ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಳಿ ನಡೆದ ಘಟನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಆಡಳಿತದಲ್ಲೂ ಇಂತಹ ಘಟನೆಗಳು ನಡೆದಿವೆ ಎಂದು ಪ್ರಶ್ನಿಸಿದ್ದಾರೆ. ಸಚಿವ ಸಂತೋಷ್ ಲಾಡ್ ಕೂಡ ಘಟನೆಯನ್ನು ಖಂಡಿಸಿ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಳಗಾವಿ (ಜ.21): ಬೆಂಗಳೂರಿನ ಹೃದಯಭಾಗವಾಗಿರುವ ಕೆಆರ್ ಮಾರ್ಕೆಟ್ ಬಳಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಆಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ. ವಿಪಕ್ಷ ಬಿಜೆಪಿ, ರಾಜ್ಯದ ಜನರು ಸರ್ಕಾರದ ಮೇಲೆ ಪ್ರಶ್ನೆ ಮಾಡುತ್ತಿರುವ ಹೊತ್ತಿನಲ್ಲಿ ಬೆಳಗಾವಿ ಸಮಾವೇಶದಲ್ಲಿ ಘಟನೆಯ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಕಾಲದಲ್ಲಿ ರಾಜ್ಯದಲ್ಲಿ ರೇಪ್ ಆಗಿರಲಿಲ್ವಾ? ಎಂದುಸ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣವಾಗಿದೆ ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಗೆ ರಕ್ಷಣೆ ಸಿಗಬೇಕು. ಹಾಗಂತ ಆ ವಿಚಾರದಲ್ಲಿ ಆರೋಪ ಸರಿಯಲ್ಲ' ಎಂದು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬ ಟೀಕೆಗೆ ಸಿಟ್ಟಾದ ಸಿಎಂ, 'ಬಿಜೆಪಿ ಕಾಲದಲ್ಲಿ ರೇಪ್ ಆಗಿರಲಿಲ್ವಾ..? ಅನಗತ್ಯ ಟೀಕೆ ಬೇಡ. ಮಹಿಳೆಗೆ ಸೂಕ್ತ ರಕ್ಷಣೆ ಸಿಗಬೇಕು. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದೆ. ಬೆಳಗಾವಿ ಸಮಾವೇಶಕ್ಕೆ ರಾಹುಲ್ ಗಾಂಧಿ ಬರುತ್ತಿಲ್ಲ. ಅವರಿಗೆ ಆರೋಗ್ಯ ಸರಿಯಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಸಂತೊಷ್ ಲಾಡ್,' ಕ್ರೈಂ ಆಗಬಾರದು. ಇದನ್ನು ಖಂಡಿಸಬೇಕು. ಇದನ್ನು ತಡೆಯಲು ಇಲಾಖೆ ಇದೆ.ಕ್ರಮ ತೆಗೆದುಕೊಳ್ಳಲಿದೆ' ಎಂದು ಹೇಳಿದರು
ಈ ಥರದ ಕೃತ್ಯಗಳನ್ನ ಖಂಡಿಸಬೇಕು. ಕ್ರೈಂ ಆಗಬಾರದು ಎಂದರೂ ಆಗುತ್ತೆ. ಸರಕಾರ ಇಲಾಖೆ ತಪ್ಪಿತಸ್ಥರನ್ನ ಹಿಡಿಯಬೇಕು. ಮುಂದೆ ಈ ರೀತಿ ಕೃತ್ಯಗಳು ಆಗಬಾರದು. ತಡೆಗಟ್ಟುವ ಕೆಲಸ ಸರಕಾರ ಮಾಡುತ್ತದೆ ಎಂದರು.
ಬೆಂಗಳೂರಿನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಬಲಾತ್ಕಾರ!
ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ಸಮಾವೇಶ ಎಂಬ ಬಿಜೆಪಿ ಟೀಕೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಟೀಕೆ ಮಾಡೋದು ಬಿಟ್ಟು ಏನೂ ಬರಲ್ಲ. ಬಿಜೆಪಿ ಅವರು ಗಾಂಧಿನ ಒಪ್ಪೋದಿಲ್ಲ. ಸರಕಾರದ ಕಾರ್ಯಕ್ರಮ ಟೀಕೆ ಮಾಡೋದು ಅವರಿಗೆ ಕಾಮನ್.ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.
6 ವರ್ಷದ ಬಾಲಕಿಯ ರೇಪ್ & ಮರ್ಡರ್, ದಾರುಣ ಘಟನೆಗೆ ಸಾಕ್ಷಿಯಾದ ರಾಜಧಾನಿ!
ಸರಕಾರ ದುಡ್ಡಲ್ಲಿ ಸಮಾವೇಶ ಜೋಶಿ ಆರೋಪದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, '6500 ಕೋಟಿ ಮೋದಿ ಹೆಸರಲ್ಲಿ ಜಾಹೀರಾತಿಗೆ ಖರ್ಚು ಮಾಡಿದೆ. ಖೇಲೋ ಇಂಡಿಯಾಗೆ 1500 ಕೋಟಿ ನೀಡಿದ್ದಾರೆ. ಸ್ವಂತಕ್ಕಾಗಿ ಮೋದಿ ಖರ್ಚು ಮಾಡಿದ್ದಾರೆ ಈ ಬಗ್ಗೆ ಪ್ರಲ್ಹಾದ್ ಜೋಶಿ ಕೇಳಬೇಕು' ಎಂದು ಹೇಳಿದರು.
