IAS vs IPS: ರೋಹಿಣಿ ಸಿಂಧೂರಿಯಿಂದ ಇಬ್ಬರು ಅಧಿಕಾರಿಗಳ ಸಾವು: ಕುಟುಂಬ ಉಳಿಸಿಕೊಳ್ಳಲು ಪರದಾಟ- ಡಿ. ರೂಪಾ
ರೋಹಿಣಿ ಸಿಂಧೂರಿ ಹೆಸರೇಳದೇ, ಅವರಿಂದ ಕರ್ನಾಟಕದಲ್ಲಿ ಐಎಎಸ್, ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಒಂದು ಐಪಿಎಸ್ ದಂಪತಿ ಜೋಡಿ ವಿಚ್ಛೇದನ ಪಡೆದಿದ್ದಾರೆ ಎಂದು ಐಪಿಎಸ್ ಡಿ.ರೂಪಾ ಆರೋಪಿಸಿದ್ದಾರೆ.
ಬೆಂಗಳೂರು (ಫೆ.22): ರೋಹಿಣಿ ಸಿಂಧೂರಿ ಅವರ ಹೆಸರೇಳದೇ, ಅವರಿಂದ ಕರ್ನಾಟಕದಲ್ಲಿ ಐಎಎಸ್, ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಒಂದು ಐಪಿಎಸ್ ದಂಪತಿ ಜೋಡಿ ವಿಚ್ಛೇದನ ಪಡೆದಿದ್ದಾರೆ. ಈಗ ನಾವು ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರದ ನೋಟಿಸ್ ಹಾಗೂ ವರ್ಗಾವಣೆ ಶಿಕ್ಷೆಗೂ ಬಗ್ಗದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಪುನಃ ಇಂದು ಬೆಳಗ್ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿ ಪೋಸ್ಟ್ ಮಾಡಿದ್ದಾರೆ. ಇಂದೂ ಕೂಡ ಡಿ. ರೂಪಾ ಅವರು ತಮ್ಮ ಫೇಸ್‌ಬುಕ್ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಅವರ ಹೆಸರು ಹೇಳದೇ ಒಂದು ಪುಟದಷ್ಟು ಆರೋಪಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮಹಿಳಾ ಅಧಿಕಾರಿಗಳ ಜಗಳ ತಣ್ಣಗಾಯಿತು ಎನ್ನುವಷ್ಟರಲ್ಲಿ ಮತ್ತೆ ಸಿಡಿಯುವಂತೆ ಮಾಡಿದ್ದಾರೆ.
IAS vs IPS Fight:ಡಿಕೆ ರವಿ, ರೋಹಿಣಿ ಸಿಂಧೂರಿ ಪ್ರೇಮ ಸಲ್ಲಾಪ ಸಿಬಿಐ ವರದಿಯಲ್ಲಿದೆ: ಮತ್ತೆ ಕೆದಕಿದ ಡಿ ರೂಪಾ
ನನ್ನ ಕುಟುಂಬ ಉಳಿಸಿಕೊಳ್ಳಲು ಹೋರಾಟ: ಒಬ್ಬ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಮೃತಪಟ್ಟಿದ್ದರು. ಅದೇ ರೀತಿ ತಮಿಳುನಾಡಿನಲ್ಲಿ ಐಪಿಎಸ್ ಅಧಿಕಾರಿ ಸಾವನ್ನದ್ದಾರೆ. ಒಂದು ಐಎಎಸ್ ದಂಪತಿ ವಿಚ್ಚೇದನ ಪಡೆದಿದ್ದಾರೆ. ಆದರೆ, ನಾನು ನನ್ನ ಗಂಡ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಕುಟುಂಬ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಮೇಲಿನ ಮಾದರಿಯಲ್ಲಿ ಕುಟುಂಬಕ್ಕೆ ಅಡ್ಡಿಯಾಗುತ್ತಿರುವವರನ್ನ ಪ್ರಶ್ನಿಸಿ. ಇಲ್ಲವಾದರೆ ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಾದ ಮಹಿಳೆ, ನಾನು ಹೋರಾಡುತ್ತೇನೆ ಎಂದು ಡಿ. ರೂಪಾ ಪೋಸ್ಟ್ ಮಾಡಿದ್ದಾರೆ.
ದೇಶದ ಕುಟುಂಬ ಮೌಲ್ಯಗಳನ್ನು ಉಳಿಸಲು ಕೈಜೋಡಿಸಿ: ರಾಜ್ಯದಲ್ಲಿ ನನ್ನಂತೆ ಎಲ್ಲ ಮಹಿಳೆಯರಿಗೂ ಹೋರಾಟದ ಶಕ್ತಿ ಇರುವುದಿಲ್ಲ. ಅಂತ ಮಹಿಳೆಯರಿಗೆ ಧ್ವನಿಯಾಗಿರಿ. ಭಾರತವು ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ ಅದನ್ನ ಮುಂದುವರೆಸೋಣ. ಇನ್ನು ಭ್ರಷ್ಟಾಚಾರವನ್ನು ತಡೆಯಲು ಕೂಡ ಎಲ್ಲರೂ ಶ್ರಮಿಸಬೇಕು. ರಾಜ್ಯದಲ್ಲಿ ನಾನು ಯಾರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವವರನ್ನ ತಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.
ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ಟ್ವೀಟ್ ವಾರ್: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಡಿ. ರೂಪಾ ಅವರು ಹಲವು ಆರೋಪಗಳನ್ನು ಮಾಡಿದ್ದರು. ಆದರೆ, ಇದಕ್ಕೆ ಸರ್ಕಾರಕ್ಕೆ ದೂರು ಸಲ್ಲಿಕೆ ಮೂಲಕ ಉತ್ತರವನ್ನು ನೀಡಿದ್ದ ರೋಹಿಣಿ ಸಿಂಧೂರಿ ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ತಾವು ಸಾಮಾಜಿಕ ಜಾಲತಾಣದಲ್ಲಿ ನಾನು ಆಕ್ಟೀವ್ ಇಲ್ಲ ಎಂದು ಹೇಳಿದ್ದರು. ಹೀಗಾಗಿ, ಡಿ. ರೂಪಾ ಅವರು ಸಾಮಾಜಿಕ ಜಾಲತನಾಣದಲ್ಲಿ ಯಾವುದೇ ಆರೋಪಗಳನ್ನು ಮಾಡಿದ್ದರೂ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ, ಇಂದು ರೋಹಿಣಿ ಸಿಂಧೂರಿ ಅವರ ಅಭಿಮಾನಿಗಳು ಟ್ವಿಟರ್ ಮೂಲಕ ರೂಪಾ ಅವರಿಗೆ ತಿರುಗೇಟು ನೀಡಿದ್ದಾರೆ.
IAS vs IPS Fight: ಖಾಸಗಿ ಫೋಟೋ ಹಂಚಿಕೆ ಬಗ್ಗೆ ಪ್ರತಿಕ್ರಿಯೆ: ರೂಪಾಗೆ ಮಾನಸಿಕ ಸ್ಥಿಮಿತವಿಲ್ಲ ಎಂದ ರೋಹಿಣಿ ಸಿಂಧೂರಿ
ಡಿ ರೂಪಗೆ ಟ್ವಿಟರ್ ಮೂಲಕ ಟಾಂಗ್: ಐಪಿಎಸ್ ಅಧಿಕಾರಿ ಡಿ.ರೂಪ ತಮ್ಮ ಅಧಿಕೃತ ಕರ್ತವ್ಯ ಮೀರಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ದ ವಿವಾದಗಳನ್ನ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಅವರು ಮೇಲಿಂದ ಮೇಲೆ ಆರೋಪ ಮಾಡುತ್ತಿರುವದರಿಂದ ಸಾರ್ವಜನಿಕವಾಗಿ ನಕಾರಾತ್ಮಕವಾಗಿ ಬಿಂಬಿಸಲು ಮುಂದಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ರೋಹಿಣಿ ಸಿಂಧೂರಿ ಫ್ಯಾನ್ ಪೇಜ್ ನಿಂದ ಟ್ವೀಟ್ ಮಾಡಲಾಗಿದೆ.
ಸರಣಿ ಟ್ವೀಟ್ ಮೂಲಕ ಟಾಂಗ್ ಕೊಟ್ಟ ಅಭಿಮಾನಿಗಳು: ಚಾಮರಾಜನಗರ ಘಟನೆಯಲ್ಲಿ ಆಕೆ (ರೋಹಿಣಿ ಸಿಂಧೂರಿ) ಆರೋಪಿ ಎಂದು ಹೇಳುವ ಮೊದಲು ದಯವಿಟ್ಟು ವರದಿಯನ್ನು ಓದಿ.
- 2015 - 1 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಕಾರ್ಯಗತಗೊಳಿಸುವಲ್ಲಿ ಅನುಕರಣೀಯ ಕಾರ್ಯನಿರ್ವಹಣೆಗಾರ ಎಂದು ರೋಹಿಣಿ ಸಿಂಧೂರಿ ಕೇಂದ್ರದಿಂದ ಗುರುತಿಸಲ್ಪಟ್ಟಿದ್ದಾರೆ.
- 2018 - ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಡೆಸಿದ ಮೊದಲ ಮಹಿಳಾ ಅಧಿಕಾರಿ ಆಗಿದ್ದಾರೆ.
- 2019 - ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 2017ರಲ್ಲಿ 31 ನೇ ರ್ಯಾಂಕ್ ಪಡೆದಿದ್ದ ಹಾಸನ ಜಿಲ್ಲೆಯನ್ನು 2019ರಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
- 2021 - ಮೈಸೃಇನಲ್ಲಿ ಜಿಲ್ಲಾಧಿಕಾರಿ ಆಗಿದ್ದಾಗ ಕೋವಿಡ್ ವ್ಯಾಕ್ಸಿನೇಷನ್ ನೀಡಿಕೆಯಲ್ಲಿ ಎಲ್ಲ ಜಿಲ್ಲೆಗಳಿಗಿಂತ ಅಗ್ರಸ್ಥಾನದಲ್ಲಿತ್ತು.
ಆರೋಪಗಳನ್ನು ಮಾಡುವ ಮೂಲಕ ಸೂಪರ್ ಕಾಪ್ ಆಗಲು ಸಾಧ್ಯವಿಲ್ಲ:
- 2022 - ರೂಪಾ ಆರೋಪಿ X
- 2017 - ರೂಪಾ ಆರೋಪಿ Y
- 2022 - ರೂಪಾ ಆರೋಪಿ Z
ಹೀಗೆ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ರೋಹಿಣಿ ಸಿಂಧೂರಿ ಅವರ ಅಭಿಮಾನಿಗಳು ಡಿ. ರೂಪಾ ಅವರಿಗೆ ಟಾಂಗ್ ನೀಡಿದ್ದಾರೆ.