‘ನನ್ನನ್ನೂ ಬಂಧಿಸಿ’ ಟ್ವೀಟ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆರಂಭಿಸಿರುವ ‘ನನ್ನನ್ನೂ ಬಂಧಿಸಿ’ ಟ್ವೀಟ್‌ ‘ನನ್ನದೂ ಬಹಿರಂಗ ಸವಾಲಿದೆ- ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕಳಿಸಿದಿರಿ ಎಂದು ಪ್ರಶ್ನೆ

ಬೆಂಗಳೂರು (ಮೇ.18): ಕೊರೋನಾ ಲಸಿಕೆಯನ್ನು ವಿದೇಶಕ್ಕೆ ಕಳಿಸಿದ್ದನ್ನು ಪ್ರಶ್ನಿಸಿದವರನ್ನು ಬಂಧಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಆರಂಭಿಸಿರುವ ‘ನನ್ನನ್ನೂ ಬಂಧಿಸಿ’ ಟ್ವೀಟ್‌ಗೆ ಬೆಂಬಲ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ನನ್ನದೂ ಬಹಿರಂಗ ಸವಾಲಿದೆ- ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕಳಿಸಿದಿರಿ? ನನ್ನನ್ನೂ ಬಂಧಿಸಿ’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದೇಶದಲ್ಲಿ ಹಿಟ್ಲರ್‌ನ ನಾಜಿ ಆಡಳಿತವಿದೆ. ಇಲ್ಲಿ ತಪ್ಪು ಒಪ್ಪುಗಳನ್ನು ಪ್ರಶ್ನೆ ಮಾಡಿದರೆ ಕೇಂದ್ರದ ದುಷ್ಟಸರ್ಕಾರ ಅದನ್ನು ವಿಚ್ಛಿದ್ರಕಾರಿಯಾಗಿ ದಮನ ಮಾಡುತ್ತಿದೆ. ಪ್ರಧಾನಿ ಮೋದಿಯವರೇ, ನಿಮ್ಮ ಹಿಟ್ಲರ್‌ ಧೋರಣೆಗೆ ಇಲ್ಲಿ ಯಾರೂ ಜಗ್ಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೋದಿ ವಿರುದ್ಧ ಟೀಕೆ: 'ಅರೆಸ್ಟ್ ಮೀ ಟೂ' ಎಂದ ರಾಹುಲ್ ಗಾಂಧಿ .

ಸರಣಿ ಟ್ವೀಟ್‌ಗಳ ಮೂಲಕ ರಾಹುಲ್‌ ಗಾಂಧಿಯವರ ‘ನನ್ನನ್ನೂ ಬಂಧಿಸಿ’ ಟ್ವೀಟ್‌ಗೆ ಬೆಂಬಲ ಸೂಚಿಸಿರುವ ಅವರು, ವಿದೇಶಗಳಲ್ಲಿಯೂ ಕೊರೋನಾ ಲಸಿಕೆ ಸಿದ್ಧವಾಗಿದ್ದು, ಆ ದೇಶಗಳು ಲಸಿಕೆಯನ್ನು ತಮ್ಮಲ್ಲೇ ಉಳಿಸಿಕೊಂಡವು. ಆದರೆ, ಈ ದೇಶದ ಪ್ರಧಾನಿಯವರು ಮಾಡಿದ್ದೇನು? ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟಂತೆ ಪ್ರಚಾರಕ್ಕಾಗಿ ಲಸಿಕೆಯನ್ನು ವಿದೇಶಕ್ಕೆ ಕೊಟ್ಟರು. ಈಗ ದೇಶದ ಜನ ಲಸಿಕೆಗಾಗಿ ಪರದಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವುದು ತಪ್ಪೇ ಹೇಳಿ ಮೋದಿಯವರೇ ಎಂದು ಪ್ರಶ್ನಿಸಿದ್ದಾರೆ.

Scroll to load tweet…

ಲಸಿಕೆಯ ಪರಿಣಾಮದ ಬಗ್ಗೆ ಮಾರ್ಗಸೂಚಿ ಹೊರಡಿಸಿ ಎಂದರೆ, ಕಾಂಗ್ರೆಸ್‌ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಮೋದಿಯವರು ಸುಳ್ಳು ಹೇಳುತ್ತಾರೆ. ತಮ್ಮ ಅಸಮರ್ಥತತೆಗೆ ವಿಪಕ್ಷಗಳನ್ನು ದೂರುವುದು ಎಷ್ಟುಸರಿ? ಕೊರೋನಾ ವಿಚಾರದಲ್ಲಿ ಮೋದಿ ಸರ್ಕಾರದ ಎಡವಟ್ಟುಗಳನ್ನು ನ್ಯಾಯಾಲಯಗಳೇ ಜನರ ಮುಂದೆ ತೆರೆದಿಟ್ಟಿವೆ. ಇದಕ್ಕಿಂತ ಇನ್ನೇನು ಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona