Asianet Suvarna News Asianet Suvarna News

ಅನ್‌ಲಾಕ್‌ 4.0 ಯಥಾವತ್‌ ಜಾರಿ: ಏನಿರುತ್ತೆ? ಏನಿರಲ್ಲ?

ಕರ್ನಾಟಕ ಸರ್ಕಾರ ‘ಅನ್‌ಲಾಕ್‌ 4.0’ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರಲ್ಲಿ ಯಾವ ಸೇವೆ ಇದೆ..? ಯಾವ ಸೇವೆ ಇಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.

Details About unlock 4 O in Karnataka
Author
Bengaluru, First Published Sep 1, 2020, 8:14 AM IST

ಬೆಂಗಳೂರು (ಸೆ.01):  ಕೇಂದ್ರ ಸರ್ಕಾರ ಲಾಕ್‌ಡೌನ್‌ ನಿರ್ಬಂಧಗಳನ್ನು ಇನ್ನಷ್ಟುಸಡಿಲಿಸಿದ ಬೆನ್ನ ಹಿಂದೆಯೇ ರಾಜ್ಯ ಸರ್ಕಾರ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದ ಬೆಂಗಳೂರು ಮೆಟ್ರೋ ರೈಲು ಸೇವೆ ಸೆ. 7ರಿಂದ ಆರಂಭ, ಸೆ. 21ರಿಂದ ಸಾಮಾಜಿಕ, ರಾಜಕೀಯ, ಕ್ರೀಡೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ 100 ಜನರ ಪರಿಮಿತಿಗೆ ಒಳಪಟ್ಟು ಅನುಮತಿ ನೀಡುವುದು ಸೇರಿದಂತೆ ಹಲವು ಅಂಶಗಳಿರುವ ‘ಅನ್‌ಲಾಕ್‌ 4.0’ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೇಂದ್ರದ ಮಾರ್ಗಸೂಚಿಯಂತೆ ಮೆಟ್ರೋ, ತರಬೇತಿ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಸರ್ಕಾರವು ಸಿದ್ಧತೆ ಕೈಗೊಂಡಿದೆ. ಪ್ರಮುಖವಾಗಿ ಕಂಟೈನ್ಮೆಂಟ್‌ ವಲಯದಲ್ಲಿ ಲಾಕ್‌ಡೌನ್‌ ಅವಧಿಯು ಸೆ.30ರವರೆಗೆ ಮುಂದುವರಿಸಿದೆ.

ಯಾವುದಕ್ಕೆ ಹಸಿರು ನಿಶಾನೆ?

ಸೆ.7ರಿಂದ ಬೆಂಗಳೂರು ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ಸೆ.21ರಿಂದ ಅನ್ವಯವಾಗುವಂತೆ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕಗಳು ಮತ್ತು ಇತರೆ ಬೃಹತ್‌ ಸಭೆಗಳಿಗೆ ಗರಿಷ್ಠ 100 ಮಂದಿಯ ಪರಿಮಿತಿಗೊಳಪಟ್ಟು ಅನುಮತಿ ನೀಡಲಾಗಿದೆ. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಧರ್ಮಲ್‌ ಸ್ಕಾ್ಯನಿಂಗ್‌, ಸ್ಯಾನಿಟೈಜರ್‌ ವ್ಯವಸ್ಥೆ ಕಡ್ಡಾಯ ಇರಲಿದೆ.

ಕೇಂದ್ರದಿಂದ ಅನ್‌ಲಾಕ್ 4.0 ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?...

ಭೌತಿಕವಾಗಿ ಶಾಲಾ ತರಗತಿಗಳ ಆರಂಭ ಇಲ್ಲ. ಆದರೆ, ಸೆ.20ರಿಂದ ಕಂಟೈನ್ಮೆಂಟ್‌ ವಲಯದ ಹೊರಗಿನ ಪ್ರದೇಶದಲ್ಲಿ ಮಾತ್ರ ಆನ್‌ಲೈನ್‌ ಬೋಧನೆ, ಟೆಲಿ ಸಮಾಲೋಚನೆಗಾಗಿ ಶಾಲೆಗೆ ಶೇ.50ರಷ್ಟುಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕರೆಯಬಹುದಾಗಿದೆ. ಸೆ.21ರಿಂದ ಅನ್ವಯವಾಗುವಂತೆ 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳು ಷರತ್ತಿನ ಮೇರೆಗೆ ಶಾಲೆಗೆ ಭೇಟಿ ನೀಡಬಹುದು.

ಉಳಿದಂತೆ, ಚಿತ್ರಮಂದಿರ, ಈಜುಕೊಳ, ಮನರಂಜನೆ, ಉದ್ಯಾನವನ, ರಂಗಮಂದಿರ ಮತ್ತು ಅಂತಹುದೇ ಸ್ಥಳ ಬಂದ್‌ ಆಗಿರಲಿವೆ. ಆದರೆ, ಬಯಲು ಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ನಿರ್ಬಂಧ ಇಲ್ಲ:

ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ವ್ಯಕ್ತಿಗಳ ಓಡಾಟಕ್ಕೆ ಮತ್ತು ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಯಾವುದೇ ಪ್ರತ್ಯೇಕ ಅನುಮತಿಯ ಅಗತ್ಯವು ಇಲ್ಲ. ಆದರೆ, ಹೊರ ರಾಜ್ಯದಿಂದ ಆಗಮಿಸುವವರು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.

Follow Us:
Download App:
  • android
  • ios