ರಾಜ್ಯಾದ್ಯಂತ ಸೆ. 2 ರಿಂದ 5ರವರೆಗೆ ಮುಂಗಾರು ಮತ್ತೆ ಆರ್ಭಟ|  ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ| ಆರೆಂಜ್‌ ಅಲರ್ಟ್‌ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ| 

ಬೆಂಗಳೂರು(ಸೆ.02): ರಾಜ್ಯಾದ್ಯಂತ ಸೆ. 2 ರಿಂದ 5ರವರೆಗೆ ಮುಂಗಾರು ಮತ್ತೆ ಆರ್ಭಟಿಸಲಿದ್ದು, ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಆರೆಂಜ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸೆ.3 ಮತ್ತು 4 ರಂದು ಅತೀ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಸೆ. 3ರಿಂದ 5 ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸೆ. 2ರಿಂದ 5 ರವರೆಗೆ ವ್ಯಾಪಕ ಮಳೆ ಬೀಳುವುದರಿಂದ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಇದೇ ವೇಳೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಹೆಚ್ಚು ಮಳೆಯಾಗುವ ಸಂಭವವಿದೆ. ಈ ವೇಳೆ ಉಷ್ಣಾಂಶ ಗರಿಷ್ಠ 30ರಿಂದ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು : ಇನ್ನೂ ಎರಡು ದಿನ ಅಬ್ಬರ

ಎಲ್ಲೆಲ್ಲಿ ಮಳೆ?:

ಸೆ.1ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು 9 ಸೆಂ.ಮೀ, ಚಾಮರಾಜನಗರದ ಬೇಗೂರು 7, ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ಮತ್ತು ಮಂಡ್ಯದ ಮಳವಳ್ಳಿ ತಲಾ 7, ಚಾಮರಾಜನಗರ 6, ಮಂಡ್ಯ, ತುಮಕೂರು ಜಿಲ್ಲೆಯ ತಿಪಟೂರು 5, ಕೋಲಾರದ ಮಾಲೂರು, ಮೈಸೂರಿನ ಸರಗೂರು, ಮಂಡ್ಯದ ಮದ್ದೂರಿನಲ್ಲಿ 4 ಸೆಂ.ಮೀ ಮಳೆ ಬಿದ್ದಿದೆ.