ದರ್ಶನ್‌ ನಟನೆಯ ಮೊದಲ ಸಿನಿಮಾ ಮೆಜೆಸ್ಟಿಕ್‌ ಟೀಮ್‌ನಲ್ಲಿ ನಾನಿದ್ದೆ. ಆಮೇಲೂ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಇಂದಿಗೂ ಅವರ ಮೇಲಿರುವ ಕೊಲೆ ಆರೋಪದ ಆಘಾತದಿಂದ ಹೊರಬರಲಾಗುತ್ತಿಲ್ಲ. ಅದು ಅವರ ಬಗ್ಗೆ ನಮಗಿರುವ ನಂಬಿಕೆಯಾಗಿದೆ: ಗೀತ ರಚನಕಾರ, ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್‌

ಬೆಂಗಳೂರು(ಜೂ.20):  ‘ದರ್ಶನ್‌ ಅಭಿಮಾನಿಗಳು ತಮ್ಮ ಬೈಕ್‌, ಆಟೋ ಹಿಂದೆ ದರ್ಶನ್‌, ಡಿ ಬಾಸ್‌ ಅಂತ ಬರೆದ ಸ್ಟಿಕ್ಕರ್‌ಗಳನ್ನು ಕಿತ್ತು ಹಾಕುತ್ತಿದ್ದಾರೆ. ಇಂಥಾ ಸ್ಥಿತಿ ದರ್ಶನ್‌ಗೆ ಬರಬಾರದಿತ್ತು’ ಎಂದು ಗೀತ ರಚನಕಾರ, ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಹೇಳಿದ್ದಾರೆ.

‘ದರ್ಶನ್‌ ನಟನೆಯ ಮೊದಲ ಸಿನಿಮಾ ಮೆಜೆಸ್ಟಿಕ್‌ ಟೀಮ್‌ನಲ್ಲಿ ನಾನಿದ್ದೆ. ಆಮೇಲೂ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಇಂದಿಗೂ ಅವರ ಮೇಲಿರುವ ಕೊಲೆ ಆರೋಪದ ಆಘಾತದಿಂದ ಹೊರಬರಲಾಗುತ್ತಿಲ್ಲ. ಅದು ಅವರ ಬಗ್ಗೆ ನಮಗಿರುವ ನಂಬಿಕೆಯಾಗಿದೆ ಎಂದಿದ್ದಾರೆ. 

ರೇಣುಕಾಸ್ವಾಮಿ ಎದೆ, ವೃಷಣ ತುಳಿದು ಡಿ’ಗ್ಯಾಂಗ್‌ ಹಿಂಸೆ..!

ಇವತ್ತು ರಾಜ್ಯಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರು ದರ್ಶನ್‌ ಸ್ಟಿಕ್ಕರ್‌ ತೆಗೆಯುತ್ತಿದ್ದಾರೆ ಅಂದರೆ ಅವರಿಗಾದ ನೋವು ಎಂಥದ್ದಿರಬಹುದು, ದರ್ಶನ್‌ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳಬೇಕಿತ್ತು’ ಎಂದು ಅವರು ಹೇಳಿದ್ದಾರೆ.