Asianet Suvarna News Asianet Suvarna News

ದೈವಗಳ ನಾಡು ತುಳುನಾಡಲ್ಲಿ ನಡೆಯಿತು ಮತ್ತೊಂದು ಅಚ್ಚರಿ! ಹುಲಿವೇಷಧಾರಿಗೆ ದೈವ ಆವಾಹನೆ!

ಮಂಗಳೂರಿನ ಬೊಕ್ಕಪಟ್ನದಲ್ಲಿ ನಡೆದಿರುವ ಘಟನೆ ಅಚ್ಚರಿ ಹುಟ್ಟಿಸಿದೆ ನಟ ರಾಜ್ ಬಿ ಶೆಟ್ಟಿ  ಸಮ್ಮುಖದಲ್ಲಿ ನಡೆದಿದ್ದ ಹುಲಿವೇಷಧಾರಿ ಕಾರ್ಯಕ್ರಮದಲ್ಲಿ ಹುಲಿವೇಷಧಾರಿಗೆ ದೈವ ಆವಾಹನೆಯಾದ ಘಟನೆ ನಡೆದಿದೆ.. ಶಿವ ಫ್ರೆಂಡ್ಸ್ ನ ಹುಲಿವೇಷದ ಊದು ಹಾಕೋ ಕಾರ್ಯಕ್ರಮ ನಡೆದಿತ್ತು.

Daiva cames upon huliveshadhari at mangaluru district rav
Author
First Published Oct 24, 2023, 8:57 PM IST

ಮಂಗಳೂರು (ಅ.24): ತುಳುನಾಡು ದೈವಗಳ ನಾಡು ಎಂದೇ ಜನಜನಿತ. ಅದರಲ್ಲೂ ಮಂಗಳೂರಿನ ಕೊರಗಜ್ಜ ದೇವಸ್ಥಾನ ಪ್ರಸಿದ್ಧಿ ಹಾಗೂ ಕೊರಗಜ್ಜನ ಪವಾಡಗಳು ಅಪಾರ. ದೈವಗಳ ಮೇಲೆ ಅಪಾರ ನಂಬಿಕೆಯಿರುವ ಇಲ್ಲಿನ ಜನರು ಶ್ರದ್ಧ ಭಕ್ತಿಯಿಂದ ಆಚರಿಸುತ್ತಾರೆ. ಇಲ್ಲಿನ ದೈವಗಳಲ್ಲಿ ಕೆಲವೊಮ್ಮೆ ಅಚ್ಚರಿ ಹುಟ್ಟಿಸುವ ಘಟನೆಗಳು ನೆಡಯುತ್ತವೆ. 

ಇತ್ತೀಚೆಗೆ ಒರಿಸ್ಸಾದಿಂದ ದುಡಿಯಲು ಬಂದಿದ್ದ 18 ವರ್ಷದ ಮುಸ್ಲಿಂ ಕಾರ್ಮಿಕನ ಮೇಲೆ ಪಿಲಿಚಾಮುಂಡಿ ದೈವ ಆವಾಹನೆಯಾಗಿ ಅಚ್ಚರಿ ಹುಟ್ಟಿಸಿದ ಘಟನೆ ಮಾಸುವ ಮುನ್ನವೇ ಇದೀಗ ಹುಲಿ ವೇಷಧಾರಿಯಾಗಿದ್ದವನಿಗೆ ದೈವ ಆವಾಹನೆಯಾಗಿರುವ ಘಟನೆ ನಡೆದಿದೆ.

ಮಂಗಳೂರಿನ ಬೊಕ್ಕಪಟ್ನದಲ್ಲಿ ನಡೆದಿರುವ ಘಟನೆ. ಶಿವ ಫ್ರೆಂಡ್ಸ್ ನ ಹುಲಿವೇಷದ ಊದು ಹಾಕೋ ಕಾರ್ಯಕ್ರಮ ನಡೆದಿತ್ತು. ಹುಲಿ ವೇಷ ಹಾಕೋ ಮೊದಲು ನಡೆಯುವ‌ ದೇವರ ಆರಾಧನೆ ವೇಳೆ ಹುಲಿವೇಷ ಹಾಕಲು ತಯಾರಾಗಿದ್ದ ವೇಷಧಾರಿಗೆ ದೈವ ಆವಾಹನೆಯಾಗಿದೆ.  ನಟ ರಾಜ್ ಬಿ ಶೆಟ್ಟಿ ಸಮ್ಮುಖದಲ್ಲೇ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಹುಲಿವೇಷಧಾರಿಗೆ ದೈವ ಆವಾಹನೆಯಾಗಿರುವುದು ತಿಳಿದು ಹಿರಿಯರು ಸಾಂತ್ವನ ಮಾಡಿದ್ದಾರೆ. ಬಳಿಕ ಹುಲಿವೇಷಧಾರಿ ಸಹಜ ಸ್ಥಿತಿ ಬಂದಿದ್ದಾನೆ. 

ಹುಲಿ ಕುಣಿತ ಕಸರತ್ತು ವೇಳೆ ವೇಷಧಾರಿಗೆ ಗಾಯ

ಮಂಗಳೂರು: ನಗರದ ಮಂಗಳಾದೇವಿ ದೇವಾಲಯದಲ್ಲಿ ಹುಲಿ ಕುಣಿತದ ಕಸರತ್ತು ಪ್ರದರ್ಶನದ ವೇಳೆ ಆಯ ತಪ್ಪಿ ಬಿದ್ದು ಕುತ್ತಿಗೆ ಉಳುಕಿ ಹುಲಿ ವೇಷಧಾರಿಯೊಬ್ಬರು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ದೇವರ ಎದುರು ಹುಲಿವೇಷ ಧರಿಸಿ ಪ್ರದರ್ಶನ ನೀಡುವ ವೇಳೆ ಈ ಘಟನೆ ನಡೆದಿದೆ. ಮುಳಿಹಿತ್ಲು ಹುಲಿವೇಷ ತಂಡದ ಕುಣಿತದ ವೇಳೆ ಹುಲಿ ವೇಷಧಾರಿ ಯುವಕನೊಬ್ಬ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ಅನಾಹುತ ಸಂಭವಿಸಿದೆ.

ಮುಸ್ಲಿಂ ಯುವಕನ ಮೇಲೆ ದೈವದ ಆವೇಶ: ಇದು 18 ವರ್ಷಗಳಿಂದ ಸ್ಥಗಿತಗೊಂಡ ದೈವಾರಾಧನೆಯ ರೋಚಕ ಸ್ಟೋರಿ!

ತಲೆ ನೆಲಕ್ಕೆ ಬಡಿದಿದ್ದರಿಂದ ಹುಲಿ ವೇಷಧಾರಿಯ ಕತ್ತು ಉಳುಕಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನವರಾತ್ರಿ ಹಿನ್ನೆಲೆಯಲ್ಲಿ ಮಂಗಳಾದೇವಿ ದೇವರ ಎದುರು ಹುಲಿವೇಷ ಧರಿಸಿ ಕುಣಿತ ಮತ್ತು‌ ಕಸರತ್ತು ಪ್ರದರ್ಶಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

Follow Us:
Download App:
  • android
  • ios