ಧರ್ಮಸ್ಥಳದ ಮಾಜಿ ಕಾರ್ಮಿಕ ಎನ್ನಲಾದ ಅನಾಮಿಕ ವ್ಯಕ್ತಿ ಮಾಡಿದ ನೂರಾರು ಶವಗಳ ಹೂತಿಟ್ಟ ಆರೋಪ ಇದೀಗ ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ಅಡ್ವೋಕೇಟ್ ಕೆವಿ ಧನಂಜಯ್ ಕೆಲ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಜು.18) ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಮೇಲೆ ಸತತ ಆರೋಪಗಳು ಕೇಳಿಬರುತ್ತಿದೆ. ಸೌಜನ್ಯ ಪ್ರಕರಣ ಪ್ರತಿಭಟನೆ, ಹೋರಾಟಗಳ ನಡುವೆ ಇದೀಗ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಅನ್ನೋ ಅನಾಮಿಕ ವ್ಯಕ್ತಿಯ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ. ಧರ್ಮಸ್ಥಳದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾ*ರ ಹಾಗೂ ಕೊಲೆ ಪ್ರಕರಣದಲ್ಲಿ ನೂರಾರು ಮೃತೇದಹಗಳನ್ನು ಅಂದು ಕಾರ್ಮಿಕನಾಗಿ ಕೆಲಸದಲ್ಲಿದ್ದ ಅನಾಮಿಕ ವ್ಯಕ್ತಿ ಹೂತಿಟ್ಟಿರುವುದಾಗಿ ಆರೋಪಿಸಿದ್ದಾನೆ. ಈ ಕುರಿತು ದೂರು ದಾಖಲಿಸಿದ್ದು ಮಾತ್ರವಲ್ಲ, ನ್ಯಾಯಾಧೀಶರ ಮುಂದೆ ಹೇಳಿಕೆ ಕೂಡ ಈತ ದಾಖಲಿಸಿದ್ದಾನೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಭಾರಿ ಚರ್ಚೆಗಳು, ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಅಡ್ವೋಕೇಟ್ ಕೆವಿ ಧನಂಜಯ್ ಕೆಲ ಸ್ಪಷ್ಟನೆ ನೀಡಿದ್ದಾನೆ. ಈ ಶವಗಳ ಹೂತಿಟ್ಟ ಆರೋಪ ಪ್ರಕರಣಕ್ಕೂ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಿಕೊಂಡಿರುವ ಈ ಅನಾಮಿಕ ವ್ಯಕ್ತಿ, ತನ್ನ 1995 ರಿಂದ 2014ರ ಅವಧಿಯಲ್ಲಿ ನೂರಾರು ಶವಗಳನ್ನು ಪ್ರಭಾವಿಗಳ ನಿರ್ದೇಶದ ಮೇರೆಗೆ ಹೂತಿಟ್ಟಿರುವುದಾಗಿ ಆರೋಪಿಸಿದ್ದಾನೆ. ಬಹುತೇಕ ಹೆಣ್ಣುಕ್ಕಳ ಮೃತದೇಹಗಳೇ ಆಗಿವೆ. ಈ ವಿಚಾರ ಬಾಯ್ಬಿಟ್ಟರೆ ಕೊಲ್ಲುವ ಬೆದರಿಕೆ ಹಾಕಿದ್ದ ಕಾರಣ ಬಹಿರಂಗಪಡಿಸರಿಲ್ಲ. ಆದರೆ ಪಶ್ಚಾತ್ತಾಪದಿಂದ ದಿನದೂಡುತ್ತಿರುವ ಕಾರಣ ಇದೀಗ ಬಹಿರಂಗಪಡಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪ್ರಕರಣ ಕಾವು ಪಡೆದುಕೊಂಡಿದೆ. ಇದರ ನಡುವೆ ಪರ ವಿರೋಧಗಳು ತೀವ್ರಗೊಳ್ಳುತ್ತಿದ್ದಂತೆ ಏಷ್ಯಾನೆಟ್ ಸುವರ್ಣನ್ಯೂಸ್ ಚರ್ಚೆಯಲ್ಲಿ ಪಾಲ್ಗೊಂಡ ಅಡ್ವೋಕೇಟ್ ಕೆವಿ ಧನಂಜಯ್ ಕೆಲ ಸ್ಪಷ್ಟನೆ ನೀಡಿದ್ದಾರೆ.
ಸೌಜನ್ಯ ಪ್ರಕರಣ ತನಿಖೆ ಮುಗಿದ ಅದ್ಯಾಯ
ಸೌಜನ್ಯ ಪ್ರಕರಣಕ್ಕೂ ಅನಾಮಿಕ ಆರೋಪಿಸುತ್ತಿರುವ ಶವಗಳ ಹೂತಿಟ್ಟ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಸೌಜನ್ಯ ಪ್ರಕರಣ ತನಿಖೆ ಮುಗಿದ ಅಧ್ಯಾಯ ಎಂದು ಅಡ್ವೋಕೇಟ್ ಧನಂಜಯ್ ಹೇಳಿದ್ದಾರೆ. ಆದರೆ ಸೌಜನ್ಯ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ ಎಂದಿದ್ದಾರೆ. ತನಿಖೆಯಲ್ಲಿ ಹಲವು ಲೋಪಗಳನ್ನು ಮಾಡಿದ್ದಾರೆ ಎಂದು ಧನಂಜಯ್ ಹೇಳಿದ್ದಾರೆ.
ಕೆವಿ ಧನಂಜಯ್‌ಗೆ ಮಾಹಿತಿ ನೀಡಿರುವ ಅನಾಮಿಕ
ಧರ್ಮಸ್ಥಳದ ವಿರುದ್ಧ ಗಂಭೀರ ಆರೋಪ ಮಾಡಿರುವ ಅನಾಮಿಕ ವ್ಯಕ್ತಿ ತನಗೆ ಜೀವ ಬೆದರಿಕೆ ಇದೆ. ಹೀಗಾಗಿ ತನಗೇನಾದರೂ ಆದರೆ ಈ ಮಾಹಿತಿಗಳು ನಾಶವಾಗಬಾರದು ಎಂದು ಅಡ್ವೋಕೇಟ್ ಕೆವಿ ಧನಂಜಯ್ ಬಳಿ ಹೇಳಿಕೊಂಡಿರುವುದಾಗಿ ಅನಾಮಿಕ ವ್ಯಕ್ತಿ ಹೇಳಿದ್ದಾನೆ.ಹೀಗಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ಚರ್ಚೆಯಲ್ಲಿ ಕೆವಿ ಧನಂಜಯ್ ಪ್ರಕರಣ ಕುರಿತು ಕೆಲ ಸ್ಪಷ್ಟನೆ ನೀಡಿದ್ದಾರೆ. ಶವಗಳ ಹೂತಿಟ್ಟ ಪ್ರಕರಣವೇ ಬೇರೆ, ಸೌಜನ್ಯ ಪ್ರಕರಣವೇ ಬೇರೆ ಎಂದಿದ್ದಾರೆ. ಆದರೆ ಅನಾಮಿಕ ವ್ಯಕ್ತಿ ಆರೋಪಿಸಿದ ಪ್ರಭಾವಿ ವ್ಯಕ್ತಿಗಳು ಯಾರು ಅನ್ನೋದು ಕೆವಿ ಧನಂಜಯ್ ಬಹಿರಂಗಪಡಿಸಿಲ್ಲ.

