ದೆಹಲಿಯ ಸಫ್ದರ್‌ ಜಂಗ್‌ ಲೇನ್‌ನಲ್ಲಿರುವ ತಮ್ಮ ಮನೆಯಲ್ಲಿ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ಮಾಡುವ ಮೂಲಕ ದೇವೇಗೌಡರು ತಮ್ಮ ಪತ್ನಿಯೊಂದಿಗೆ ಗೃಹ ಪ್ರವೇಶವನ್ನು ನೆರವೇರಿಸಿದ್ದಾರೆ.

ನವದೆಹಲಿ[ನ.11]: ದೆಹಲಿಯ ಸಫ್ದರ್‌ ಜಂಗ್‌ ಲೇನ್‌ನಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಧಿಕೃತ ನಿವಾಸವನ್ನು ವಾಸ್ತು ಪ್ರಕಾರ ಪುನರ್‌ ನಿರ್ಮಾಣ ಮಾಡಲಾಗಿದೆ. ಶುಕ್ರವಾರ ಈ ಮನೆಯಲ್ಲಿ ವಾಸ್ತು ಹೋಮ ಮತ್ತು ಸತ್ಯನಾರಾಯಣ ಪೂಜೆ ಮಾಡುವ ಮೂಲಕ ದೇವೇಗೌಡರು ತಮ್ಮ ಪತ್ನಿಯೊಂದಿಗೆ ಗೃಹ ಪ್ರವೇಶವನ್ನು ನೆರವೇರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು ವಾಸ್ತು ಪ್ರಕಾರ ಬದಲಾವಣೆ ಮಾಡಿಕೊಂಡು ಮನೆಯನ್ನು ಪುನರ್‌ ನಿರ್ಮಿಸಿದ್ದಾರೆ.

ಮನೆಯ ಮುಂಭಾಗದಲ್ಲಿ ಎಡಭಾಗದಲ್ಲಿದ್ದ ಪ್ರವೇಶ ದ್ವಾರವನ್ನು ಮುಚ್ಚಿ , ಬಲಭಾಗದಲ್ಲಿ ಗೇಟ್‌ ಮಾಡಲಾಗಿದೆ. ಕಚೇರಿಯನ್ನು ಮನೆಯಿಂದ ಪ್ರತ್ಯೇಕಿಸಲಾಗಿದೆ. ಕಿಟಕಿ, ಬಾಗಿಲುಗಳನ್ನು ಬದಲಾಯಿಸಲಾಗಿದೆ. ಬೆಡ್‌ರೂಮ…ಗಳನ್ನು ಅತ್ತಿತ್ತ ಮಾಡಲಾಗಿದೆ.

ಮನೆಯ ಕಾಮಗಾರಿ ಶುರುವಾಗುತ್ತಿದ್ದಂತೆ ದೇವೇಗೌಡರು ತಮ್ಮ ವಾಸ್ತವ್ಯವನ್ನು ಕರ್ನಾಟಕ ಭವನಕ್ಕೆ ಬದಲಾಯಿಸಿದ್ದರು. ಮನೆಯ ಕಾಮಗಾರಿಯನ್ನು ಶೀಘ್ರವೇ ಮುಗಿಸಿಕೊಡುವಂತೆ ಕೇಂದ್ರದ ವಸತಿ ಸಚಿವರಿಗೂ ದೇವೇಗೌಡ ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು.