ಹೊಸ ವರ್ಷವೂ ತಪ್ಪದ ಕಾವೇರಿ ಸಂಕಷ್ಟ, ತಮಿಳುನಾಡಿಗೆ ನೀರು ಹರಿಸಲು CWRC ಆದೇಶ!

ಒಂದೆಡೆ ರಾಜ್ಯದ ನಾಯಕರು ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ, ಕಾವೇರಿ ನೀರು ಪ್ರಾಧಿಕಾರ ಸಮಿತಿ ಮತ್ತೊಮ್ಮೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ.
 

CWRC order recommending release of Water too Tamil Nadu in january and february san

ನವದೆಹಲಿ (ಜ.18): ಹೊಸ ವರ್ಷದಲ್ಲೂ ಕರ್ನಾಟಕಕ್ಕೆ ಕಾವೇರಿ ನೀರಿ ಶಾಕ್‌ ಎದುರಾಗಿದೆ. ಗುರುವಾರ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ಪ್ರಾಧಿಕಾರ ಸಮಿತಿ ಸಭೆಯಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲೂ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ. ಜನವರಿ ತಿಂಗಳಲ್ಲಿ 1182 ಕ್ಯೂಸೆಕ್ ಹಾಗೂ ಫೆಬ್ರವರಿ ತಿಂಗಳಲ್ಲಿ 998 ಕ್ಯೂಸೆಕ್ ನೀರು ಬಿಡಲು ಸಿಡಬ್ಲೂಆರ್‌ಸಿ ಶಿಫಾರಸು ಮಾಡಿದೆ. ಹಿಂದಿನ 7.61 ಟಿಎಂಸಿ ಬ್ಯಾಕ್‌ಲಾಗ್‌ನೊಂದಿಗೆ ಜನವರಿ 19 ರಿಂದ ಮೇ ಅಂತ್ಯದವರೆಗೆ ಕರ್ನಾಟಕ 19 ಟಿಎಂಸಿ ನೀರನನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಆಗ್ರಹಿಸಿತ್ತು.

ದೆಹಲಿಯಲ್ಲಿ ನಡೆದ ಸಿಡಬ್ಲ್ಯುಆರ್‌ಸಿಯ 92ನೇ ಸಭೆಯಲ್ಲಿ ಕರ್ನಾಟಕ ಒಟ್ಟು ಏಳು ಅಂಶಗಳನ್ನು ಮುಂದಿಟ್ಟು, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಜನವರಿ 17ರ ವೇಳೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 52.592% ಆಗಿದೆ. ತಮಿಳುನಾಡಿನ ಮೆಟ್ಟೂರು ಅಣೆಕಟ್ಟು ಮತ್ತು ಭವಾನಿ ಸಾಗರ ಜಲಾಶಯವು ದೊಡ್ಡ ಮಟ್ಟದಲ್ಲಿ ನೀರಿನ ಸಂಗ್ರಹವನ್ನು ಹೊಂದಿದೆ. ಎರಡೂ ಜಲಾಶಯಗಳಿಂದ 50.805 ಟಿಎಂಸಿ ನೀರುಗಳಿದ್ದು ತಮಿಳುನಾಡಿನ ನೀರಾವರಿ ಅಗತ್ಯವನ್ನು ಪೂರೈಸಿಕೊಳ್ಳಲು ಇದು ಸಾಧ್ಯ. ಅದೇನೆ ಇದ್ದರೂ ಜನವರಿ ಅಂತ್ಯದವರೆಗೆ ತಮಿಳುನಾಡಿಗೆ ಈ ನೀರು ಯಾವುದೇ ಅನುಮಾನವಿಲ್ಲದೆ ಸಾಕಾಗುತ್ತದೆ ಎಂದು ಕರ್ನಾಟಕ ವಾದಿಸಿತ್ತು.

ನಮ್ಮ ನೀರಾವರಿ ಪರಿಸ್ಥಿತಿ ಈ ವರ್ಷ ಸಾಮಾನ್ಯವಾಗಿದ್ದರೆ, ತಮಿಳುನಾಡು ಆರಾಮದಾಯಕವಾದ ಪರಿಸ್ಥಿತಿಯಲ್ಲಿದೆ. ಶಾನ್ಯ ಮಾನ್ಸೂನ್ ಸಮಯದಲ್ಲಿ ತಮಿಳುನಾಡಿನಲ್ಲಿ ಪಡೆದ ಮಳೆ ತಮಿಳುನಾಡಿನ 3 ಜಲಾಶಯಗಳಲ್ಲಿ ಸಂಗ್ರಹವಾಗಿದೆ. ಪ್ರಸಕ್ತ ಜಲ ವರ್ಷದಲ್ಲಿ ಕರ್ನಾಟಕವು ತಮಿಳುನಾಡಿಗಿಂತ ಹೆಚ್ಚಿನ ಸಂಕಷ್ಟವನ್ನು ಅನುಭವಿಸಿದೆ. ಈಗಿರುವ ಬೆಳೆಗಳ ಅಗತ್ಯತೆಗಳು, ಕುಡಿಯುವ ನೀರಿನ ಅಗತ್ಯತೆಗಳು ಮತ್ತು ಕೈಗಾರಿಕಾ ಅಗತ್ಯಗಳನ್ನು ಈಗಿರುವ ಸಂಗ್ರಹಣೆಯಿಂದ ನಿರ್ವಹಿಸಲು ಕರ್ನಾಟಕವು ಬದ್ಧವಾಗಿದೆ, ಆದರೂ ಇದು ಸಂಪೂರ್ಣ ಬೇಡಿಕೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ಅನಿಯಂತ್ರಿತ ಜಲಾನಯನದಿಂದ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಾದ ಮಾಡಿತ್ತು.

CWRC Meeting: ಭಾರಿ ಮಳೆಗೆ ತಮಿಳುನಾಡು ಕೊಚ್ಚಿ ಹೋದ್ರೂ ಪರವಾಗಿಲ್ಲ, ನಮಗೆ 14 ಟಿಎಂಸಿ ಕಾವೇರಿ ನೀರು ಬೇಕು!

ಕೊನೆಗೆ ಸಮಿತಿಯು, ಜನವರಿಯಲ್ಲಿ ಕರ್ನಾಟಕವು ತಮಿಳುನಾಡಿಗೆ 1182 ಕ್ಯುಸೆಕ್‌ ಹಾಗೂ ಫೆಬ್ರವರಿ ತಿಂಗಳಿಗೆ 998 ಕ್ಯುಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

ಕರ್ನಾಟಕಕ್ಕೆ ಮತ್ತೆ ಅನ್ಯಾಯ, ತಮಿಳುನಾಡಿಗೆ 2700 ಕ್ಯೂಸೆಕ್ ನೀರು ಬಿಡಲು ಆದೇಶ

CWRC order recommending release of Water too Tamil Nadu in january and february san
 

Latest Videos
Follow Us:
Download App:
  • android
  • ios