Asianet Suvarna News Asianet Suvarna News
breaking news image

ಮಂಗಳೂರಿನಲ್ಲಿ ಕಾಣೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಜೊತೆ ಪತ್ತೆ, ಯುವಕನ ಹಿನ್ನೆಲೆ ಕೇಳಿ ಶಾಕ್!

ನಾಪತ್ತೆಯಾಗಿದ್ದ ಹಿಂದೂ ಯುವತಿ ನಟೋರಿಯಸ್ ಮುಸ್ಲಿಂ ಯುವಕನ ಜೊತೆ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Dakshina kannada Missing Mangaluru Hindu Girl Found With notorious Muslim guy allegations love jihad gow
Author
First Published Jul 11, 2024, 11:28 AM IST

ಮಂಗಳೂರು (ಜು.11): ನಾಪತ್ತೆಯಾಗಿದ್ದ ಹಿಂದೂ ಯುವತಿ ನಟೋರಿಯಸ್ ಮುಸ್ಲಿಂ ಯುವಕನ ಜೊತೆ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮುಸ್ಲಿಂ ಯುವಕ‌‌ ಹಾಗೂ ಹಿಂದೂ ಯುವತಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, ಮುಸ್ಲಿಂ ಯುವಕನ ಹಿನ್ನೆಲೆ  ಕೇಳಿ ಶಾಕ್ ಆಗಿದೆ.

ನಟೋರಿಯಸ್ ಮಹಮ್ಮದ್ ಅಶ್ಪಕ್ ಎಂಬಾತನ ವಿರುದ್ಧ  ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಈತನ ವಿರುದ್ದ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಮಾತ್ರವಲ್ಲ, ಈತ  ಈಗಾಗಲೇ ಒಂದು ಮದುವೆಯಾಗಿದ್ದಾನೆ.

ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಲೆತ್ನಿಸಿದ ಖತರ್ನಾಕ್‌ ಚಡ್ಡಿಗ್ಯಾಂಗ್ ಮೇಲೆ ಮಂಗಳೂರಿನಲ್ಲಿ ಶೂಟೌಟ್

ಯುವತಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ ರವರಿಗೆ ದೂರು ನೀಡಿ ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದ ನನ್ನ ಮಗಳನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದರು.

Chitradurga: ಬಾರ್‌ಗೆ ಕನ್ನ ಹಾಕಿ ಎಣ್ಣೆ, ಹಣ ಕದ್ದ ಲೋಕಸಭಾ ಚುನಾವಣಾ ಅಭ್ಯರ್ಥಿ!

ಕರಾವಳಿ ಜಿಲ್ಲೆಯಲ್ಲಿ ಲವ್ ಜಿಹಾದ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ.  ಪ್ರೀತಿ , ಮದುವೆ ಹೆಸರಲ್ಲಿ ಹಿಂದೂ ಯುವತಿಯರ ಮತಾಂತರವಾಗುತ್ತಿದೆ. ಲವ್‌ ಜಿಹಾದ್‌ ಗೆ ಕಡಿವಾಣ ಹಾಕಲು ಪ್ರಬಲ ಕಾನೂನು ದೇಶದಲ್ಲಿ ಬರವುದು ಅಗತ್ಯ ಎಂದು ವಿಶ್ವಹಿಂದೂ ಪರಿಷದ್‌ ಶರಣ್ ಪಂಪ್ವೆಲ್‌ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios