ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆಗೆ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಜನರು ಹಾಜರಾದರು. ಕೋರ್ಟ್‌ನಲ್ಲಿ 6 ತಿಂಗಳ ಬಳಿಕ ಮುಖಾಮುಖಿಯಾದ ದರ್ಶನ್ ಮತ್ತು ಪವಿತ್ರಾ ಗೌಡ ಭಾವುಕರಾದರು. ಈ ವೇಳೆ ಪವಿತ್ರಾಗೌಡಗೆ ದರ್ಶನ್ ಬೆನ್ನುತಟ್ಟಿ ಸಂತೈಸಿದರು. 

ಬೆಂಗಳೂರು (ಜ.10): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಸೇರಿದಂತೆ 17 ಜನರು ಇಂದು ಕೋರ್ಟ್ ಮುಂದೆ ಹಾಜರಾಗಿದ್ದು, ಜಾರ್ಜ್‌ಶೀಟ್ ಆಧಾರದಲ್ಲಿ ಆರೋಪ ನಿಗದಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಈ ವೇಳೆ ಕೋರ್ಟ್‌ಗೆ ಬಂದ ನಟ ದರ್ಶನ್ ಹಾಗೂ ಆತನ ಗೆಳತಿ 6 ತಿಂಗಳ ಬಳಿಕ ಮುಖಾಮುಖಿಯಾದರು. ಈ ವೇಳೆ ದರ್ಶನ್‌ ಮುಂದೆ ಕಣ್ಣೀರಿಟ್ಟ ಪವಿತ್ರಾಗೌಡ ಅವರನ್ನು ಬೆನ್ನು ತಟ್ಟಿ ಸಂತೈಸಿದರು. ಆದರೆ, ಕೋರ್ಟ್‌ನಲ್ಲಿ ಎಲ್ಲ ಆರೋಪಿಗಳ ಹಾಜರಿ ಖಚಿತಪಡಿಸಿಕೊಂಡ 57 ಸಿಸಿಹೆಚ್ ನ್ಯಾಯಾಲಯವು ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿತು.

ರೇಣುಕಾಸ್ವಾಮಿ‌ ಕೊಲೆ ಪ್ರಕರಣದ ಟ್ರಯಲ್ ಗೆ ಆರೋಪಿಗಳು ಹಾಜರಾಗಬೇಕು ಎಂದು ಕೋರ್ಟ್ ಸೂಚನೆ ನೀಡಿತ್ತು. ಪ್ರಕರಣದ ಎಲ್ಲ 17 ಆರೋಪಿಗಳು ಕೋರ್ಟ್ ಗೆ ಹಾಜರಾಗಬೇಕು ಎಂದು ಹೇಳಿದ್ದರಿಂದ ಎಲ್ಲರೂ ಹಾಜರಾಗಿದ್ದರು. ಕೋರ್ಟ್ ಟ್ರಯಲ್‌ ಮುಕ್ತಾಯದವರೆಗೂ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಪ್ರತಿ ತಿಂಗಳು ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಆದರಂತೆ ಪ್ರಕರಣದ ಎಲ್ಲ ಆರೋಪಿಗಳು ಇಂದು ಕೋರ್ಟ್‌ಗೆ ಹಾಜರಾದರು. ಎಲ್ಲಾ ಆರೋಪಿಗಳ ಹೆಸರು ಕೂಗಿ ಹಾಜರಿ ಖಾತರಿಪಡಿಸಿಕೊಳ್ಳಲಾಯಿತು. 

ಇದೇ ವೇಳೆ ಕೋರ್ಟ್‌ನಲ್ಲಿ ಪವಿತ್ರಗೌಡ ಭಾವುಕಳಾದಳು. ಆಗ ನಟ ದರ್ಶನ್ ಸ್ವತಃ ಗೆಳತಿ ಪವಿತ್ರಾಗೌಡ ಬಳಿ ಹೋಗಿ ಬೆನ್ನು ತಟ್ಟಿ ಸಂತೈಸಿದರು. ಫೆ. 25ಕ್ಕೆ ವಿಚಾರಣೆ ಮುದೂಡಿಕೆ ಮಾಡಿದರು. ಕೋರ್ಟ್ ಹಾಲ್‌ನಲ್ಲಿ ದರ್ಶನ್ ಪವಿತ್ರಾಗೌಡ ಮಾತುಕತೆ ಮಾಡಿದರು. ಆಗ ದರ್ಶನ್ ಕಿವಿಗೆ ಪವಿತ್ರಾಗೌಡ ಏನೋ ಹೇಳಿದರು. ಆಗ ದರ್ಶನ್ ಬೆನ್ನು ತಟ್ಟಿ ಸಮಾಧಾನ ಮಾಡಿದನು. ಆಗ ಕೋರ್ಟ್‌ನಿಂದ ಫೆ.25ರಂದು ವಿಚಾರಣೆ ಮುಂದೂಡಿ ಮತ್ತೆ ಎಲ್ಲರೂ ಹಾಜರಾಗಲು ಸೂಚನೆ ನೀಡಲಾಯಿತು.

ಇದನ್ನೂ ಓದಿ: ಕೊನೆಗೂ ಕೋರ್ಟ್‌ ಹಾಲ್‌ನಲ್ಲಿ ದರ್ಶನ್- ಪವಿತ್ರಾ ಗೌಡ ಭೇಟಿ; ಬೆನ್ನು ತಟ್ಟಿ ಸಮಾಧಾನ ಮಾಡಿದ ಗೆಳೆಯ

ಹೊರ ರಾಜ್ಯಕ್ಕೆ ಹೋಗಲು ಪವಿತ್ರಾಗೌಡ ಮನವಿ ಸಲ್ಲಿಕೆ: ನಟಿ ಪವಿತ್ರಾಗೌಡ ಅವರು ಜಾಮೀನಿನ ಮೇಲೆ ಹೊರಗಿರುವ ನಮಗೆ ಹೊರ ರಾಜ್ಯದ ಕೆಲವು ದೇವಾಲಯಗಳಿಗೆ ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಹೊರ ರಾಜ್ಯಗಳಲ್ಲಿರುವ ದೇವಾಲಯಗಳಿಗೆ ಹೋಗಿ ಬರಲು ಅವಕಾಶ ನೀಡಬೇಕು ಎಂದು ಪವಿತ್ರಾಗೌಡ ಪರ ವಕೀಲರು ಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಕುರಿತ ಅರ್ಜಿಯನ್ನು ವಿಚಾರಣೆ ಮಾಡಿ ಅನುಮತಿ ನೀಡಲಿದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ದರ್ಶನ್ ಜೊತೆಯೆ ಕೋರ್ಟ್ ನಿಂದ ಪವಿತ್ರಾಗೌಡ ಹೊರಗೆ ಬಂದರು.

ಮತ್ತೆ ಮೈಸೂರಿಗೆ ಹೋಗಲು ಮನವಿ ಸಲ್ಲಿಸಿದ ದರ್ಶನ್: ಇದೇ ವೇಳೆ ನಟ ಸರ್ಆನ್ ಅವರು ತನಗೆ ಮತ್ತೆ ಮೈಸೂರಿಗೆ ಹೋಗಲು ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜ. 12ರಿಂದ 5 ದಿನ ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಬಗ್ಗೆ ಕೋರ್ಟ್‌ನಿಂದ ಸೂಕ್ತ ಕಾರಣವನ್ನು ತಿಳಿದು ಅನುಮತಿ ಕೊಡಲಿದೆಯೇ, ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ. (ಪ್ರತಿವರ್ಷ ನಟ ದರ್ಶನ್ ಸಂಕ್ರಾಂತಿ ಹಬ್ಬದ ವೇಳೆ ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿ ದನಗಳಿಗೆ ಕಿಚ್ಚು ಹಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಮಗೆ 5 ದಿನಗಳ ಕಾಲ ಮೈಸೂರಿಗೆ ತೆರಳಲು ಅವಕಾಶ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದರ್ಶನ್‌​ SLP ಖೆಡ್ಡಾ, ಶಿಕ್ಷೆ ಕೊಡಿಸೋಕೆ ಖಾಕಿ ಸಿದ್ಧ! ಬೇಲ್ ರದ್ದತಿಗೆ 5 ಕಾರಣಗಳ ಪಟ್ಟಿ ರೆಡಿ