ಬೆಂಗಳೂರು(ಆ.19): ಗೌರಿ-ಗಣೇಶ ಹಬ್ಬದ ಅಂಗವಾಗಿ ಜಯನಗರದಲ್ಲಿರುವ ಬಾಂಧವ ಸಂಸ್ಥೆಯು ಮೂರು ಸಾವಿರದ ಒಂದು (3001) ಗೌರಿ- ಗಣೇಶ ಮಣ್ಣಿನ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದೆ. 

ಮಣ್ಣಿನ ಗೌರಿ- ಗಣೇಶ ಮೂರ್ತಿಗಳನ್ನು ಜಯನಗರದ ಕಾಂಪ್ಲೆಕ್ಸ್‌ನಲ್ಲಿರುವ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ವಿತರಣೆ ಮಾಡಲಾಗುತ್ತದೆ. ಬಾಂಧವ ಸಂಸ್ಥೆಯ ಎನ್‌. ನಾಗರಾಜ್‌ ವಿತರಣೆ ಮಾಡುತ್ತಿದ್ದು, ಸಂಸ್ಥೆ ವತಿಯಿಂದ ಸತತವಾಗಿ ಆರು ವರ್ಷಗಳಿಂದ ಮೂರ್ತಿಗಳನ್ನು ವಿತರಣೆ ಮಾಡಿಕೊಂಡು ಬರಲಾಗುತ್ತಿದೆ. 

ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ನೀಡಬಹುದಾದ 4 ಉಡುಗೊರೆ!

ಆಸಕ್ತರು ಜಯನಗರಕ್ಕೆ ಆಗಮಿಸಿ ಮೂರ್ತಿಗಳನ್ನು ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. ದೂ. 94484 80777 ಸಂಪರ್ಕಿಸಬಹುದು.