Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ರಾಸಲೀಲೆ : ಏನು ಹೇಳಲ್ಲ-ಕುತಂತ್ರ ಇರಬಹುದು ಎಂದ್ರು ಡಿಸಿಎಂ

ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಇದೀಗ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿ ಇದು ಸತ್ಯವೋ ಅಸತ್ಯವೋ ಇನ್ನಷ್ಟೇ ತೀರ್ಮಾನವಾಗಬೇಕಿದೆ. ಇದೊಂದು ಕುತಂತ್ರ ಕೂಡ ಇರಬಹುದು. ಈ ಬಗ್ಗೆ ತನಿಖೆಯಾಗಬೇಕಷ್ಟೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ

DCM Ashwath Narayan Talks About Ramesh Jarkiholi CD Matters  snr
Author
Bengaluru, First Published Mar 3, 2021, 11:32 AM IST

ಶಿವಮೊಗ್ಗ (ಮಾ.03):  ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಬಿಡುಗಡೆಯಾಗಿದ್ದು ಈ ಸಂಬಂಧ ಡಿಸಿಎಂ ಅಶ್ವತ್ಥ್ ನಾರಾಯಣ್ ಪರವಾಗಿ ಬ್ಯಾಟ್ ಬೀಸಿದ್ದಾರೆ. 

ಶಿವಮೊಗ್ಗದಲ್ಲಿಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ  ಇದು ಒಳ್ಳೆಯ ಉದ್ದೇಶ ದಿಂದ ಮಾಡುವ ಕೆಲಸವಲ್ಲ. ದುರುದ್ದೇಶದಿಂದ , ಪಿತೂರಿ, ಬ್ಲಾಕ್ ಮೇಲಿಂಗ್ , ಹನಿ ಟ್ರ್ಯಾಪಿಂಗ್ ಮಾಡ್ತಾರೆ.  ಹಾಗಾಗಿ ಇದೆಷ್ಟು ಒಳ್ಳೆಯ ವಿಚಾರ ಎಂದು ಪ್ರತಿಕ್ರಿಯೆ ನೀಡಲು ಕಷ್ಟವಾಗಿದೆ ಎಂದರು.

ರಾಸಲೀಲೆ ವಿಡಿಯೋ ಬಹಿರಂಗ: ನಾನವನಲ್ಲ ಎಂದ ಜಲ ಸಚಿವ ರಮೇಶ್ ಜಾರಕಿಹೊಳಿ! ..

ಇನ್ನು ಈ ಪ್ರಕರಣ ದಲ್ಲಿ ಯಾರ ತಂತ್ರ, ಕುತಂತ್ರ ಇದೆಯೋ, ದುರುದ್ದೇಶ ಇದೆಯೋ ಎಂದು ಈಗಲೇ ಹೇಳಲಾಗುವುದಿಲ್ಲ. ರಾಜಕೀಯ ದುರುದ್ದೇಶದಿಂದ ಮಾಡಿದ್ದಾರೋ? ಸತ್ಯವೋ? ಸುಳ್ಳೋ ? ಗೊತ್ತಿಲ್ಲ. ಸತ್ಯ, ಅಸತ್ಯದ ಬಗ್ಗೆ ಕಾಲವೇ ಉತ್ತರ ನೀಡುತ್ತದೆ. ಈ ಬಗ್ಗೆ ತನಿಖೆ ಆಗಲಿ, ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. 

"

ಸರ್ಕಾರಕ್ಕೆ ಈ ಪ್ರಕರಣ ಧಕ್ಕೆ ತರುವುದಿಲ್ಲ , ಸರಿ ಇದ್ದರೆ ತಾನೇ ಧಕ್ಕೆ ಆಗೋದು. ಈ ಪ್ರಕರಣ ಸತ್ಯನೋ ಸುಳ್ಳೋ ಯಾರಿಗೆ ಗೊತ್ತಿದೆ. ಆಪಾದನೆ ಮಾಡಿರುವ ಬಗ್ಗೆ ರಮೇಶ್ ಜಾರಕಿಹೊಳಿ ಮಾತನಾಡೋದು ಸೂಕ್ತ ಎನಿಸುತ್ತದೆ. ಈ ಪ್ರಕರಣದ ಬಗ್ಗೆ ಈಗಲೇ ಜಡ್ಜ್ ಮೆಂಟ್ ಕೊಡೊದು, ನಿರ್ಣಯ ಕೊಡೊದು ಸೂಕ್ತ ಅಲ್ಲ ಎಂದು ಡಿಸಿಎಂ ಹೇಳಿದರು. 

Follow Us:
Download App:
  • android
  • ios