ಕ್ರಿಕೆಟ್‌ ಭದ್ರತೆಗಿದ್ದ ಪೊಲೀಸರಿಗೆ ನೀಡಿದ ಮೊಸರನ್ನದಲ್ಲಿ ಹುಳ!

ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಮಧ್ಯಾಹ್ನ ನೀಡಿದ್ದ ಮೊಸರನ್ನದಲ್ಲಿ ಹುಳ ಪತ್ತೆಯಾಗಿದೆ.

Cricket world cup 2023 Worm in the curd rice given to the cricket security police bengaluru rav

ಬೆಂಗಳೂರು (ಅ.21) : ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ-ಪಾಕಿಸ್ತಾನ ಕ್ರಿಕೆಟ್‌ ಪಂದ್ಯದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಮಧ್ಯಾಹ್ನ ನೀಡಿದ್ದ ಮೊಸರನ್ನದಲ್ಲಿ ಹುಳ ಪತ್ತೆಯಾಗಿದೆ.

ಮೊಸರನ್ನದಲ್ಲಿ ಹುಳ ಇರುವ ಪೋಟೊ ಪೊಲೀಸರ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪೊಲೀಸರಿಗೆ ಹುಳ ಇರುವ ಆಹಾರ ನೀಡಿದವರ ವಿರುದ್ಧ ಸಾರ್ವಜನಿಕರು ಅಸಮಧಾನ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರು ಬಂದ್‌ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ರೈಸ್‌ ಬಾತ್‌ನಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಅದೃಷ್ಟವಶಾತ್‌ ಪೊಲೀಸರು ಆ ಬಾತ್‌ ಸೇವನೆಗೂ ಮುನ್ನ ಪೊಲೀಸರೊಬ್ಬರು ಬಾತ್‌ನಲ್ಲಿ ಇಲಿ ಇರುವ ವಿಚಾರವನ್ನು ಪೊಲೀಸರ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಭಾರೀ ಅನಾಹುತ ತಪ್ಪಿತ್ತು. ಇದೀಗ ಮತ್ತೊಮ್ಮೆ ಪೊಲೀಸರಿಗೆ ನೀಡಲಾದ ಆಹಾರದಲ್ಲಿ ಹುಳ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಆಸಿಸ್-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ; ಕ್ರೀಡಾಂಗಣದ ಸುತ್ತಲೂ ಪೊಲೀಸ್ ಸರ್ಪಗಾವಲು

Latest Videos
Follow Us:
Download App:
  • android
  • ios