ಬೆಂಗಳೂರು(ಡಿ.19):  ಸುಹಾಸ್ತಿಕ್ ಯುವ ಜೈನ್ ಮಿಲನ್ ಹಾಗೂ ಕರ್ನಾಟಕ ಜೈನ್ ಧರ್ಮ ಫೇಸ್‌ಬುಕ್ ಸಹಯೋಗದೊಂದಿಗೆ 2020ರ ಜಿನ ಸಮ್ಮಿಲನ ಕಾರ್ಯಕ್ರಮ ಇದೇ ಭಾನುವಾರ(ಡಿ.20)  ಆಯೋಜಿಸಲಾಗಿದೆ. ಕೊರೋನಾ ಕಾರಣ ವರ್ಚುವಲ್ ಮೂಲಕ ವಿಶೇಷ ಕಾರ್ಯಕ್ರಮ  ಆಯೋಜಿಸಲಾಗಿದೆ. 

ಭಾನುವಾರ ಬೆಳಗ್ಗೆ 9 ಗಂಟೆಗೆ ಜಿನ ಸಮ್ಮಿಲನ 2020 ಕಾರ್ಯಕ್ರಮವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಸೊಂಬುಜ ಕ್ಷೇತ್ರದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಸ್ವಾಮೀಜಿ, ಭರತ ವರ್ಷ ದಿಗಂಬರ ಜೈನ ತೀರ್ಥ ಸಂರಕ್ಷಿಣಿ ಮಹಾಸಭಾ ಲಕ್ನೋ ಅಧ್ಯಕ್ಷರಾದ ನಿರ್ಮಲ್ ಕುಮಾರ್ ಸೇಠಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

"

ಉದ್ಘಟನಾ ಸಮಾರಂಭದ ಬಳಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ರಾಜಶ್ರಿ ಹಿನ್ನದ ಹೆಜ್ಜೆ ಚಲನ ಚಿತ್ರ ಪ್ರಶಸ್ತಿ ಪ್ರಧಾನ, ಚಲನ ಚಿತ್ರ ಪ್ರದರ್ಶನ, ಚಾವಡಿ ಚರ್ಚೆ, ಅಂತಾರಾಷ್ಟ್ರೀಯ ಜಿನ ಸಮ್ಮಲಿನ ಕಾರ್ಯಕ್ರಮ ನಡೆಯಲಿದೆ ಎಂದು ಬಿಎಸ್ಎಂ ಜೈನ್ ಸಂಘಟನೆ ಕಾರ್ಯದರ್ಶಿ ಮಾಳ ಹರ್ಷೇಂದ್ರ ಜೈನ್ ತಿಳಿಸಿದ್ದಾರೆ. ಕಾರ್ಯಕ್ರಮ ಕರ್ನಾಟಕ ಜೈನ್ ಧರ್ಮ ಫೇಸ್‌ಬುಕ್ ಪೇಜ್ ಮೂಲ ನೇರಪ್ರಸಾರವಾಗಲಿದೆ.