ಪ್ರಯತ್ನ ನನ್ನದು, ಫಲ ದೇವರದ್ದು: ಡಿ.ಕೆ. ಶಿವಕುಮಾರ್
ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು, ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ ಡಿಕೆಶಿ
ಶೃಂಗೇರಿ(ಜ.12): ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚರ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ. ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಒಪಂದ ಕುರಿತಂತೆ ನಡೆದಿರುವ ಚರ್ಚೆ, ಡಿನ್ನರ್ ಮೀಟಿಂಗ್, ಶುಕ್ರವಾರವಷ್ಟೇ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಬ್ಯಾಟಿಂಗ್ ಮಾಡಿರುವ ನಡುವೆಯೇ ಶನಿವಾರ ಶಿವಕುಮಾರ್ ಇಲ್ಲಿಗೆ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಎಂದು ಘೋಷಣೆ ಕೂಗಿದರು.
ಬಣ ರಾಜಕೀಯಕ್ಕೆ ಬ್ರೇಕ್ ಹಾಕಿ: ಡಿ.ಕೆ. ಶಿವಕುಮಾರ್‌ಗೆ ಉಗ್ರಪ್ಪ ಟೀಂ ಮನವಿ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು, ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಿ.ಟಿ.ರವಿ ಡ್ರಾಮಾ ಮಾಸ್ಟರ್
ಸಿ.ಟಿ. ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿ.ಟಿ. ರವಿಗೆ ಪ್ರಾಣ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಶೃಂಗೇರಿಯಲ್ಲಿ ಶನಿವಾರ ಮಾಧ್ಯಮದವರೆದುರು ಲಕ್ಷ್ಮಿ ಹೆಬ್ಬಾಳ್ವರ್ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿ.ಟಿ. ರವಿ ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡ ಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಮಾತಾಡಿದ್ದೇನೆ. ಕ್ಷಮೆ ಕೇಳುತ್ತೇನೆ ಎಂದಿದ್ದರೆ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನ ವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ ಎಂದರು.
ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ: ಡಿಕೆಶಿ
ಶೃಂಗೇರಿ: ಪ್ರತಿಯೊಬ್ಬರೂ ಧರ್ಮದಲ್ಲಿ ನಂಬಿಕೆ. ದೇವರಲ್ಲಿ ಭಕ್ತಿಹೊಂದಬೇಕು.ಧರ್ಮದಿಂದ ಮನಸ್ಸಿ ಗೆ ನೆಮ್ಮದಿ, ಜೀವನದಲ್ಲಿ ಯಶಸ್ಸು ಸಿಗಲಿದೆ. ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಹಾಗೆ ನಮ್ಮ ಮಠಗಳನ್ನು ಕಾಪಾಡಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶೃಂಗೇರಿ ಶ್ರೀಮಠದ ನರಸಿಂಹವನದಲ್ಲಿ ಶ್ರೀ ಭಾರತೀ ತೀರ್ಥರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ-ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಕೈಲಾದಷ್ಟು ನೆರವು ನೀಡಬೇಕು. ನಮ್ಮ ಹಿರಿಯರು ಮನೆ, ಮಠ ಹುಷಾರು ಎಂದು ಹೇಳಿದ್ದರು. ನಾವು ನಮ್ಮ ಮನೆಗಳನ್ನು ಕಾಪಾಡುವಂತೆ ಮಠಗಳನ್ನು ಕಾಪಾಡಿ ಕೊಳ್ಳ ಬೇಕು. ಇದು ನಮ್ಮ ಕರ್ತವ್ಯಂದರು. ನೀವು ನೂರು ರು. ಸಂಪಾದಿಸಿದರೂ 1ರು.ನಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠ ಉಳಿಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಧರ್ಮ, ಸಂಸ್ಕಾರ, ಸಂಸ್ಕೃತಿ ನಮ್ಮ ದೇಶದ ಆಸ್ತಿ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಿ ಜಗತ್ತಿ ನಲ್ಲಿ ಧರ್ಮದಿಂದಲೇ ಶಾಂತಿ ನೆಲೆಸಲು ಸಾಧ್ಯ. ಇಲ್ಲಿ ಧರ್ಮ ಕಾಪಾಡುವ ಸಾಗರವೇ ಸೇರಿದೆ. ಇದು ಭಾಗ್ಯ. ಇದು ಭಾಗ್ಯವಯ್ಯ.ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ ಇಂತಹ ಭಕ್ತಿ ಸಾಗರದಲ್ಲಿ ವಿಧು ಶೇಖರ ಭಾರತೀ ಸ್ವಾಮೀಜಿಗಳ ಪ್ರವಚನ ಕೇಳಿ ಬದುಕಲ್ಲಿ ಅಳವಡಿಸಿಕೊಂಡು ನೆಮ್ಮದಿ ಪಡೆಯಲು ಸಹಕಾರಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ ಎಂದರು.
ಭಾರತೀ ತೀರ್ಥ ಮಹಾಸ್ವಾಮಿ ಸಮಾಜದಲ್ಲಿ ಧರ್ಮ ಉಳಿಸಲು ಸನಾಸತ್ವ ಸ್ವೀಕರಿಸಿ 50 ವರ್ಷ ಪೂರೈಸಿದ್ದಾರೆ. ಇವರು ಪೀಠದ 36 ನೇ ಪೀಠಾಧಿಪತಿಗಳಾಗಿ ನಮ್ಮ ಕಣ್ಣಿಗೆ ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಅವರಲ್ಲಿ ನಾವು ಶಂಕರಾಚಾರ್ಯರನ್ನು ಕಾಣುತ್ತಿದ್ದೇವೆ. ವಿಧುಶೇಖರ ಭಾರತೀ ತೀರ್ಥರು ದೇಶ ಸುತ್ತಿ ನಮ್ಮ ಧರ್ಮ ಕಾಪಾಡಲು ಮಾರ್ಗ ದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿಗೆ ಬಂದಾಗ ನಾನು ಶಾಲೆಯಲ್ಲಿ ಕಲಿತ ಶ್ಲೋಕ ವಿದ್ಯಾದದಾತಿ ವಿನಯಂ ವಿನಯಾದದಾತಿ ಪಾತ್ರತಂ ಪಾತ್ರತ್ವಂ ಧನಮಾಪೋತಿ ಧನಧರ್ಮ೦ ತತ ಸುಖಮ್ ನೆನಪಾಯಿತು. ಅಂದರೆ ಮನುಷ್ಯನಿಗೆ ವಿದ್ಯೆಯಿಂದ ವಿನಯ, ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ಅದ ರಂತೆ ಸುಖ ಪಡೆಯಲು ನಾವು ಇಲಿಗೆ ಇಲ್ಲಿಗೆ ಬಂದಿದ್ದೇವೆ.
ತೊಂದರೆ ಕೊಡುವವರಿಂದ ರಕ್ಷಣೆಗೆ ಹೋಮ: ಡಿ.ಕೆ.ಶಿವಕುಮಾರ್
ನಮ್ಮ ಕಷ್ಟಗಳ ನಿವಾರಣೆಗೆ ದೇವಾಲಯಕ್ಕೆ ಹೋಗುತ್ತೇವೆ. ಇಂತಹ ಪವಿತ್ರ ಶಾರದಾ ಪೀಠದ ಸನ್ನಿಧಿ ಯಲ್ಲಿ ನಾವೆಲ್ಲರೂ ಸೇರಿರುವುದೇ ಭಾಗ್ಯ. ಶ್ರೀಗಳು ಹೇಳಿಕೊಟ್ಟ ಪಾಠ ಕಲಿತು. ಅವರು ಹೇಳಿದ ಸ್ತೋತ್ರ ಅರ್ಥಮಾಡಿಕೊಂಡು ನಮ್ಮ ಅಳವಡಿಸಿಕೊಳ್ಳಬೇಕು. ಶ್ರೀ ಗಳು ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದ ಶಾಂತಿ ಸಿಗಲಿ ಎಂದು ಸಂದೇಶ ಸಾರಿದರು.
ನಾನು ತಿರುಪತಿಗೆ ಹೋಗಿ ಮರಳುವಾಗ ಭಾರತೀ ತೀರ್ಥ ಸ್ವಾಮಿಗಳ ಪವಾಡ ನಾನು ಕಣ್ಣಾರೆ ಕಂಡಿದ್ದೇನೆ. ವಿಧುಶೇಖರ ಭಾರತೀ ತೀರ್ಥರ ಪಾಂಡಿತ್ಯ ಅದ್ಭುತ, ಅವರ ಪಾಂಡಿತ್ಯಕ್ಕೆ ಶರಣಾಗಿದ್ದೇನೆ. ನಾನು ಮೊದಲು ಶ್ರೀ ಮಠದ ಭಕ್ತ, ನಂತರ ಉಪ ಮುಖ್ಯಮಂತ್ರಿ. ಶ್ರೀ ಮಠ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.