Asianet Suvarna News Asianet Suvarna News

ಪ್ರತಿಭಟಿಸಿದ್ದಕ್ಕೆ ಇಲಾಖೆ ನೋಟಿಸ್‌: ಡಯಾಲಿಸಿಸ್‌ ನೌಕರರ ಆಕ್ರೋಶ

ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಡಯಾಲಿಸಿಸ್‌ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಡಯಾಲಿಸಿಸ್‌ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Department notice for protesting: Outrage of dialysis employees rav
Author
First Published Dec 2, 2023, 5:36 AM IST

ಬೆಂಗಳೂರು (ಡಿ.2) :  ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಡಯಾಲಿಸಿಸ್‌ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಡಯಾಲಿಸಿಸ್‌ ನೌಕರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಚಂದ್ರಶೇಖರ್‌, ಉಡುಪಿ ಜಿಲ್ಲೆಯ ಕಾರ್ಕಳದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡುವ ಮೂಲಕ ಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ನೋಡುತ್ತಿದೆ. ಆದರೆ ಇದಕ್ಕೆ ನಾವು ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಅತಂತ್ರ’ ಸ್ಥಿತಿ ನಿಭಾಯಿಸಲು ಇಂದು ಡಿಕೆ ಶಿವಕುಮಾರ ತೆಲಂಗಾಣಕ್ಕೆ!

ನಮಗೆ ಸೇವಾ ಭದ್ರತೆ ಒದಗಿಸಬೇಕು. ಪ್ರಸ್ತುತ ಇರುವ ಸಿಬ್ಬಂದಿ ಮುಂದುವರೆಸಬೇಕು. ಸಂಬಳ ಕಡಿಮೆ ಮಾಡಬಾರದು. 108 ಸಿಬ್ಬಂದಿಗೆ ನೀಡುವಂತೆ ನಮಗೂ ಮೂಲವೇತನ ಮತ್ತು ಹೆಚ್ಚುವರಿ ಸಂಬಳ ನೀಡಬೇಕು. ಏಜೆನ್ಸಿಗಳಿಂದ ಬರಬೇಕಾಗಿರುವ ಸಂಬಳ ಮತ್ತಿತರ ಸೌಲಭ್ಯಗಳನ್ನು ಸರ್ಕಾರದ ಮೂಲಕವೇ ನೀಡಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ಬಾರಿ ಮನವಿ ನೀಡಿ, ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ಜನ ಬೆಲೆ ಏರಿಕೆ ಹೇಗೆ ಎದುರಿಸಬೇಕು? ಇನ್ಫೋಸಿಸ್ ನಾರಾಯಣಮೂರ್ತಿಗೆ ಡಿಕೆಶಿ ಪ್ರಶ್ನೆ

Follow Us:
Download App:
  • android
  • ios