Asianet Suvarna News Asianet Suvarna News

ಶ್ರೀಮದ್ಭಗವದ್ಗೀತೆಯ ಶ್ಲೋಕ ತುಳು ಲಿಪಿಯಲ್ಲಿ ಸಮರ್ಪಣೆ

ಮಹಾರಾಷ್ತ್ರದ ಮುಂಬೈ ಹಾಗೂ ಮೂಲ್ಕಿ, ಶಿಮಂತೂರು ಪರಿಸರದ ಹಲವಾರು ತುಳು ಬಾಂಧವರಿಗೆ ತುಳು ಲಿಪಿ ಕಲಿಸುವ ಮೂಲಕ ಶಿಮಂತೂರು ಮಜಲಗುತ್ತು(ತಕ್ಕಣಪಾದೆ)ಸುರೇಖಾ ನವೀನ್ ಶೆಟ್ಟಿ ತುಳು ಲಿಪಿಯ ಅಪರೂಪದ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.

Dedication in Srimad Bhagavad Gita Shloka in Tulu script by rekha naveen shetty rav
Author
First Published Oct 25, 2023, 8:54 AM IST

ಮೂಲ್ಕಿ (ಅ.25) : ಮಹಾರಾಷ್ತ್ರದ ಮುಂಬೈ ಹಾಗೂ ಮೂಲ್ಕಿ, ಶಿಮಂತೂರು ಪರಿಸರದ ಹಲವಾರು ತುಳು ಬಾಂಧವರಿಗೆ ತುಳು ಲಿಪಿ ಕಲಿಸುವ ಮೂಲಕ ಶಿಮಂತೂರು ಮಜಲಗುತ್ತು(ತಕ್ಕಣಪಾದೆ)ಸುರೇಖಾ ನವೀನ್ ಶೆಟ್ಟಿ ತುಳು ಲಿಪಿಯ ಅಪರೂಪದ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.

ಮುಂಬೈನಲ್ಲಿ ವಿರಾರ್ ನಲಸೋಪಾರ್ ತುಳು ಫೌಂಡೇಶನ್ ನ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ ನೇತೃತ್ವದ ಸಂಘದ ತುಳು ಕನ್ನಡಿಗರಿಗೆ ಆನ್ಲೈನ್ ಮುಖಾಂತರ ತುಳು ಲಿಪಿಯನ್ನು ಉಚಿತವಾಗಿ ಕಲಿಸಿ ತುಳುನಾಡಿನ ಸಂಸ್ಕೃತಿ ಉಳಿಸುವ ಕಾರ್ಯ ಕೈಗೊಂಡಿದ್ದಾರೆ.

ತುಳು ಲಿಪಿ ನಾಮಫಲಕ ಅನಾವರಣ: ಜಿಲ್ಲೆಯಲ್ಲಿ ಶುರುವಾಗಿದೆ ಕೊಡವ ಲಿಪಿ ಟ್ರೆಂಡ್‌!

ಮುಂಬೈ ನ ಬೋಲಿಂಜ್ ವಿರಾರ್ ನಲ್ಲಿ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನದೊಂದಿಗೆ ನಡೆದ ‘ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ’ ಕಾರ್ಯಕ್ರಮದಲ್ಲಿ ಶ್ರೀಮದ್ಭಗವದ್ಗೀತೆಯ ಶ್ಲೋಕವನ್ನು ತುಳು ಲಿಪಿಯಲ್ಲಿ ಬರೆದು ಶ್ರೀಗಳಿಗೆ ಸಮರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಸುರೇಖಾ ನವೀನ್ ಶೆಟ್ಟಿ ಅವರನ್ನು ಸ್ವಾಮೀಜಿಯವರು ಗೌರವಿಸಿದರು. ಬಳಿಕ ಜೈ ತುಳುನಾಡು ಸಂಘಟನೆಯ ಸಹಕಾರದೊಂದಿಗೆ 108 ಯಜ್ಞಾರ್ಥಿಗಳಿಗೆ ತುಳು ಲಿಪಿಯಲ್ಲಿ ಬರೆಯಲು ಪ್ರೇರೇಪಣೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ, ಹರೀಶ್ ಶೆಟ್ಟಿ ಗುರ್ಮೆ, ದಿನೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ ವಿರಾರ್, ನವೀನ್ ಶೆಟ್ಟಿ ಪಳ್ಳಿ ವಿರಾರ್, ಶಶಿಕಲಾ ಮೆಂಡನ್, ರವಿಶೆಟ್ಟಿ ಕಿಲ್ಪಾಡಿ ಉಪಸ್ಥಿತರಿದ್ದರು.

 

ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಅನುಮೋದನೆ ನೀಡಿ: ಸಚಿವ ಸುನಿಲ್‌ ಕುಮಾರ್‌

Follow Us:
Download App:
  • android
  • ios