'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಡನ್ನು ಹಾಡಿ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎಂದ ಡಿಕೆಶಿ
ಚಾಮುಂಡೇಶ್ವರಿ ಆಶೀರ್ವಾದ ಪಡೆದು ಬಂದಿದ್ದೇನೆ. ತಾಯಿ ಆಶೀರ್ವಾದ ಹಾಗೂ ಜಿಲ್ಲೆಯ ಜನತೆಯ ಶಕ್ತಿಯಿಂದ ನಮ್ಮ ಸರ್ಕಾರ ಬಂದಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ ಎಂದು ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರ (ಜು.05): ಚಾಮುಂಡೇಶ್ವರಿ ಆಶೀರ್ವಾದ ಪಡೆದು ಬಂದಿದ್ದೇನೆ. ತಾಯಿ ಆಶೀರ್ವಾದ ಹಾಗೂ ಜಿಲ್ಲೆಯ ಜನತೆಯ ಶಕ್ತಿಯಿಂದ ನಮ್ಮ ಸರ್ಕಾರ ಬಂದಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿದೆ ಎಂದು ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿ ನಡೆದ ಚಾಮುಂಡೇಶ್ವರಿ ಕರಗ ಮಹೋತ್ಸವ ಸಂಭ್ರಮದಲ್ಲಿ ಮಾತನಾಡಿದ ಅವರು ಸರ್ಕಾರ ಕೊಟ್ಟ ಐದು ಗ್ಯಾರಂಟಿಗಳನ್ನ ಈಡೇರಿಸುವ ಕೆಲಸ ಮಾಡ್ತಿದ್ದೇವೆ. ಮುಂದಿನ ತಿಂಗಳು ನೀವ್ಯಾರು ಕರೆಂಟ್ ಬಿಲ್ ಕಟ್ಟಂಗಿಲ್ಲ. ಗೃಹಜ್ಯೋತಿಯಲ್ಲಿ ನೊಂದಣಿ ಮಾಡಿಕೊಂಡವ್ರಿಗೆ ಉಚಿತ ವಿದ್ಯುತ್ ಎಂದರು.
ಈಗಾಗಲೇ ಜನ ಉಚಿತ ಬಸ್ ಯೋಜನೆ ಪಡೆದುಕೊಳ್ತಿದ್ದಾರೆ. ಹಾಗೆಯೇ ಭಾಗ್ಯಲಕ್ಷ್ಮೀ ಯೋಜನೆಗೆ ಎಲ್ಲರೂ ನೋಂದಣಿ ಮಾಡಿಕೊಳ್ಳಿ ಎಂದು ಭಾಗ್ಯದ ಲಕ್ಷ್ಮೀ ಬಾರಮ್ಮ ಎಂಬ ಹಾಡು ಹಾಡಿ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎಂದು ಡಿಕೆಶಿ ಹೇಳಿದರು. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳು ಜಾರಿಯಾಗುತ್ತವೆ. ಸರ್ಕಾರದ ಐದು ಗ್ಯಾರಂಟಿಗಳು ಈಡೇರದಿದ್ದಲ್ಲಿ ನಾನು ಮುಂದೆ ಲೋಕಸಭಾ ಚುನಾವಣೆಗೆ ಮತಕೇಳಲು ಬರಲ್ಲ. ಎಲ್ಲಾ ಭರವಸೆ ಈಡೇರಿಸುತ್ತೇವೆ. ಸರ್ಕಾರದ ಯೋಜನೆ ಪಡೆಯಲು ಯಾರೂ ಲಂಚ ಕೊಡಬೇಡಿ. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರೇ ಬಂದು ನಿಮಗೆ ಯೋಜನೆ ತಲುಪಿಸಲಿದ್ದಾರೆ. ರಾಮನಗರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ ಮಾಡ್ತೇನೆ ಎಂದು ಡಿಕೆಶಿ ಹೇಳಿದರು.
ಬಿಜೆಪಿ ಕಾಲದ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್ ಇಲ್ಲ?: ತಜ್ಞರುಗಳ ಅಭಿಪಾಯ ಪಡೆದು ಮುಂದಿನ ನಡೆ
ಶಕ್ತಿ ದೇವತೆಗಳಿಗೆ ಮಡಿಲಕ್ಕಿ ನೀಡಿದ ಶಾಸಕರು: ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಅಂಗವಾಗಿ 9 ಶಕ್ತಿ ದೇವತೆಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಸೋಮವಾರ ಸಂಜೆ ಮಡಿಲಕ್ಕಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಶಕ್ತಿದೇವತೆಯಾದ ಚಾಮುಂಡೇಶ್ವರಿ ಅಮ್ಮನ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ನಾನು ಶಾಸಕನಾದ ನಂತರ ನಾಡಹಬ್ಬ ಆಚರಣೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯ.
ಹಾಗಾಗಿ ಕರಗದ ಮಹೋತ್ಸವದ ಪ್ರಮುಖ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ, ಐಜೂರು ಆದಿಶಕ್ತಿ ದೇವತೆ, ಬಿಸಿಲು ಮಾರಮ್ಮ, ಮಗ್ಗದಕೇರಿ ಮಾರಮ್ಮ, ಭಂಡಾರಮ್ಮದೇವಿ, ಮುತ್ತಮಾರಮ್ಮ, ಶೆಟ್ಟಿಹಳ್ಳಿ ಆದಿಶಕ್ತಿ, ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ ನಡೆಯುವ ದೇವಾಲಯಗಳಲ್ಲಿ ದೇವಿಯವರಿಗೆ ಮಡಿಲಕ್ಕಿ ನೀಡಿ ಹಬ್ಬ ಆಚರಣೆ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ ಎಂದರು. ಪ್ರಸಕ್ತ ವರ್ಷ ಸಕಾಲದಲ್ಲಿ ಮಳೆಯಾಗದ ಪರಿಣಾಮ ರೈತರು ಕಂಗಾಲಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಆತಂಕ ಕಾಡುತ್ತಿದೆ. ಇಂತಹ ಸಮಯದಲ್ಲಿ ತಾಯಿಯ ಕೃಪೆಯಿಂದ ಉತ್ತಮ ಮಳೆ ಬೆಳೆಗಳಿಂದ ನಾಡು ಸಮೃದ್ಧಿಯಾಗಿರಬೇಕು.
ಕರಾವಳಿಯ 3 ಜಿಲ್ಲೆಗಳಿಗೆ ಇಂದು ‘ರೆಡ್ ಅಲರ್ಟ್’: 20 ಸೆಂ.ಮೀ.ವರೆಗೂ ಮಳೆಯಾಗುವ ಸಂಭವ
ಎಲ್ಲ ವರ್ಗದ ಜನರು ಅಣ್ಣತಮ್ಮಂದಿರಂತೆ ಶಾಂತಿ ಸೌಹಾರ್ದತೆಯಿಂದ ಬದುಕುವಂತೆ ಆಶೀರ್ವಾದ ಮಾಡುವಂತೆ ಕ್ಷೇತ್ರದ ಜನತೆ ಪರವಾಗಿ ಪ್ರಾರ್ಥಿಸಿದ್ದೇನೆ. ರಾಮ ರಹೀಮಾ ಎಲ್ಲರೂ ಒಂದೆ ಎಂದು ಭಾವಿಸಿರುವವನು ನಾನು, ನಾನು ಅಧಿವೇಶನದಲ್ಲಿ ಭಾಗವಹಿಸಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದೇನೆಂದರು. ಈ ವೇಳೆ ಮಾಜಿ ಶಾಸಕ ಕೆ.ರಾಜು, ಮುಖಂಡ ಡಿ.ಎಂ.ವಿಶ್ವನಾಥ್ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ನಗರಸಭೆ ಮಾಜಿ ಅಧ್ಯಕ್ಷ ಲೋಹಿತ್‌ಬಾಬು, ನಗರಸಭೆ ಸದಸ್ಯರಾದ ಆಯಿಷಾ, ವಿಜಯ್ ಕುಮಾರಿ, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಎಚ್.ರಂಜಿತ್ ಇತರರಿದ್ದರು.