ದೀಪಾವಳಿ: ಗಗನಕ್ಕೆ ಏರಿದ ಹೂವು, ಹಣ್ಣಿನ ಬೆಲೆ  ಈ ಬಾರಿ ಸಂಭ್ರಮದಿಂದ ಹಬ್ಬ ಆಚರಣೆಗೆ ಜನರ ಸಿದ್ಧತೆ ಇದಕ್ಕಾಗಿ ಭರ್ಜರಿ ಖರೀದಿ -ಹೂ ಪೂರೈಕೆಯಲ್ಲಿ ವ್ಯತ್ಯಯ ಹಾಗಾಗಿ ಹೆಚ್ಚಿದ ಬೆಲೆ ಆದರೂ ಖರೀದಿ ಜೋರು 

ಬೆಂಗಳೂರು (ಅ.24) : ಬೆಳಕಿನ ಹಬ್ಬ ದೀಪಾವಳಿಗೆ ಹೂವು ಹಣ್ಣು, ಪೂಜಾ ಪರಿಕರದÜ ಬೆಲೆ ದುಬಾರಿಯಾಗಿದ್ದರೂ ಗ್ರಾಹಕರಿಂದ ಗಿಜುಗುಟ್ಟಿದ ಮಾರುಕಟ್ಟೆಭರ್ಜರಿ ವಹಿವಾಟು ಕಂಡಿದೆ. ನರಕಚತುರ್ದಶಿ ಮುನ್ನಾದಿನ ಭಾನುವಾರ ಹೂ-ಹಣ್ಣು, ಫಲಾವಳಿಗಳು, ತರಕಾರಿ, ಅಲಂಕಾರಿಕ ಪರಿಕರ, ಬಟ್ಟೆಗಳ ಖರೀದಿ ಜೋರಾಗಿತ್ತು. ಎರಡು ವರ್ಷ ಕೋವಿಡ್‌ ನಿರ್ಬಂಧಗಳ ನಡುವೆ ಹಬ್ಬ ಆಚರಿಸಿದ್ದ ಜನತೆ ಈ ಬಾರಿ ಹೆಚ್ಚಿನ ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದರು. ದಿನವಿಡೀ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿತ್ತು. ರಾತ್ರಿ ಬಣ್ಣದ ವಿದ್ಯುತ್‌ ದೀಪಗಳಿಂದ ಸಾಂಪ್ರದಾಯಕ ಮಾರುಕಟ್ಟೆಸೇರಿದಂತೆ ವಿವಿಧ ಮಾಲ್‌ಗಳು ಕಳೆಗಟ್ಟಿದ್ದವು.

ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?

ನಗರದ ಪ್ರಮುಖ ಕೆ.ಆರ್‌.ಮಾರುಟ್ಟೆ, ಯಶವಂತಪುರ ಮಾರುಕಟ್ಟೆ, ರಸೆಲ್‌ ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿ ಬಜಾರ್‌, ಕಲಾಸಿಪಾಳ್ಯ, ಮಡಿವಾಳ, ಚಿಕ್ಕಪೇಟೆ, ಜಯ ನಗರ, ಶಿವಾಜಿ ನಗರ ಮಾರುಕಟ್ಟೆಜನಜಂಗುಳಿಯಿಂದ ಕೂಡಿತ್ತು. ಅನೇಕ ಮಾಲ್‌ಗಳಲ್ಲೂ ಜನರು ಖರೀದಿಯಲ್ಲಿ ತೊಡಗಿದ್ದರು. ಶೇಷಾದ್ರಿಪುರ, ಜಯ ನಗರ, ಜಾಲಹಳ್ಳಿ, ಕಮ್ಮಸಂದ್ರ ಸೇರಿ ಹಲವೆಡೆ ರಸ್ತೆ ಇಕ್ಕೆಲದಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ ರೈತರು, ವ್ಯಾಪಾರಿಗಳು ಫಲಾವಳಿಗಳ ವ್ಯಾಪಾರ ನಡೆಸಿದರು. ವರ್ತಕ ವಲಯ ಕೋವಿಡ್‌ ಹೊಡೆತದಿಂದ ಚೇತರಿಸಿಕೊಂಡಂತೆ ಕಂಡುಬಂತು.

ದೀಪಾವಳಿಯಂದು ಇವುಗಳನ್ನು ನೋಡಿದ್ರೆ ಹಣೆಬರಹವೇ ಬದಲಾಗುತ್ತೆ!

ಅಂಬರಕ್ಕೇರಿದ ಕನಕ!

ಮಳೆ ಕಾರಣದಿಂದ ಹೂವು ಹೆಚ್ಚಾಗಿ ಮಾರುಕಟ್ಟೆಗೆ ಬರದೇ ಇರುವುದರ ಜೊತೆಗೆ ಬೇಡಿಕೆ ಹೆಚ್ಚಳದ ಕಾರಣ ಬೆಲೆ ಹೆಚ್ಚಾಗಿದೆ. ತಮಿಳುನಾಡಿನಿಂದ ಬರುವ ಸುಗಂಧರಾಜ ಸೇರಿ ಹಲವು ಹೂವುಗಳು ಕಡಿಮೆ ಬಂದಿವೆ ಎಂದು 27 ವರ್ಷದಿಂದ ಕೆ.ಆರ್‌.ಮಾರುಕಟ್ಟೆಯಲ್ಲಿರುವ ವ್ಯಾಪಾರಿ ನಾರಾಯಣ ತಿಳಿಸಿದರು. ಕೆಲ ದಿನಗಳ ಹಿಂದೆ ಕೇಜಿಗೆ .600-700 ಇದ್ದ ಕನಕಾಂಬರ ಭಾನುವಾರ .1500 ರಿಂದ .2 ಸಾವಿರದವರೆಗೆ ಏರಿಕೆಯಾಗಿ ದಾಖಲೆ ಬರೆದಿದೆ. ದುಂಡುಮಲ್ಲಿಗೆ .400 ರಿಂದ .1 ಸಾವಿರ, ಕಾಕಡ .200 ರಿಂದ .500 ರವರೆಗೆ ಬೆಲೆ ಏರಿಕೆಯಾಗಿತ್ತು. ಆದರೆ, ಚೆಂಡು ಹೂ ಸೇವಂತಿಗೆ ಬೆಲೆ ಸಾಮಾನ್ಯವಾಗಿತ್ತು.

ಹಣ್ಣು ಕೊಂಚ ಏರಿಕೆ

ಹಣ್ಣಿನ ಬೆಲೆ ಹಬ್ಬದ ಕಾರಣಕ್ಕೆ ಕೊಂಚ ಏರಿಕೆಯಾಗಿತ್ತು. ಸೇಬು .70ರಿಂದ .150, ಕಿತ್ತಳೆ .60-80, ಮೂಸಂಬಿ .70ರಿಂದ .100ಕ್ಕೆ ಏರಿಕೆಯಾಗಿತ್ತು. ದ್ರಾಕ್ಷಿ .90ರಿಂದ .120 ಹಾಗೂ ದಾಳಿಂಬೆ ಹಣ್ಣು .80 ರಿಂದ .200 ರವರೆಗೆ ಬೆಲೆಯಿತ್ತು.

ಆಕಾಶ ದೀಪ ಹಣತೆಗೆ ಬೇಡಿಕೆ

ದೀಪಾವಳಿ ಆಕರ್ಷಣೆಯಾಗಿ ಮಾರುಕಟ್ಟೆಗೆ ಬಂದ ತರಹೇವಾರಿ ಹಣತೆಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಸ್ತಂಭದ ಹಣತೆ, ಲ್ಯಾಂಪ್‌, ಗಾಜಿನ ಹಣತೆ, ಮೇಣದ ಹಣತೆ, ಐದು, ಎಂಟು, ಹನ್ನೆರಡು ನೆಣೆಯ ಹಣತೆ, ಆಕಾಶ ದೀಪದ ಮಾದರಿ, ತೂಗುದೀಪ ಸೇರಿದಂತೆ ವಿವಿಧ ವಿನ್ಯಾಸದ ದೀಪಗಳು ಮಾರಾಟವಾದವು. ರಾಜಸ್ಥಾನ, ಜೋಧಪುರದಿಂದ ಹೆಚ್ಚಾಗಿ ಫ್ಯಾನ್ಸಿ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಸಣ್ಣ ಹಣತೆಗೆ .10ರಿಂದ ವಿಶೇಷ ವಿನ್ಯಾಸದ ದೊಡ್ಡ ಗಾತ್ರದ ಹಣತೆಗಳಿಗೆ .250- .400 ರವರೆಗೂ ಬೆಲೆಯಿದೆ. ಜೊತೆಗೆ ದುಬಾರಿಯಾಗಿದ್ದರೂ ಅಲಂಕಾರಿಕ ಪ್ಲಾಸ್ಟಿಕ್‌ ಹೂವುಗಳು, ಪರಪರೆ, ಹೂಕುಂಡ, ಆಕಾಶದೀಪ, ವಿದ್ಯುತ್‌ ದೀಪಗಳಿಗೂ ಬೇಡಿಕೆ ಸಾಕಷ್ಟಿತ್ತು.

ಪೂಜಾ ಸಾಮಗ್ರಿ ದುಬಾರಿ

ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಪೂಜೆಗೆ ಬಳಸುವ ಹಸಿ ಅಡಕೆ .5ಕ್ಕೆ ಒಂದು, ಗರಿಕೆ ಕಟ್ಟಿಗೆ .20-40, ಅಡಿಕೆ ಸಿಂಗಾರಕ್ಕೆ .200-600 ರವರೆಗೆ ಬೆಲೆಯಿತ್ತು. ಕಬ್ಬಿನ ಜೋಡಿಗೆ .120-200, ಸಣ್ಣ ಬಾಳೆ ಸಸಿಗೆ .40 ಇದ್ದರೆ ದೊಡ್ಡ ಸಸಿಗೆ .400 ರವರೆಗೆ ದರ ಹೆಚ್ಚಿತ್ತು. ಇನ್ನು ಜೋಳದ ತೆನೆ, ರಾಗಿತೆನೆ ಕಟ್ಟಿಗೆ .20 ಬೆಲೆಯಿತ್ತು. ಸಾಮಾನ್ಯವಾಗಿ .60-70 ಇರುತ್ತಿದ್ದ ನೂರು ಕರಿಎಲೆಯ ಕಟ್ಟು ಭಾನುವಾರ .100ಕ್ಕೆ ಹೆಚ್ಚಿತ್ತು. ಬಿಳಿಎಲೆ ಕಟ್ಟು .80 ಇತ್ತು.

ಪಟಾಕಿ ಬೆಲೆಯೂ ಹೆಚ್ಚು

ಇನ್ನು, ಕಡ್ಡಾಯವಾಗಿರುವ ಹಸಿರು ಪಟಾಕಿ ಬೆಲೆಯೂ ಹೆಚ್ಚಿತ್ತು. ಜನತೆ ಅಂಗಡಿಕಾರರಲ್ಲಿ ಪ್ರಶ್ನಿಸಿ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದುದು ಕಂಡುಬಂತು. ನೆಲಚಕ್ರ, ಹೂಕುಂಡ,ಲಕ್ಷ್ಮೇ ಬಾಂಬ್‌,ಸರ ಪಟಾಕಿ, ಸುರುಸುರು ಬತ್ತಿ ಸೇರಿ ಎಲ್ಲವುಗಳ ದರವೂ ಶೇ. 50ರಷ್ಟುಹೆಚ್ಚಳವಾಗಿತ್ತು. ಅದರಲ್ಲೂ ಆಗಸದಲ್ಲಿ ಚಿತ್ತಾರ ಮೂಡಿಸುವ ಫ್ಯಾನ್ಸಿ ಪಟಾಕಿಗಳ ದರ ಹೆಚ್ಚು ದುಬಾರಿಯಾಗಿತ್ತು.

ತರಕಾರಿ ಬೆಲೆ (ಕೆಜಿ)

  • ಬೀನ್ಸ್‌ .50
  • ಮೂಲಂಗಿ .30
  • ಗ್ರೀನ್‌ ಕ್ಯಾಪ್ಸಿಕಂ .60
  • ಯೆಲ್ಲೊ ಕ್ಯಾಪ್ಸಿಕಂ .100
  • ಬೆಂಡೆಕಾಯಿ .20
  • ಅವರೆಕಾಳು .30
  • ನುಗ್ಗೆಕಾಯಿ .10 ಕಟ್ಟು
  • ಬಿಟ್ರೂಟ್‌ .60
  • ಟೊಮೆಟೋ .20

ಹಣ್ಣುಗಳ ಬೆಲೆ (1ಕೆಜಿ)

  • ದಾಳಿಂಬೆ .80-250
  • ಮೂಸಂಬಿ .80-100
  • ಬಾಳೆಹಣ್ಣು .80
  • ಕಿತ್ತಳೆ .100
  • ಸೇಬು .120-250
  • ಸೀತಾಫಲ .150-250
  • ಪೀಯರ್ಸ್‌ .250
  • ದ್ರಾಕ್ಷಿ .150-250
  • ಡ್ರ್ಯಾಗನ್‌ ಫä್ರ್ಯಟ್‌ .250

ಹೂವುಗಳ ಬೆಳೆ (1 ಕೇಜಿ)

  • ಕನಕಾಂಬರ .1400-2000
  • ಸೇವಂತಿಗೆ .60-160
  • ಮಲ್ಲಿಗೆ .1000
  • ಸುಗಂಧರಾಜ .100​-80-60
  • ರೋಸ್‌ .120-140-160
  • ಚೆಂಡುಹೂವು .100
  • ತಾವರೆ .20-30 (ಒಂದಕ್ಕೆ)
  • ಕಾಕಡ .500
  • ಕಣಗಲ .300