ಡಿಯಾಜಿಯೋ 17 ಸಾವಿರ ಕೋಟಿ ರೂ.ಗೆ ಆರ್‌ಸಿಬಿ ಮಾರಾಟ ಮಾಡುವ ಆಲೋಚನೆಯಲ್ಲಿದೆ. ಸರ್ಕಾರದ ನಿಯಮಗಳ ಬದಲಾವಣೆ ಮತ್ತು ಚಿನ್ನಸ್ವಾಮಿ ಕಾಲ್ತುಳಿತ ಘಟನೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಕೆ ಶಿವಕುಮಾರ್ ಖರೀದಿಸುವ ಸಾಧ್ಯತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ಬೆಂಗಳೂರು (ಜೂ.10): ಆರ್‌ಸಿಬಿ (RCB) ಮಾಲೀಕರಾಗಿರುವ ಯುನೈಟೆಡ್ ಸ್ಪಿರಿಟ್ಸ್‌ನ (United Spirits) ಪೋಷಕ ಸಂಸ್ಥೆಯಾಗಿರುವ ಡಿಯಾಜಿಯೋ (Diageo) ಬರೋಬ್ಬರಿ 17 ಸಾವಿರ ಕೋಟಿ ರೂಪಾಯಿಗೆ ತಂಡವನ್ನು ಮಾರಾಟ ಮಾಡುವ ಆಯ್ಕೆಗಳ ಬಗ್ಗೆ ಯೋಚನೆ ಮಾಡುತ್ತಿದೆ. ಆರ್‌ಸಿಬಿಐ ಐಪಿಎಲ್ ಕಪ್ ಗೆಲುವಿನ ಬಳಿಕ ತಂಡದ ಮೌಲ್ಯ ಇನ್ನಷ್ಟು ಏರಿಕೆಯಾಗಿದ್ದು ಆ ನಿಟ್ಟಿನಲ್ಲಿ ಒಳ್ಳೆಯ ಮಾಲೀಕರು ಸಿಕ್ಕಲ್ಲಿ ತಂಡದ ಪಾಲನ್ನು ಮಾರಾಟ ಮಾಡುವ ಬಗ್ಗೆ ಡಿಯಾಜಿಯೋ ಗಂಭೀರವಾಗಿ ಯೋಚನೆ ಮಾಡುತ್ತಿದೆ.
ಚಿನ್ನಸ್ವಾಮಿ ಮೈದಾನದ ಕಾಲ್ತುಳಿತ ಹಾಗೂ ಭಾರತ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಿರುವ ಕಠಿಣ ನಿಯಮಗಳ ಅನುಸಾರವಾಗಿ ಟೀಮ್‌ಅನ್ನು ಮಾರಾಟ ಮಾಡಲು ಡಿಯಾಜಿಯೋ ಮುಂದಾಗಿದೆ. ಮೂಲಗಳ ಪ್ರಕಾರ ಭಾರತ ಸರ್ಕಾರ ಮುಂದಿನ ದಿನಗಳಲ್ಲಿ ಐಪಿಎಲ್‌ನಲ್ಲಿ ತಂಬಾಕು ಹಾಗೂ ಮದ್ಯಪಾನದ ಕುರಿತಾದ ಜಾಹೀರಾತುಗಳನ್ನು ನಿರ್ಭಂಧಿಸುವ ಸಾಧ್ಯತೆ ಇದೆ. ತಂಡಗಳ ಮಾಲೀಕರು ಕೂಡ ಇಂಥ ಕಂಪನಿಗಳು ಆಗಿರುವಂತಿಲ್ಲ. ಹಾಗೇನಾದರೂ ಇದ್ದಲ್ಲಿ ಅವರು ಬೇರಯದೇ ಸಂಸ್ಥೆ ಮಾಡಿಕೊಂಡು ಅದರ ಮಾಲೀಕತ್ವ ಸಂಪಾದಿಸಬೇಕು ಎನ್ನುವ ನಿಯಮ ತರುವ ಸಾಧ್ಯತೆ ಇದೆ.
ಇದರ ನಡುವೆ ಟೀಮ್‌ಅನ್ನು ಯಾರೆಲ್ಲಾ ಖರೀದಿ ಮಾಡಬಹುದು ಅನ್ನೋದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಒಂದೆಡೆ ಇಡೀ ಕಾಲ್ತುಳಿತ ಘಟನೆಗೆ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ದೂಷಣೆ ಮಾಡಲಾಗುತ್ತಿದ್ದು, ಅವರೇ ಈ ಟೀಮ್‌ಅನ್ನು ಖರೀದಿ ಮಾಡಿದರೆ ಒಳ್ಳೆಯದು ಅನ್ನೋವಂಥ ಪೋಸ್ಟ್‌ಗಳೂ ವೈರಲ್ ಆಗಿವೆ.
ಹಾಗೇನಾದರೂ ಡಿಕೆ ಶಿವಕುಮಾರ್ ಆರ್‌ಸಿಬಿ ಟೀಮ್ ಖರೀದಿ ಮಾಡಿದ್ರೆ ಅದಕ್ಕೆ ಏನೆಲ್ಲಾ ಹೆಸರಿಡಬಹುದು ಅನ್ನೋದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
'ಬೆಂಗಳೂರು ಡಿಕೆ ಬ್ರದರ್ಸ್', 'ಬಂಡೆ ಬೆಂಗಳೂರು ಚಾಲೆಂಜರ್ಸ್', 'ಸಿಡಿ ಶಿವು ಚಾಲೆಂಜರ್ಸ್ ಕರ್ನಾಟಕ', 'ಬೆಂಗಳೂರು ಬ್ರದರ್ಸ್ ಯುನೈಟೆಡ್' ಹೀಗೆ ಸಾಲು ಸಾಲು ತಮಾಷೆಯ ಹೆಸರುಗಳು ಬಂದಿವೆ.
'ಇನ್ನೂ ಕೆಲವರು ಆರ್‌ಸಿಬಿ ಟೀಮ್‌ನ ಮೌಲ್ಯ 17 ಸಾವಿರ ಕೋಟಿ, ಡಿಕೆಶಿ ಅಧಿಕೃತವಾಗಿ ಘೋಷಣೆ ಮಾಡಿರುವ ಆಸ್ತಿ 1100 ಕೋಟಿ. ಬೇನಾಮಿಯಾಗಿ ಹೂಡಿಕೆ ಮಾಡಿ ಡಿಕೆ ಶಿವಕುಮಾರ್ ಆಸ್ತಿ ಖರೀದಿ ಮಾಡಬಹುದು. ಆದರೆ, ತುಂಬಾ ರಿಸ್ಕ್ ಇದೆ..' ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಡಿಕೆಶಿ ಬಳಿ ಅಷ್ಟೆಲ್ಲಾ ಹಣ ಇದ್ಯಾ ಅಂತಲೂ ಪ್ರಶ್ನೆ ಮಾಡಿದ್ದಾರೆ.
ಯಾವೆಲ್ಲಾ ಹೆಸರುಗಳು ಬಂದಿವೆ ಅನ್ನೋದನ್ನ ನೋಡಿ..
ಬಂಡೆ ಬ್ಲಾಸ್ಟರ್ಸ್, ರಿಯಲ್ ಎಸ್ಟೇಟ್ ಚಾಲೆಂಜರ್ಸ್, ಆರ್‌ಸಿಬಿ ಬೆಂಗಳೂರು ಸೌತ್, ಬ್ರ್ಯಾಂಡ್ ಬೆಂಗಳೂರು ಚಾಲೆಂಜರ್ಸ್, ಗ್ರೇಟರ್ ಬೆಂಗಳೂರು ಚಾಲೆಂಜರ್ಸ್, ಟನಲ್ ರೋಡ್ ವಾರಿಯರ್ಸ್, ಕನಕಪುರ ಕಿಂಗ್ಸ್, ಬೆಂಗಳೂರು ಬ್ಲ್ಯೂಸ್, ಜೆಸಿಬಿ, ಆರ್-ಸಿಡಿ, ಡೆಪ್ಯುಟಿ ಸಿಎಂ ಬೆಂಗಳೂರು, ರಾಯಲ್ ಚಾಲೆಂಜರ್ಸ್ ಸೌತ್ ಬೆಂಗಳೂರು, ರಾಯಲ್ ಬೆಂಗಳೂರು ಕಾಂಗ್ರೆಸ್, ಕೊತ್ವಾಲ್ ಶಿಷ್ಯ & ಬ್ರೋಸ್ ಚಾಲೆಂಜರ್ಸ್, ಬಂಡೆ ಬಾಯ್ಸ್, ಡಿಬಿಸಿ-ಡೆತ್ ಬೈ ಕ್ರಿಕೆಟ್, ಕನಕಪುರ ವಾರಿಯರ್ಸ್ ಆಫ್ ಬೆಂಗಳೂರು, ರಾಯಲ್ ಕನಕಪುರ ಬಂಡೇಸ್, ಗ್ಲೋಬಲ್ ಚಾಲೆಂಜರ್ಸ್ ಬೆಂಗಳೂರು, ರಾಮನಗರ ಚಾಂಪಿಯನ್ಸ್, ಸಿಡಿ ಶಿವಣ್ಣ ಬ್ರದರ್ಸ್ ಬಳಗ, ತಿಹಾರ್ ಚಾಲೆಂಜರ್ಸ್, ಟನಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕನಕಪುರ ಬಂಡೆ ಬ್ರೇಕರ್ಸ್ ಅನ್ನೋ ಹೆಸರುಗಳು ಬಂದಿವೆ. ಇನ್ನೂ ಕೆಲವರು ಡಿಕೆಶಿ ಖರೀದಿ ಮಾಡಿದ್ರೆ ಟೀಮ್ ಟ್ಯಾಗ್‌ಲೈನ್ 'ನೀವ್ ಹೊಡಿತಾ ಇರ್ಬೇಕು, ನಾವ್ ಗೆಲ್ತಾ ಇರ್ಬೇಕು' ಅನ್ನೋ ಸಾಲು ಇರಬೇಕು ಅಂದಿದ್ದಾರೆ.