ಸ್ಪುಟ್ನಿಕ್‌ ಲಸಿಕೆಗೆ ಭಾರಿ ಬೇಡಿಕೆ : ಜನ ಕೇಳಿ ಪಡೆಯುತ್ತಿದ್ದಾರೆ

  • ಕೋವಿಡ್‌-19ರ ವಿರುದ್ಧ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಜೊತೆಗೆ ಸ್ಪುಟ್ನಿಕ್‌ ಕೂಡ ರಾಜ್ಯದಲ್ಲಿ ವಿತರಣೆ
  • ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ 10 ಲಕ್ಷ ಡೋಸ್‌ಗೆ ಬೇಡಿಕೆ
  • ರಷ್ಯಾ ಮೂಲದ ಸ್ಪುಟ್ನಿಕ್‌ ನೀಡಲು ಪ್ರಾರಂಭಿಸಿ ನಾಲ್ಕೈದು ದಿನ 
Demand Raised For Sputnik vaccine in Karnataka snr

ಬೆಂಗಳೂರು (ಜು.07):  ಕೋವಿಡ್‌-19ರ ವಿರುದ್ಧ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಜೊತೆಗೆ ಸ್ಪುಟ್ನಿಕ್‌ ಕೂಡ ರಾಜ್ಯದಲ್ಲಿ ವಿತರಣೆ ಆಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ನಡುವೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದಿಂದ 10 ಲಕ್ಷ ಡೋಸ್‌ಗೆ ಬೇಡಿಕೆ ಸಲ್ಲಿಸಲಾಗಿದೆ.

ನಾವು ರಷ್ಯಾ ಮೂಲದ ಸ್ಪುಟ್ನಿಕ್‌ ನೀಡಲು ಪ್ರಾರಂಭಿಸಿ ನಾಲ್ಕೈದು ದಿನ ಆಯಿತು. ಈಗಾಗಲೇ ಮೂರೂವರೆ ಸಾವಿರ ಜನ ಸ್ಪುಟ್ನಿಕ್‌ ಪಡೆದುಕೊಂಡಿದ್ದಾರೆ. ಅನೇಕರು ಸ್ಪುಟ್ನಿಕ್‌ ಅನ್ನು ಕೇಳಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಮಣಿಪಾಲ ಆಸ್ಪತ್ರೆಯ ಲಸಿಕೆ ಅಭಿಯಾನದ ಹೊಣೆ ಹೊತ್ತಿರುವ, ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ ಮೈಸೂರು ಹೇಳಿದ್ದಾರೆ.

ಸ್ಪುಟ್ನಿಕ್‌ ಲಸಿಕೆ ಪಡೆದಿರುವವರಲ್ಲಿ ಯಾವುದೇ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ಲಸಿಕೆ ಪಡೆದುಕೊಂಡವರಲ್ಲಿ ಯಾರೂ ಕೂಡ ಸಣ್ಣ ಅಥವಾ ಗಂಭೀರ ಅಡ್ಡ ಪರಿಣಾಮ ಆಗಿದೆ ಎಂದು ನಮಗೆ ತಿಳಿಸಿಲ್ಲ. ಲಸಿಕೆಯ ದಕ್ಷತೆ ಮತ್ತು ಪರಿಣಾಮ ಎಂಬುದು ಭಿನ್ನ ಪರಿಕಲ್ಪನೆಗಳು. ಎಲ್ಲ ಲಸಿಕೆಗಳಿಂದಲೂ ವೈರಾಣುವಿನ ವಿರುದ್ಧ ತಕ್ಕ ಮಟ್ಟಿನ ರಕ್ಷಣೆ ಇದ್ದೆ ಇರುತ್ತದೆ ಎಂದು ಡಾ. ಸತ್ಯನಾರಾಯಣ ತಿಳಿಸಿದ್ದಾರೆ.

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಕೊರೋನಾ ಏರಿಕೆ: ಹೆಚ್ಚಿದ ಆತಂಕ ...

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫನಾ)ದಿಂದ 10 ಲಕ್ಷ ಸ್ಪುಟ್ನಿಕ್‌ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ನಾವು ಒಕ್ಕೂಟದ ವತಿಯಿಂದ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ನಮಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಸ್ಪುಟ್ನಿಕ್‌ ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕೆ ಲಭ್ಯ ಇಲ್ಲ ಎಂದು ಫನಾದ ಅಧ್ಯಕ್ಷ ಡಾ.ಎಚ್‌.ಎಂ.ಪ್ರಸನ್ನ ಹೇಳಿದ್ದಾರೆ.

ರಾಜ್ಯದಲ್ಲಿ ಈವರೆಗೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ 2.40 ಕೋಟಿ ಡೋಸ್‌ ವಿತರಿಸಲಾಗಿದೆ. ಸ್ಪುಟ್ನಿಕ್‌ ಲಸಿಕೆ ಇನ್ನೂ ಸರ್ಕಾರದ ಲಸಿಕಾ ಅಭಿಯಾನದ ವ್ಯಾಪ್ತಿಯೊಳಗೆ ಬಂದಿಲ್ಲ. ಹಾಗೆಯೇ ಈ ಲಸಿಕೆಯನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ (ಮೈನಸ್‌ 18) ಸಂಗ್ರಹಿಸಿಡುವುದು ಸವಾಲಿನ ಸಂಗತಿಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios