ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಧರ್ಮಸ್ಥಳದಲ್ಲಿ ಕಾಂಗ್ರೆಸ್ ಸಮಾವೇಶ, ಸಮುದಾಯ ಭವನ ಉದ್ಘಾಟನೆ ಮತ್ತು ಮಂಜುನಾಥ ಸ್ವಾಮಿ ದರ್ಶನದಲ್ಲಿ ಭಾಗವಹಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಜನರ ಬದುಕು ಮುಖ್ಯ, ಭಾವನೆಗಿಂತ ಬದುಕಿನ ರಾಜಕೀಯ ಮಾಡಬೇಕು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಧರ್ಮಸ್ಥಳ(ಏ.20): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಧರ್ಮಸ್ಥಳದಲ್ಲಿ ಕಾಂಗ್ರೆಸ್ ಸಮಾವೇಶ, ಸಮುದಾಯ ಭವನ ಉದ್ಘಾಟನೆ ಮತ್ತು ಮಂಜುನಾಥ ಸ್ವಾಮಿ ದರ್ಶನದಲ್ಲಿ ಭಾಗವಹಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಜನರ ಬದುಕು ಮುಖ್ಯ, ಭಾವನೆಗಿಂತ ಬದುಕಿನ ರಾಜಕೀಯ ಮಾಡಬೇಕು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಜನರಿಗೆ ಕಾಂಗ್ರೆಸ್ ಸರ್ಕಾರದಿಂದ ಸಹಾಯವಾಗುತ್ತಿದೆ ಹೊರತು ಬಿಜೆಪಿಗೆ ಓಟ್ ಹಾಕಿದರೂ ಯಾವುದೇ ಉಪಯೋಗವಾಗಿಲ್ಲ ಎಂದು ಶಿವಕುಮಾರ್ ಜನರಿಗೆ ಮನವರಿಕೆ ಮಾಡಿದರು. 'ಇದು ಹಿಂದುತ್ವದ ಭದ್ರಕೋಟೆ ಎಂದು ಯಾರು ಹೇಳಿದ್ದು ಎಂದು ಪ್ರಶ್ನಿಸಿದ ಅವರು, ಇದು ಹಿಂದುತ್ವದ ಭದ್ರಕೋಟೆ ಅಲ್ಲ, ಎಲ್ಲಾ ಧರ್ಮಗಳ ಭದ್ರಕೋಟೆ. ಇಲ್ಲಿ ಜಾತಿ-ಧರ್ಮದ ಮೇಲಲ್ಲ, ನೀತಿಯ ಮೇಲೆ ಎಲ್ಲವೂ ನಡೆಯುತ್ತದೆ. ಇಲ್ಲಿ ಕೃಷಿಕರು, ಜೈನರು, ಒಕ್ಕಲಿಗರು, ಬಿಲ್ಲವರು, ಲಿಂಗಾಯತರು ಎಲ್ಲರೂ ಒಂದೇ ಎಂದು ಒಗ್ಗಟ್ಟಿನ ಸಂದೇಶ ನೀಡಿದರು.

ಇದನ್ನೂ ಓದಿ:'ರಸ್ತೆಗುಂಡಿ ಮುಚ್ಚಿ ಎಂದ್ರೆ ಎಕ್ಸ್ ಖಾತೆ ಬ್ಲಾಕ್ ಮಾಡ್ತೀರಾ?' BBMP ವಿರುದ್ಧ ಬೆಂಗಳೂರಿಗರು ಕಿಡಿ!

ಜಾತಿಗಣತಿ ವಿಚಾರದಲ್ಲಿ ರಾಹುಲ್ ಗಾಂಧಿ ಪತ್ರವನ್ನು ತಾವು ನೋಡಿಲ್ಲವೆಂದು ಹೇಳಿದ ಶಿವಕುಮಾರ್, 'ಕಾಂಗ್ರೆಸ್ ಎಲ್ಲರಿಗೂ ನ್ಯಾಯ ಕೊಡುವ ಸಿದ್ಧಾಂತ ಹೊಂದಿದೆ. ತುಳಿತಕ್ಕೊಳಗಾದ ಸಮಾಜಕ್ಕೆ ಶಕ್ತಿ ನೀಡುತ್ತೇವೆ' ಎಂದರು. 90% ಜಾತಿಗಣತಿ ಕೆಲಸ ಮುಗಿದಿದ್ದು, ಉಳಿದ 10% ಪೂರ್ಣಗೊಳಿಸಿ ಎಲ್ಲರಿಗೂ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ, ತಾಳ್ಮೆಯಿಂದ ಇರಿ' ಎಂದು ಮನವಿ ಮಾಡಿದರು. ಈ ವೇಳೆ ವಕ್ಫ್ ವಿವಾದ ಸಂಬಂಧ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, 'ನಾನು ಆರ್. ಅಶೋಕ್ ವಕ್ತಾರನಲ್ಲ, ಕಾಂಗ್ರೆಸ್ ವಕ್ತಾರ' ಎಂದು ತಿರುಗೇಟು ನೀಡಿದರು.