APMC ತಿದ್ದುಪಡಿ ವಾಪಸ್‌ ಪ್ರಶ್ನೆಯೇ ಇಲ್ಲ: ಸಚಿವ ಸೋಮಶೇಖರ್

*  ಎಪಿಎಂಸಿಗಳಿಗೆ ನಷ್ಟವಾದರೆ ಸರ್ಕಾರದಿಂದಲೇ ಸೌಲಭ್ಯ
*  ಯಾವುದೇ ಎಪಿಎಂಸಿ ನಷ್ಟದಲ್ಲಿ ಇಲ್ಲ
*  ನಷ್ಟಕ್ಕೆ ಒಳಗಾದರೆ ಸಿಬ್ಬಂದಿಗೆ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ನೀಡಲಿದೆ

No Question of the APMC Act Repeal Says Minister ST Somashekhar grg

ಬೆಂಗಳೂರು(ಫೆ.16):  ರೈತರ(Farmers) ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ(APMC Act) ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌(ST Somashekhar) ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ(Congress) ಕೆ. ಹರೀಶ್‌ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರು ಹಿಂದೆ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡಬೇಕಿತ್ತು. ಬೇರೆ ಕಡೆಗೆ ಮಾರಾಟ ಮಾಡಿದರೆ 5ರಿಂದ 25 ಸಾವಿರ ರು.ವರೆಗೆ ದಂಡ ನೀಡಬೇಕಾಗಿತ್ತು. ಇದನ್ನು ತಪ್ಪಿಸಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಲಾಭ ಸಿಗುವ ಕಡೆ ಮಾರಾಟ ಮಾಡಲು ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ತಿದ್ದುಪಡಿ ಹಿಂಪಡೆಯುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದರು.

Bank Fraud Cases: ವಂಚಕ ಬ್ಯಾಂಕಿಂದ ಸಾಲ ಮರುಪಾವತಿಗೆ ನೆರವು: ಸಚಿವ STS

ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಎಪಿಎಂಸಿಗಳಿಗೆ(APMC) ಬರುತ್ತಿದ್ದ ಆದಾಯ ಸಹಜವಾಗಿ ಕಡಿಮೆಯಾಗಿದೆ. ಆದರೆ ಯಾವುದೇ ಎಪಿಎಂಸಿ ನಷ್ಟದಲ್ಲಿ ಇಲ್ಲ. ಒಂದು ವೇಳೆ ನಷ್ಟಕ್ಕೆ ಒಳಗಾದರೆ ಅಲ್ಲಿಯ ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರ್ಕಾರವೇ ನೀಡಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ(Karnataka) ಇರುವ ಎರಡೆರಡು ಎಪಿಎಂಸಿಗಳನ್ನು ವಿಲೀನಗೊಳಿಸುವ ಪ್ರಸ್ತಾವನೆ ಸರ್ಕಾರದ(Government of Karnataka) ಮುಂದಿಲ್ಲ ಎಂದು ಉತ್ತರಿಸಿದ ಸಚಿವರು, ಸರ್ಕಾರವೇ ಸ್ವಯಂ ಪ್ರೇರಿತವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಹರೀಶ್‌ಕುಮಾರ್‌, ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳ ಆದಾಯ ಕಡಿಮೆಯಾಗಿ ನಷ್ಟದಲ್ಲಿವೆ. ವರ್ಷದಿಂದ ವರ್ಷಕ್ಕೆ ಆದಾಯ ಕಡಿಮೆಯಾಗುತ್ತಿದೆ. ಮುಂದೆ ಸಿಬ್ಬಂದಿಗಳ ವೇತನಕ್ಕೆ ತೊಂದರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿ, ಕಾಯ್ದೆ ತಿದ್ದುಪಡಿ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರ ಹಿತ ರಕ್ಷಣೆಗೆ ಸರ್ಕಾರ ಬದ್ಧ: ಎಸ್‌ಟಿಎಸ್‌

ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌(Shri Guru Raghavendra Bank) ಮತ್ತು ಶ್ರೀ ವಸಿಷ್ಟ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ವಿವಿಧ ರೀತಿಯ ತನಿಖೆ ನಡೆಯುತ್ತಿದ್ದು, ಠೇವಣಿದಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಭರವಸೆ ನೀಡಿದ್ದಾರೆ.

ರೈತರಿಗೆ ಸಾಲ ನೀಡಿಕೆಯಲ್ಲಿ 68% ಗುರಿ ಸಾಧನೆ: ಸಚಿವ ಎಸ್‌.ಟಿ.ಸೋಮಶೇಖರ್‌

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆ(CID Investigation) ಮಾಡುತ್ತಿದೆ. ಭಾರತೀಯ ರಿಸವ್‌ರ್‍ ಬ್ಯಾಂಕ್‌ ಸಲಹೆ ಮೇರೆಗೆ, ಹೈಕೋರ್ಟ್‌ ನಿರ್ದೇಶನ ಪ್ರಕಾರ ಅಶೋಕ್‌ ಎಂಬುವರನ್ನು ಬ್ಯಾಂಕಿನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕರ ಆಸ್ತಿ ಜಪ್ತಿ ಮಾಡಲಾಗಿದೆ. ಇ.ಡಿ. ಸಹ ತನಿಖೆ ಮಾಡುತ್ತಿದೆ. 2014-16ರಿಂದ ಆಡಿಟ್‌ ವರದಿ ತಪಾಸಣೆ ಮಾಡಲಾಗುತ್ತಿದೆ. ಈ ಅವಧಿಯಲ್ಲಿ 807 ಕೋಟಿ ರು. ಅವ್ಯವಹಾರವಾಗಿದೆ. ಅದೇ ರೀತಿ ನಂತರದ ವರ್ಷಗಳಲ್ಲಿ ನೂರಾರು ಕೋಟಿ ರು. ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಇನ್ನೂ 2019-20 ಮತ್ತು 2020-21ನೇ ಸಾಲಿನ ಆಡಿಟ್‌ ವರದಿ ತಪಾಸಣೆ ಆಗಬೇಕಾಗಿದೆ ಎಂದು ವಿವರಿಸಿದರು.

ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕ ವಿರುದ್ಧ ಸಿಐಡಿ ಆರೋಪ ಪಟ್ಟಿಸಲ್ಲಿಸಿದ್ದು, ಆರೋಪಿಗಳು ಜಾಮೀನು ಪಡೆದಿದ್ದಾರೆ, ಇಲಾಖೆ ಸಹ ತನಿಖೆ ಮಾಡುತ್ತಿದೆ. ಒಟ್ಟಾರೆ 1792 ಕೋಟಿ ರು. ನಷ್ಟವಾಗಿದ್ದು, ಹಂತ ಹಂತವಾಗಿ ವಸೂಲಿ ಮಾಡಲಾಗುವುದು. ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದ ಠೇವಣಿದಾರರಿಗೆ ಡಿಐಸಿಜಿಸಿ ವಿಮಾ ಸಂಸ್ಥೆ ಈವರೆಗೆ 709.99 ಕೋಟಿ ರು. ಹಣ ಬಿಡುಗಡೆ ಮಾಡಿದ್ದು, ಠೇವಣಿದಾರರಿಗೆ ಪಾವತಿಸಲಾಗಿದೆ. ಅದೇ ರೀತಿ ಬ್ಯಾಂಕ್‌ ತನ್ನ ಸ್ವಂತ ನಿಧಿಯಿಂದ 42597 ಠೇವಣಿದಾರರಿಗೆ 233.49 ಕೋಟಿ ರು. ಪಾವತಿಸಿದೆ. 1-1-2020ರಿಂದ ಈವರೆಗೆ 188.44 ಕೋಟಿ ರು. ಸಾಲ ವಸೂಲು ಮಾಡಲಾಗಿದೆ. ಪ್ರಸ್ತುತ 8918 ಠೇವಣಿದಾರರಿಗೆ 1624.81 ಕೋಟಿ ರು. ಪಾವತಿಸಬೇಕಾಗಿದೆ ಎಂದು ಸಚಿವ ಸೋಮಶೇಖರ್‌ ತಿಳಿಸಿದರು.

Latest Videos
Follow Us:
Download App:
  • android
  • ios