Asianet Suvarna News Asianet Suvarna News

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮ ಮುನ್ನಲೆಗೆ ಫೆ.26ರಂದು ಸಾಣೇಹಳ್ಳಿ ಮಠದಲ್ಲಿ ಸಮಾವೇಶ

ಚುನಾವಣೆ ಹತ್ತಿರವಾಗುತ್ತಿದ್ದಂತೆ   ಪ್ರತ್ಯೇಕ ಧರ್ಮ ಹೋರಾಟ ಮುನ್ನಲೆಗೆ ಬಂದಿದೆ.  ಫೆಬ್ರವರಿ ತಿಂಗಳಿನಲ್ಲಿ ಲಿಂಗಾಯತ ಧರ್ಮ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಆರಂಭವಾಗಿದೆ. ಸಮಾವೇಶವು ಫೆ.26ರಂದು ಸಾಣೇಹಳ್ಳಿ ಮಠದ ಆವರಣದಲ್ಲಿ ನಡೆಯಲಿದೆ.

Demand for separate Lingayat religion started again gow
Author
First Published Jan 28, 2023, 3:53 PM IST

ಚಿತ್ರದುರ್ಗ (ಜ.28): ಚುನಾವಣೆ ಹತ್ತಿರವಾಗುತ್ತಿದ್ದಂತೆ   ಪ್ರತ್ಯೇಕ ಧರ್ಮ ಹೋರಾಟ ಮುನ್ನಲೆಗೆ ಬಂದಿದೆ.  ಫೆಬ್ರವರಿ ತಿಂಗಳಿನಲ್ಲಿ ಲಿಂಗಾಯತ ಧರ್ಮ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತೆ ಆರಂಭವಾಗಿದೆ. ಬಸವಾದಿ ಅನುಯಾಯಿಗಳು ಸಾಂವಿಧಾನಿಕ ಹೋರಾಟಕ್ಕೆ ಸಜ್ಜಾಗಿದ್ದಾರೆ. ಲಿಂಗಾಯತ ಧರ್ಮದ ಕುರಿತು ಜಾಗೃತಿ ಮೂಡಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಒಂದು ದಿನದ ಸಮಾವೇಶದಲ್ಲಿ ಎರಡು ಗೋಷ್ಟಿ ಆಯೋಜನೆ ಮಾಡಲಾಗಿದ್ದು, ಗೋಷ್ಟಿಗೂ ಮುನ್ನ ಇಷ್ಟಲಿಂಗ ದೀಕ್ಷೆ ಹಾಗೂ ಸಾಮೂಹಿಕ ಲಿಂಗಪೂಜೆ ನಡೆಯಲಿದೆ. ಈ ಹಿಂದೆ ಪ್ರತ್ಯೇಕ ಲಿಂಗಾಯತ ಹೋರಾಟದ ಮುಖಂಡರು, ಶರಣರು ಭಾಗಿಯಾಗಲಿದ್ದಾರೆ. ಸಾಣೇಹಳ್ಳಿ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.

ಲಿಂಗಾಯತ ಧರ್ಮ ಅಲ್ಪಸಂಖ್ಯಾತವಾದುದು. ಕರ್ನಾಟಕದಲ್ಲಿ ಹುಟ್ಟಿದ ಧರ್ಮವೇ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಒಪ್ಪಿ ಬರುವ ಆಸಕ್ತರ ನೋಂದಣಿಗೆ  ಆಯೋಜಕರು ಮುಂದಾಗಿದ್ದಾರೆ. ಸಮಾವೇಶದಲ್ಲಿ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆದಿದೆ. ರಾಷ್ಟ್ರೀಯ ಬಸವ ಪ್ರತಿಷ್ಟಾನ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ತು ಆಯೋಜನೆ ಮಾಡಿರುವ ಈ ಸಮಾವೇಶವು ಫೆ.26ರಂದು ಸಾಣೇಹಳ್ಳಿ ಮಠದ ಆವರಣದಲ್ಲಿ ನಡೆಯಲಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ: ವಚನಾನಂದ ಸ್ವಾಮೀಜಿ

ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಈ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಎಂಬಿ ಪಾಟೀಲ್, ಹೊರಟ್ಟಿ ಪಕ್ಷಾತೀತವಾಗಿ ನಾಯಕರಿಗೆ ಆಹ್ವಾನ ಕೂಡ ನೀಡಲಾಗಿದೆ. ಬೃಹತ್ ಸಮಾವೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಲಿಂಗಾಯತ ಧರ್ಮ ಜಾತಿಯಲ್ಲ ಅದು ಸ್ವತಂತ್ರ ಧರ್ಮ. ಬಸವಣ್ಣ ಧರ್ಮ ಗುರು. ವಚನ ಸಾಹಿತ್ಯ ಧರ್ಮ‌ ಗ್ರಂಥ ಮೂರು ಅಂಶ ಒಪ್ಪಿ ಬರುವವರಿಗೆ ಸಮಾವೇಶಕ್ಕೆ ಆಯೋಜಕರು ಆಹ್ವಾನ ನೀಡಿದ್ದಾರೆ.

ಒಕ್ಕಲಿಗ-ಲಿಂಗಾಯತ ಮತ ಬೇಟೆಗೆ ಬಿಜೆಪಿ ಸರ್ಕಸ್‌: ಶುರುವಾಯ್ತು ಮತ್ತೊಂದು ಸುತ್ತಿನ ಪ್ರತಿಮೆ ಪಾಲಿಟಿಕ್ಸ್

Follow Us:
Download App:
  • android
  • ios