ರಾಜ್ಯದಲ್ಲಿ ಬರಗಾಲ ಘೋಷಣೆ ಬಗ್ಗೆ ಜುಲೈ ತಿಂಗಳಲ್ಲಿ ನಿರ್ಧಾರ: ಸಚಿವ ಕೃಷ್ಣಬೈರೇಗೌಡ

ರಾಜ್ಯದಲ್ಲಿ ಕಾಡುತ್ತಿರುವ ಮಳೆ ಕೊರತೆ ಇದೇ ರೀತಿ ಮುಂದುವರೆದರೆ ಬರುವ ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

Decision on drought declaration in July says minister krishna byregowda at bengalurru rav

ಬೆಂಗಳೂರು (ಜೂ.20) : ರಾಜ್ಯದಲ್ಲಿ ಕಾಡುತ್ತಿರುವ ಮಳೆ ಕೊರತೆ ಇದೇ ರೀತಿ ಮುಂದುವರೆದರೆ ಬರುವ ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ(krishna byre gowda) ಹೇಳಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ತಡವಾಗಿ ಪ್ರವೇಶಿಸಿರುವ ಕಾರಣ ಸಮಸ್ಯೆ ಎದುರಾಗಿದೆ. ಚಂಡಮಾರುತದ ಪ್ರಭಾವದಿಂದ ವಾತಾವರಣದಲ್ಲಿ ತೇವಾಂಶ ಕೊರತೆಯಾಗಿ ಮುಂಗಾರು ಮಳೆ ದುರ್ಬಲವಾಗಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ. ಆದರೆ ಭಾನುವಾರದಿಂದ ಕರಾವಳಿ ಭಾಗದಲ್ಲಿ ಮುಂಗಾರಿನ ಚೇತರಿಕೆ ಕಂಡಿದ್ದು, ಮಂಗಳವಾರದಿಂದ ರಾಜ್ಯದ ಭಾಗದಲ್ಲಿಯೂ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲದ ಪರಿಸ್ಥಿತಿ: ಕುಡಿಯುವ ನೀರಿಗೂ ಹಾಹಾಕಾರ..!

 

ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಸದ್ಯಕ್ಕೆ ಚಿಂತನೆ ಇಲ್ಲ. ಮೋಡ ಬಿತ್ತನೆಯ ವೈಜ್ಞಾನಿಕತೆ ಬಗ್ಗೆ ಗೊಂದಲ ಇದೆ. ಮೋಡ ಬಿತ್ತನೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ರಾಜ್ಯದಲ್ಲಿ ಸರಾಸರಿ ಶೇ.96-104ರಷ್ಟುಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ ಎಂದು ಹೇಳಿದ ಅವರು, ಇನ್ನೊಂದು ವಾರದಲ್ಲಿ ವಿಭಾಗವಾರು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು. ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ಇರಲಿದ್ದಾರೆ. ಮುಂಗಾರು ಮಳೆಯಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಈಗಾಗಲೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಸುಮಾರು 806 ಕಡೆಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಉಡುಪಿ, ಮಂಗಳೂರು, ಕಾರವಾರ, ಕಲ್ಯಾಣ ಕರ್ನಾಟಕ, ಶಿವಮೊಗ್ಗದ ಕೆಲ ಭಾಗದಲ್ಲಿ ನೀರಿನ ಕೊರತೆ ಇದೆ. ಈಗಾಗಲೇ ಈ ಭಾಗಗಳಿಗೆ ಟ್ಯಾಂಕರ್‌ ಮತ್ತು ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರಕ್ಕೆ ಸಾಲು ಸಾಲು ಸವಾಲು: ಗ್ಯಾರಂಟಿ, ಬರಗಾಲಕ್ಕೆ ಹಣ ಸಂಗ್ರಹವೇ ದೊಡ್ಡ ಟಾಸ್ಕ್‌ ?

Latest Videos
Follow Us:
Download App:
  • android
  • ios