ಬೆಂಗಳೂರು(ಜೂ.07): ಜೂನ್ 8ರಿಂದ ಪ್ರಾರ್ಥನಾ ಮಂದಿರ ಸೇರಿ ದೇವಾಲಯಗಳು ತೆರೆಯಲಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪ್ರಾರ್ಧನಾ ಮಂದಿರಗಳಿಗೆ ಹೋಗುವವರು ಅನುಸರಿಸಬೇಕಾದ ಮಾರ್ಗಸೂಚಿಗಳು ಹೀಗಿವೆ.

ರಾಜ್ಯದ ಪ್ರಾರ್ಥನಾ ಮಂದಿರಗಳಿಗೆ ಪ್ರತ್ಯೇಕವಾಗಿ ಮಾರ್ಗಸೂಚಿಗಳ ಪ್ರಕಟವಾಗಿದ್ದು, ಮಸೀದಿಗಳು, ದರ್ಗಾಗಳು, ಚಚ್‌ಗಳು, ಬೌದ್ಧಾಲಯಗಳು, ಜೈನ ಬಸದಿಗಳು, ಗುರುದ್ವಾರಗಳು, ಪಾರ್ಸಿ ಮಂದಿರಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳ ಪ್ರಕಟಿಸಲಾಗಿದೆ.

ಮಸೀದಿಗಳಲ್ಲಿ ಮಾರ್ಗಸೂಚಿಗಳು

 • ಮುಸಲ್ಮಾನರು ನಮಾಜ್ ಗೆ ತಮ್ಮದೇ ಸ್ವಂತ ಮ್ಯಾಟ್ ತರಬೇಕು.
 • ಮಸೀದಿಗಳ ಮುಂಭಾಗದಲ್ಲಿ ಕೊರೋನಾ ನಿಯಮಗಳಿರುವ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.. 
 • ನಮಾಜ್ ಗೂ ಮುನ್ನ ಮೈಕ್‌ಗಳಲ್ಲಿ ಕೊರೋನಾ ಜಾಗೃತಿ ಬಗ್ಗೆ ಅನೌನ್ಸಮೆಂಟ್ ಮಾಡಬೇಕು...
 • ರಾತ್ರಿ ಕೊನೆಯ ನಮಾಜ್ ಮಾಡಿದ ಬಳಿಕ , ನಮಾಜ್ ಮಾಡಿದ ಸ್ಥಳವನ್ನ ಕಡ್ಡಾಯವಗಿ ಸ್ವಚ್ಛತೆ ಮಾಡಬೇಕು..
 • ಮಸೀದಿಗಳಲ್ಲಿ ನಮಾಜ್ ವೇಳೆ ಸಾಮಾಜಿಕ ಅಂತರ ಕಡ್ಡಾಯ..6 ಅಡಿ ಅಂತರದಲ್ಲಿ  ನಮಾಜ್..
 • ನಮಾಜ್ ಮಾಡುವ ಜಾಗವನ್ನ ಸಾಮಾಜಿಕ ಅಂತರದಲ್ಲಿ ಮಾರ್ಕ್ ಮಾಡಬೇಕು.
 • ಮಸೀದಿ ಹೊರಗೆ ಚಪ್ಪಲಿಗಳನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆ...
 • ನಮಾಜ್ ಮಾಡಿವ ಸ್ಥಳ ಭರ್ತಿಯಾದ ತಕ್ಷಣ ಗೇಟ್ ಕ್ಲೋಜ್ ಮಾಡಬೇಕು..
 • ಶುಕ್ರವಾರ ಹೆಚ್ಚು ಜನ ಇರೋದ್ರಿಂದ ಮೂರು ಸಲ ಪ್ರಾರ್ಥನೆ ಮಾಡಲು ಸೂಚನೆ..(ಪ್ರತಿ ನಮಾಜ್ ಗೂ ಅರ್ಥ ಗಂಟೆ ಮಿಸಲು)
 • ಮಸೀದಿಗಳಲ್ಲಿ ಮುಂದಿನ ಆದೇಶದವರೆಗೂ ಮದ್ರಸಾ ನಡೆಸುವಂತಿಲ್ಲ*
 • ಮಸೀದಿಯಲ್ಲಿ ಖುರಾನ್ ಸೇರಿದಂತೆ  ಧಾರ್ಮಿಕ ಪುಸ್ತಕಗಳನ್ನು ಒದುವಂತಿಲ್ಲ...
 • ಮಸೀದಿಗಳಲ್ಲಿ ನಿಕಾ(ಮದುವೆಗಳಿಗೆ) ವ್ಯವಸ್ಥೆಗೆ ನಿರ್ಬಂಧ...
 • ಪರಸ್ಪರ ಹ್ಯಾಂಡ್ ಶೇಕ್, ಆಲಿಂಗನ ಮಾಡಿಕೊಳ್ಳಲು ಅವಕಾಶ ಇಲ್ಲ 

 ದರ್ಗಾಗಳಿಗೆ ಮಾರ್ಗಸೂಚಿಗಳು

 • ದರ್ಗಾಗಳನ್ನು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಮಾತ್ರ ತೆರೆಯಬೇಕು..
 • ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಿರಬೇಕು...
 •  ಅಡಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ..
 • ದರ್ಗಾಗಳಲ್ಲಿ ಮಾಲಾರ್ಪಣೆ, ಹೂ ಹಾಕುವುದು ನಿಷೇಧ
 • ದರ್ಗಾದಲ್ಲಿ ಹರಕೆಗಳನ್ನ ತೀರಿಸಲು ಮಾತ್ರ ಅವಕಾಶ..
 • ದರ್ಗಾದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುರಕ್ಷತೆಯಲ್ಲಿರಬೇಕು... ದರ್ಗಾಗಳಲ್ಲಿ ಹಸಿರು ಧ್ವಜ ಕಟ್ಟಲು ನಿರ್ಬಂಧ.. 

ಚರ್ಚ್ ಗಳಲ್ಲಿ ಮಾರ್ಗಸೂಚಿಗಳು

 • ಭಾನುವಾರದ ವಿಶೇಷ ಪ್ರಾರ್ಥನೆಯನ್ನು ಶನಿವಾರದಿಂದ ಆರಂಭಿಸಬೇಕು..
 • ಭಾನುವಾರದ ವಿಶೇಷ ಪ್ರಾರ್ಥನೆಗಳನ್ನು ಜನ ಜಾಸ್ತಿ ಇದ್ರೆ ವಾರದ ದಿನಗಳಲ್ಲೂ ವಿಸ್ತರಣೆಗೆ ಮಾಡುವಂತೆ ಸೂಚನೆ..
 • ಚರ್ಚ್ ಗಳ ಒಳಗೆ ಪ್ರೇಯರ್ ಗೆ ಕೂರಲು 6 ಅಡಿ ಸಾಮಾಜಿಕ ಅಂತರ ಕಡ್ಡಾಯ...
 • ಚರ್ಚ್ ಗಳಲ್ಲಿ ಕೊರೋನಾ ಮಾರ್ಗಸೂಚಿಗಳ ಫಲಕಗಳ ಪ್ರದರ್ಶನ ಮಾಡಬೇಕು...
 • ಚರ್ಚ್ ನಲ್ಲಿ ಗಂಟೆಗಳನ್ನು  ಮತ್ತು ಇನ್ನಿತರೆ ವಸ್ತುಗಳನ್ನ ಮುಟ್ಟುವುದಕ್ಕೆ ನಿರ್ಬಂಧ..
 • ಚರ್ಚ್ ನಲ್ಲಿ ಕ್ರೈಸ್ತ ಪ್ರಾರ್ಥನಾ ಗೀತೆಗಳಿಗೆ ಎಲ್ ಸಿಡಿ ಪ್ರೊಜೆಕ್ಟರ್ ಬಳಸಿ..
 • ಚರ್ಚ್ ಗಳಲ್ಲಿನ ಪ್ರಾರ್ಥನೆಯನ್ನ ಲೈವ್ ಸ್ಟ್ರಿಮಿಂಗ್ ಮಾಡಿ ಮನೆಯಲ್ಲಿ ವೀಕ್ಷಣೆ ಮಾಡುವಂತೆ ಮಾಡಿ..

ಸಿಖ್ಖರ ಗುರುದ್ವಾರಗಳಿಗೆ ಮಾರ್ಗಸೂಚಿಗಳು 

 • ಭಾನುವಾರದಂದು ಗುರುದ್ವಾರಗಳನ್ನು ತೆರೆಯಲು ಸಮಯ‌ ನಿಗದಿ
 • ಭಾನುವಾರದ ಪ್ರಾರ್ಥನೆಗಳಿಗೆ ದಿನದ ಮೂರು ಹೊತ್ತಿನಲ್ಲಿ ಪ್ರಾರ್ಥನೆಗೆ ಅವಕಾಶ
 • ಭಾನುವಾರದ ಬೆಳಗ್ಗೆ 8 ರಿಂದ 9, 
 • ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30,
 • ಸಂಜೆ 6.30 ರಿಂದ 7.30 ವರೆಗೆ ಪ್ರಾರ್ಥನೆಗೆ ಸಮಯ ನಿಗದಿ 
 • ಗುರುದ್ವಾರಗಳಲ್ಲಿ‌ ಪವಿತ್ರ ಗ್ರಂಥಗಳ ಪಠಣೆಗೆ  ನಿರ್ಬಂಧ
 •  ಗುರುದ್ವಾರಗಳ ಒಳಗೆ ಸಾಮಾಜಿಕ ಅಂತರದಲ್ಲಿ ಪ್ರಾರ್ಥನೆ ಮಾಡಬೇಕು..
 • ಸಾಮಾಜಿಕ‌ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ 

ಜೈನ ಬಸದಿಗಳಲ್ಲಿ‌ ಮಾರ್ಗಸೂಚಿಗಳು

 • ಜೈನ ಬಸದಿಗಳಲ್ಲಿ ನಿತ್ಯದ ಪ್ರಾರ್ಥನೆಗೆ ಸಮಯ ನಿಗದಿ
 • ಬೆಳಗ್ಗೆ 7 ರಿಂದ 9 ರೊಳಗೆ ಪ್ರಾರ್ಥನೆ
 • ಪ್ರಾರ್ಥನೆ ಗಳ ಆನ್ ಲೈನ್ ನೇರ ಪ್ರಸಾರಕ್ಕೆ ಸೂಚನೆ..
 • ಜೈನಬಸದಿಗಳಲ್ಲಿ ಎಲ್ಲ ಕೊರೋನಾ ಸುರಕ್ಷತಾ‌ ನಿಯಮಗಳ ಪಾಲನೆ ಕಡ್ಡಾಯ..
 • ಭಕ್ತಾದಿಗಳು ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ಸ್ ಕೊಡಬಾರದು...
 • ಪವಿತ್ರ ಗ್ರಂಥಗಳನ್ನ ಸುರಕ್ಷಿತವಾಗಿ ಇಡಬೇಕಾಗುತ್ತದೆ.