ಬೆಂಗಳೂರು ಮತ್ತು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದ ನಡುವೆ ನೇರ ತಡೆ ರಹಿತ ವಿಮಾನ ಸೇವೆ| 2021ರ ಜನವರಿ 11ರಿಂದ ಪ್ರಾರಂಭ| ಉಭಯ ನಗರಗಳ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸಂಪರ್ಕ| ಪಯಣದ ಅವಧಿ 16 ಗಂಟೆಗಿಂತ ಹೆಚ್ಚು| 

ಬೆಂಗಳೂರು(ನ.27): ಏರ್‌ ಇಂಡಿಯಾವು ಭಾರತದ ಸಿಲಿಕಾನ್‌ ಕಣಿವೆ ಬೆಂಗಳೂರು ಮತ್ತು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದ ನಡುವೆ ನೇರ ತಡೆ ರಹಿತ ವಿಮಾನ ಸೇವೆಯನ್ನು 2021ರ ಜನವರಿ 11ರಿಂದ ಪ್ರಾರಂಭಿಸಲಿದೆ. ಈ ವಿಮಾನದ ಟಿಕೆಟ್‌ ಕಾಯ್ದಿರಿಸಲು ಈಗಿನಿಂದಲೇ ಅವಕಾಶ ಕಲ್ಪಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಭಯ ನಗರಗಳ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸಂಪರ್ಕ ಇರಲಿದೆ. ಏರ್‌ ಇಂಡಿಯಾವು 228 ಆಸನ ಸಾಮರ್ಥ್ಯದ ಬೋಯಿಂಗ್‌ 777-200 ಎಲ್‌ಆರ್‌ ವಿಮಾನವನ್ನು ಈ ಸೇವೆಗೆ ಬಳಸಿಕೊಳ್ಳಲಿದೆ. 

ಸ್ಪೆಲ್ಲಿಂಗ್ ಮಿಸ್ಟೇಕ್ : ದುಬೈ ವಿಮಾನ ಪ್ರಯಾಣವೇ ರದ್ದು

ಪಯಣದ ಅವಧಿ 16 ಗಂಟೆಗಿಂತ ಹೆಚ್ಚಿರಲಿದ್ದು, ಇದು ಏರ್‌ ಇಂಡಿಯಾದ ಅತಿ ದೀರ್ಘ ಮತ್ತು ಅತಿ ದೂರದ ಸೇವೆ ಎಂಬ ದಾಖಲೆ ನಿರ್ಮಿಸಲಿದೆ.