Asianet Suvarna News

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಮಹೇಶ್ವರಯ್ಯ ನಿಧನ

* ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಇನ್ನಿಲ್ಲ
* ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಮಹೇಶ್ವರಯ್ಯ 
* ಅನಾರೋಗ್ಯದಿಂದ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನ
 

CUK Ex Vice Chancellor Prof Maheshwarayya Passes away at Dharwad rbj
Author
Bengaluru, First Published Jun 13, 2021, 6:57 PM IST
  • Facebook
  • Twitter
  • Whatsapp

ಧಾರವಾಡ, (ಜೂನ್.13): ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿಶ್ರಾಂತ ಕುಲಪತಿ ಪ್ರೊ. ಎಚ್.ಎಂ ಮಹೇಶ್ವರಯ್ಯ ನಿಧನರಾಗಿದ್ದಾರೆ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  70 ವರ್ಷದ ಮಹೇಶ್ವರಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು (ಭಾನುವಾರ) ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸೆರೆಳೆದರು.ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಪ್ರೊ. ಎಚ್. ಎಂ. ಮಹೇಶ್ವರಯ್ಯ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

ಸಂಚಾರಿ ವಿಜಯ್‌ಗೆ ಆಕ್ಸಿಡೆಂಟ್, ಚೀನಾಗೆ ಖಡಕ್ ವಾರ್ನಿಂಗ್; ಜೂ.13ರ ಟಾಪ್ 10 ಸುದ್ದಿ ವಿವರ!

ಕಲಬುರಗಿಯಲ್ಲಿರುವ ಕೇಂದ್ರೀಯ ವಿವಿಯ ಪ್ರಥಮ ಪೂರ್ಣಾವಧಿ ಕುಲಪತಿಗಳೆಂದು ಹೆಸರು ಪಡೆದಿದ್ದ ಪ್ರೊ. ಮಹೇಶ್ವರಯ್ಯ ಅವರು 2015ರ ಏಪ್ರಿಲ್‌ 20ರಿಂದ 2020ರ ನವ್ಹೆಂಬರ್ 13ರವರೆಗೆ ಐದು ವರ್ಷ ಆರು ತಿಂಗಳ ಕಾಲ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದರು. 

ಸಿಯುಕೆ ಕುಲಪತಿಗಳಾಗುವ ಮುಂಚೆ ಮೈಸೂರಿನಲ್ಲಿನ ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕರಾಗಿದ್ದರು. ಅದಕ್ಕೂ ಮುಂಚೆ ಧಾರವಾಡದ ಕರ್ನಾಟಕ ವಿವಿಯ ಭಾಷಾಶಾಸ್ತ್ರದ ಪ್ರಾಧ್ಯಾಪರಾಗಿದ್ದರು.

ಇನ್ನು ಇವರ ನಿಧನಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Follow Us:
Download App:
  • android
  • ios