ ವಿರುದ್ಧ ಹಗೆ ಸಾಧಿಸಲು ಹೊರಟಂತಿದೆ. ಹಳ್ಳಿಗಳಲ್ಲಿ ಬಡ ರೈತರು ತಾವು ಸಾಕಿದ್ದ ಹಸುಗಳು ವಯಸ್ಸಾಗಿ, ನಿರುಪಯುಕ್ತವಾದ ಮೇಲೆ ನಿರ್ವಹಣೆ ಕಷ್ಟವಾಗಿ ಮಾರುವುದು ಸಹಜ.

ಕಾಯ್ದೆ ಮೂಲಕ ಇದಕ್ಕೆ ಅಡ್ಡಿಪಡಿಸಲು ಹೊರಟಿರುವ ಸರ್ಕಾರವು ರೈತರಿಗೆ 50 ಸಾವಿರ ಅಥವಾ 1 ಲಕ್ಷ ರು. ಪರಿಹಾರ ನೀಡಬೇಕು. ಪರಿಹಾರ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.